Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನ| ಅಮೆರಿಕ ಕಳವಳ

“ಮಾರ್ಚ್‌ 11ರಂದು ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಡಿಸಿರುವುದಕ್ಕೆ ನಾವು ಕಳವಳಗೊಂಡಿದ್ದೇವೆ. ಕಾಯ್ದೆಯನ್ನು ಹೇಗೆ ಅನುಷ್ಠಾನಗೊಳಿಸಲಾಗುವುದರ ಬಗ್ಗೆ ನಾವು ನಿಕಟವಾಗಿ ಮೇಲ್ವಿಚಾರಣೆಗೊಳಿಸುತ್ತಿದ್ದೇವೆ. ಎಲ್ಲ ಸಮುದಾಯಗಳಿಗೆ ಮೂಲಭೂತ ಪ್ರಜಾಸತ್ತಾತ್ಮಕ ತತ್ವಗಳ ಕಾನೂನಿನಡಿ ಧಾರ್ಮಿಕ ಸ್ವಾತಂತ್ರ ಹಾಗೂ ಸಮಾನವಾಗಿ ನಡೆಸಿಕೊಳ್ಳಬೇಕು” ಎಂದು ಅಮೆರಿಕದ ವಕ್ತಾರರಾದ ಮ್ಯಾಥ್ಯೋ ಮಿಲ್ಲರ್ ತಿಳಿಸಿದ್ದಾರೆ.

ಅಮೆರಿಕದಲ್ಲಿನ ಹಿಂದು ಸಮುದಾಯಗಳು ಸಿಎಎಯನ್ನು ಸ್ವಾಗತಿಸಿದ ನಂತರ ಬೈಡೆನ್‌ ಆಡಳಿತದಿಂದ ಹೇಳಿಕೆ ಬಂದಿದೆ.

ಮಾರ್ಚ್‌ 11 ರಂದು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದು, ಕಾಯ್ದೆಯನ್ವಯ 2014 ಡಿಸೆಂಬರ್‌ 31 ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಗಮಿಸಿದ ಮುಸ್ಲಿಂಯೇತರ ವಲಸಿಗರಿಗೆ ದಾಖಲೆ ರಹಿತ ಪೌರತ್ವ ದೊರಕಿಸಿಕೊಡಲಾಗುತ್ತದೆ.

ಪ್ರತಿಪಕ್ಷಗಳ ಪ್ರತಿಭಟನೆಯ ನಂತರ ಹೇಳಿಕೆ ಹೊರಡಿಸಿರುವ ಕೇಂದ್ರ ಸರ್ಕಾರ, ಸಿಎಎ ಕಾಯ್ದೆ ಬಗ್ಗೆ ಮುಸ್ಲಿಂ ಸಮುದಾಯ ಚಿಂತಿಸಬೇಕಾಗಿಲ್ಲ. ಸಿಎಎ ಮುಸ್ಲಿಂ ಸಮುದಾಯದ ಪೌರತ್ವಕ್ಕೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ. ಹಿಂದೂ ಸಮುದಾಯದಂತೆ ಮುಸ್ಲಿಂ ಸಮುದಾಯ ಕೂಡ ಸಮಾನ ಅವಕಾಶ ಹೊಂದಿರುತ್ತಾರೆ ಎಂದು ತಿಳಿಸಿತ್ತು.

ಸಿಎಎ ಜಾರಿಯ ಬಗ್ಗೆ ಪಾಕಿಸ್ತಾನ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ಕಾನೂನು ಸ್ವಾಭಾವತಃ ತಾರತಮ್ಯದಿಂದ ಕೂಡಿದ್ದು, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ ಎಂದು ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!