Wednesday, November 18, 2026

ಪ್ರಾಯೋಗಿಕ ಆವೃತ್ತಿ

ಬಾಲ್ಯವಿವಾಹ : ಚಾಮರಾಜನಗರದಲ್ಲಿ ಅತಿ ಹೆಚ್ಚು


  • 14-15ನೇ ವಯಸ್ಸಿಗೆ ಮಕ್ಕಳನ್ನು ಹಡೆಯುತ್ತಿರುವ ಯುವತಿಯರು

  • ಬಾಲ್ಯವಿವಾಹಕ್ಕೆ ಬಡತನ ಮತ್ತು ಅನರಕ್ಷತೆಯೇ ಕಾರಣ

ಭಾರತವು ಸ್ವತಂತ್ರದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಸಂವಿಧಾನ ಜಾರಿಯಾಗಿ 72 ವರ್ಷಗಳನ್ನು ಪೂರೈಸಿದೆ. ಆದರೂ, ಇನ್ನೂ ಹಲವು ರೀತಿಯ ಪಿಡುಗುಗಳು ದೇಶವನ್ನು ಬಾಧಿಸುತ್ತಲೇ ಇವೆ. ಅವುಗಳಲ್ಲಿ ಮಹಿಳೆಯರ ಮೇಲೆನ ದೌರ್ಜನ್ಯಗಳು ಅಧಿಕ. ಅದರಲ್ಲೂ ಬಾಲ್ಯ ವಿವಾಹವು ಹೆಣ್ಣು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ. ಹದಿಹರೆಯದ ವಯಸ್ಸಿನಲ್ಲೇ ತಾಯ್ತನಕ್ಕೆ ದೂಡುತ್ತಿದೆ.

ದಕ್ಷಿಣ ಕರ್ನಾಟಕದಲ್ಲಿ ಚಾಮರಾಜನಗರ ಜಿಲ್ಲೆಯು ಬಾಲ್ಯವಿವಾಹದ ಪಿಡುಗನ್ನು ಹೆಚ್ಚಾಗಿ ಎದುರಿಸುತ್ತಿದೆ. ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿ ಬಾಲ್ಯ ವಿವಾಹಕ್ಕೆ ಬಲಿಯಾದ ಕೆಲವು ಹೆಣ್ಣು ಮಕ್ಕಳು ತಮ್ಮ 14 ಅಥವಾ 15ನೇ ವಯಸ್ಸಿನಲ್ಲಿಯೇ ಮಕ್ಕಳನ್ನು ಹಡೆದಿದ್ದಾರೆ. ಅವರಲ್ಲಿ ಒಬ್ಬಾಕೆ ಹೆರಿಗೆಯಾದ ಒಂದೆರಡು ದಿನಗಳಲ್ಲಿ ತನ್ನ ಮಗುವನ್ನು ಕಳೆದುಕೊಂಡಿದ್ದಳು. “ಸಾಮಾನ್ಯ ಹೆರಿಗೆ ಮತ್ತು ಮಕ್ಕಳನ್ನು ಹೆರಲು ನಾವು ತುಂಬಾ ಚಿಕ್ಕವರೆಂದು ವೈದ್ಯರು ನಮಗೆ ಹೇಳಿದರು. ಇದು ನಮ್ಮ ಮತ್ತು ಮಗುವಿನ ಜೀವನಕ್ಕೆ ಎದುರಾಗುವ ಅಪಾಯದ ಕುರಿತೂ ತಿಳಿಸಿದ್ದರು. ಆದರೆ, ಮಗು ಹೆರುವುದು ತಮಗೆ ಅನಿವಾರ್ಯವಾಗಿತ್ತು” ಎನ್ನುತ್ತಾರೆ ಮಗು ಕಳೆದುಕೊಂಡು ಆ ಪುಟ್ಟ ವಯಸ್ಸಿನ ತಾಯಿ.

ಆಕ್ಸಿಲಿಯರಿ ನರ್ಸಿಂಗ್ ಮಿಡ್‌ವೈಫರಿ (ಎಎನ್‌ಎಂ) ಮತ್ತು ಆಸ್ಪತ್ರೆಯ ಅಧಿಕಾರಿಗಳು ತಾಯಂದಿರ ವಯಸ್ಸನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಯೇ ಎಂದು ಹೇಳಲಾದ ಪ್ರಶ್ನೆಗೆ ಉತ್ತರಿಸಿರುವ ಬಾಲ ತಾಯಂದಿರು, ತಾಯಿ ಭಾಗ್ಯ ಯೋಜನೆಯಡಿ ನೀಡಲಾದ ತಾಯಿ ಕಾರ್ಡ್‌ನಲ್ಲಿ ತಮ್ಮ ವಯಸ್ಸನ್ನು ತೋರಿಸಿದ್ದಾರೆ. ಅವರನ್ನು ದೊಡ್ಡವರಂತೆ ತೋರಿಸಲು ವಯಸ್ಸನ್ನು ತಿದ್ದಲಾಗಿದೆ. “ಎಎನ್‌ಎಂಗಳು ತಾಯಿ ಕಾರ್ಡ್‌ನಲ್ಲಿ ನಮ್ಮ ವಯಸ್ಸನ್ನು 20 ಅಥವಾ 21 ಎಂದು ಬದಲಾಯಿಸಿದ್ದಾರೆ” ಎಂದು ಅವರು ಹೇಳಿಕೊಂಡಿದ್ದಾರೆ.

ಬಾಲ್ಯವಿವಾಹ ನಿಷೇಧ ಕಾಯಿದೆ (ಪಿಸಿಎಂಎ), 2006ರ ಅಡಿಯಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದೆ. ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಕರ್ನಾಟಕದ ಒಳನಾಡಿನಲ್ಲಿ ದುರ್ಬಲ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದ ಕೂಡಲೇ ವಿವಾಹದ ಬಂಧನಕ್ಕೆ ದೂಡಲಾಗುತ್ತಿರುವ ಅಸಂಖ್ಯಾತ ಪ್ರಕರಣಗಳಿವೆ.

‘ಬಾಲ್ಯ ವಿವಾಹಕ್ಕೆ ಬಡತನವೇ ಕಾರಣ’

ಚಾಮರಾಜನಗರ ಜಿಲ್ಲೆಯ 17 ಗ್ರಾಮ ಪಂಚಾಯಿತಿಗಳ 44 ಗ್ರಾಮಗಳಲ್ಲಿ ಆಗಸ್ಟ್ 2021 ರಿಂದ ಜನವರಿ 2022ರವರೆಗೆ ಬಾಲ್ಯ ವಿವಾಹದ ಕುರಿತು ಅಜೀಂ ಪ್ರೇಮ್‌ಜಿ ಫೌಂಡೇಶನ್ (ಎಪಿಎಫ್) ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಂದ 530 ಬಾಲ್ಯವಿವಾಹಗಳಾಗಿವೆ ಎಂದು ಯೋಜನಾ ನಿರ್ದೇಶಕ ಮತ್ತು ಕಾರ್ಯದರ್ಶಿ, ಪೀಪಲ್ಸ್ ಮೂವ್‌ಮೆಂಟ್ ಫಾರ್ ಸೆಲ್ಫ್-ರಿಲಯನ್ಸ್ (ಪಿಎಂಎಸ್‌ಆರ್), ಅಡಿಸ್ ಅರ್ನಾಲ್ಡ್ ಹೇಳಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಬಡತನ ಮತ್ತು ಅನರಕ್ಷತೆಯೇ ಕಾರಣವಾಗಿದೆ. ಹೆಚ್ಚಿನ ಕೂಲಿ ಕಾರ್ಮಿಕರು ತಮ್ಮ ಹೆಣ್ಣು ಮಕ್ಕಳು ಒಮ್ಮೆ ಪ್ರೌಢಾವಸ್ಥೆಗೆ ಬಂದರೆ, ಆಕೆಗೆ ವಿವಾಹ ಮಾಡಲು ಮುಂದಾಗತ್ತಾರೆ. ಆಕೆ ತನ್ನ ಗಂಡನ ಮನೆಯಲ್ಲಿ ಸುರಕ್ಷಿತವಾಗಿರುತ್ತಾಳೆಂದು ಅವರು ಭಾವಿಸುತ್ತಾರೆ.

“ಹನೂರು ತಾಲೂಕಿನ ಶೀಲಾ ಎಂಬುವರು 14ನೇ ವಯಸ್ಸಿನಲ್ಲಿ ವಿವಾಹವಾಗಿದ್ದು, ಕೌಟುಂಬಿಕ ಹಿಂಸೆಯಿಂದ ಪತಿಗೆ ವಿಚ್ಛೇದನ ನೀಡಲು ಬಯಸಿದ್ದರು. ಅದಕ್ಕಾಗಿ ಆಕೆಯ ಪೋಷಕರು ಗಂಡನ ಮನೆಯವರಿಂದ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಹೇಳಿದ್ದರು. ಕುಲ ಪಂಚಾಯ್ತಿಯು ಅದನ್ನು ನಿರ್ಧರಿಸಿತ್ತು. ಅವರ ಪ್ರಕರಣ ನ್ಯಾಯಾಲಯದವರೆಗೂ ಹೋಗಲೇ ಇಲ್ಲ. ಜಿಲ್ಲೆಯ ಸುಮಾರು 30%ರಷ್ಟು ಬಾಲ್ಯ ವಿವಾಹಗಳು ಇದೇ ರೀತಿಯಲ್ಲಿ ವಿಚ್ಛೇದನಕ್ಕೆ ಒಳಗಾಗುತ್ತವೆ. ಗಂಡನಿಂದ ದೂರವಾದ ವಿವಾಹಿತ ಬಾಲಕಿಯರು ಇಡೀ ಜೀವನವನ್ನು ತಮ್ಮ ಮಕ್ಕಳನ್ನು ಬೆಳೆಸಲು ಕಳೆಯುತ್ತಾರೆ” ಎಂದು ಎಪಿಎಫ್‌ನ ಸಿದ್ದರಾಜು ಹೇಳಿದ್ದಾರೆ.

“ನಮ್ಮ ಪೋಷಕರು ನಮಗಿಂತ ಕನಿಷ್ಠ 10 ವರ್ಷ ಹಿರಿಯ ಪುರುಷರೊಂದಿಗೆ ನಮಗೆ ಮದುವೆ ಮಾಡಿದರು. ನಾವು ಮನೆಯೊಳಗೆ ಉಳಿದುಹೋಗುತ್ತೇವೆ. ಯಾರೊಂದಿಗೂ ಮಾತನಾಡಬೇಡಿ, ಅಡುಗೆ ಮಾಡಿ ಕುಟುಂಬವನ್ನು ನೋಡಿಕೊಳ್ಳಿಯೆಂದು ನಮಗೆ ಎಲ್ಲರೂ ಹೇಳುತ್ತಾರೆ. ನಾವು ಶಾಲೆಗೆ ಹೋಗಬೇಕು, ಸ್ನೇಹಿತರೊಂದಿಗೆ ಆಟವಾಡಬೇಕು ಮತ್ತು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಬೇಕು ಎಂದು ಬಯಸಿದ್ದೆವು. ಆದರೆ, ಎಲ್ಲವನ್ನೂ ಕಸಿದುಕೊಳ್ಳಲಾಯಿತು,” ಎಂದು ಬಾಲ್ಯವಿವಾಹಕ್ಕೆ ಬಲಿಯಾದ ಸವಿತಾ ಹೇಳಿದ್ದರೆ.

15ನೇ ವಯಸ್ಸಿನಲ್ಲಿ ವಿವಾಹವಾದ ಲತಾ (21) ಆರು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳ ತಾಯಿ. ಕುಡಿತದ ವ್ಯಸನಿಯಾಗಿದ್ದ ಆಕೆಯ ಪತಿ ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆ ತನ್ನ ಮಕ್ಕಳಿಗಾಗಿ ಇಡೀ ಜೀವನವನ್ನು ಒಂಟಿಯಾಗಿ ದೂಡಬೇಕಾಗಿದೆ.

“ಸರ್ಕಾರ, ಸಮುದಾಯ ಮತ್ತು ನ್ಯಾಯಾಲಯಗಳು ಈ ಸಾಮಾಜಿಕ ಅನಿಷ್ಟವನ್ನು ಕೊನೆಗೊಳಿಸಲು ಸಹಕರಿಸುತ್ತಿವೆ. ನಾಲ್ಯ ವಿವಾಹಿತ ಮಹಿಳೆಯರಿಗೆ ಶಿಕ್ಷಣದ ಹೊರತಾಗಿ ಕೌಶಲ್ಯ ಮತ್ತು ವೃತ್ತಿಪರ ತರಬೇತಿಯಲ್ಲಿ ತರಬೇತಿ ನೀಡಲಾಗುತ್ತಿದೆ” ಎಂದು ಸಿಆರ್‌ಟಿ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ ಎನ್‌ವಿ ಹೇಳಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ