Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ| ಮಾ.3ರಿಂದ ಸಿಐಟಿಯು ಅಹೋರಾತ್ರಿ ಧರಣಿ

ಕೇಂದ್ರ ಸರ್ಕಾರದ ಬಜೆಟ್ ಬಂಡವಾಳ ಶಾಹಿಗಳ ಪರವಾಗಿದ್ದು, ರಾಜ್ಯ ಸರ್ಕಾರವು ಜನಪರ ಆರ್ಥಿಕ ನೀತಿ ಜಾರಿಗೊಳಿಸಿ, ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ಮಾರ್ಚ್ 3ರಿಂದ 7ರವರೆಗೆ ಅಹೋರಾತ್ರಿ ಧರಣಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 3ರಿಂದ ಹಂತ ಹಂತವಾಗಿ ನಡೆಸಲಿದ್ದು, ಮೊದಲ ದಿನ ಗ್ರಾ.ಪಂ ಕಾರ್ಮಿಕರು, ಮಾ.4ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾ.5ರಂದು ಕಟ್ಟಡ ನಿರ್ಮಾಣ ಕಾರ್ಮಿಕರು, ಮಾ.6ರಂದು ಅಸಂಘಟಿತ ಕಾರ್ಮಿಕರು, ಮಾ.7ರಂದು ಅಂಗನವಾಡಿ ಕಾಮಿರ್ಕರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯಿಂದ ಸುಮಾರು 6000 ಜನರಿಗೂ ಹೆಚ್ಚಿನ ಕಾರ್ಮಿಕರು ಭಾಗವಹಿಸಲಿದ್ದು, ಒಟ್ಟಾರೆಯಾಗಿ 50 ಸಾವಿರ ಕಾರ್ಮಿಕರು ಧರಣಿಯಲ್ಲಿ ತಮ್ಮ ಹಕ್ಕೊತ್ತಾಯ ಮಂಡಿಸುವರು ಎಂದು ಹೇಳಿದರು.

ರಾಜ್ಯದ ಕಾರ್ಮಿಕರ ಬೇಡಿಕೆಗಳು ಧೀರ್ಘಕಾಲದಿಂದ ಇತ್ಯರ್ಥವಾಗದೇ ಉಳಿದಿದ್ದು, ಶ್ರಮಿಕ ವರ್ಗ ಮಾರುಕಟ್ಟೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು. ಆದರೆ ರಾಜ್ಯ ಸರ್ಕಾರವೂ ಕೇಮದ್ರ ಸರ್ಕಾರದಂತೆ ಕಾರ್ಪೋರೇಟ್ ನೀತಿ ಅನುಸರಿಸುತ್ತಿದ್ದು ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕೂಡಲೇ ದುಡಿಯುವ ವರ್ಗದ ಹಕ್ಕುಗಳನ್ನು ನಾಶ ಮಾಡುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸಿ, ಸಂಘಟಿತ, ಅಸಂಘಟಿತ ಪತ್ರಿಕೋದ್ಯಮ, ಗಿಗ್, ಗುತ್ತಿಗೆ ಹಾರೂ ಖಾಯಮೇತರ ಕಾರ್ಮಿಕರ, ಕೃಷಿ ರಂಗ, ಶಿಕ್ಷಣದ ಹೊಸ ನೀತಿ ಸೇರಿದಂತೆ ೩೭ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಧ್ಯಕ್ಷ ಎಂ.ಎಂ.ಶಿವಕುಮಾರ್, ಉಪಾಧ್ಯಕ್ಷೆ ಪ್ರಮೀಳ ಕುಮಾರಿ, ಕಾರ್ಯದರ್ಶಿಗಳಾದ ಎ.ಬಿ.ಶಶಿಕಲಾ, ಚಂದ್ರಶೇಖರ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ