Thursday, November 19, 2026

ಪ್ರಾಯೋಗಿಕ ಆವೃತ್ತಿ

ಶಾಸ್ತ್ರೀಯ ಕಲೆಗಳಿಗೆ ಜಾನಪದವೇ ತಾಯಿ ಬೇರು : ಡಾ.ಕೃಪಾ ಫಡಕೆ

ಲಲಿತಕಲೆ ಮತ್ತು ಶಾಸ್ತ್ರೀಯ ಕಲೆಗಳಿಗೆ ಜಾನಪದ ತಾಯಿ ಬೇರಾಗಿದೆ ಎಂದು ನೃತ್ಯಗಿರಿ ಪ್ರದರ್ಶಕ ಕಲೆಗಳ ಕೇಂದ್ರದ ನಿರ್ದೇಶಕಿ ವಿದುಷಿ ಡಾ.ಕೃಪಾ ಫಡಕೆ ಹೇಳಿದರು.

ಮಂಡ್ಯ ನಗರದ ಪಿಇಎಸ್ ವಿವೇಕಾನಂದ ರಂಗಮಂದಿರದಲ್ಲಿ ನೃತ್ಯಕೃಪಾ ಕಲಾ ಶಾಲೆ ಆಯೋಜಿಸಿದ್ದ ನೃತ್ಯಧಾರ-2023, ಜಾನಪದ ಲೋಕ – ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ರಕ್ತದಾನ-ನೇತ್ರದಾನ ಕಾರ್ಯಕ್ರಮವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಲಲಿತಕಲೆ ಮತ್ತು ಶಾಸ್ತ್ರೀಯ ಕಲೆಗಳಿಗೆ ಶಾರೀರ ಹಾವಭಾವ ಮುಖ್ಯ, ಜಾನಪದ ಕಲಿಕೆಗೆ ವಿಶೇಷ ಆಸಕ್ತಿ ಮತ್ತು ಕಟ್ಟುನಿಟ್ಟಿನ ಪಾಲನೆ ಅವಶ್ಯ, ಜಾನಪದಕ್ಕೆ ಅದರದೇ ಆದ ಸೊಗಡಿದೆ, ಸಹಜವಾಗಿದ್ದರೂ ತರಬೇತಿ ಅಗತ್ಯ, ನಗರದಲ್ಲಿ ಇಂದು ಸರಳವಾಗಿ ಜಾನಪದ ಜಾತ್ರೆ ನಡೆಯುತ್ತಿದೆ ಎಂದರು.

ಸ್ಪರ್ಧಾತ್ಮಕ ಕಲಾ ಜಗತ್ತಿನಲ್ಲಿ ಕಲೆ ಅನಾವರಗೊಳ್ಳಬೇಕು, ಹಿರಿಯನ್ನು ಗೌರವಿಸುವುದು ಸೂಕ್ತ, ನೃತ್ಯ ಕೃಪಾ ಕಲಾ ಶಾಲೆ ಉತ್ತಮವಾಗಿ ಬೆಳೆದು, ಸಾವಿರಾರು ಮಕ್ಕಳಿಗೆ ಜಾನಪದ, ನೃತ್ಯಕಲೆಗಳನ್ನು ಧಾರೆಯೆರೆಯಲಿ. ಭರತ ನಾಟ್ಯ, ಶಾಸ್ತ್ರೀಯ ನ್ಯತ್ಯ ಕಲೆಗಳು, ಜನರಿಂದ ಜನರಿಗೆ ವಿಸ್ತಾರಗೊಳ್ಳಲಿ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಾ ವಿದ್ಯಾರ್ಥಿಗಳು ಬೆಳೆಯಲಿ ಎಂದು ಶುಭ ಕೊರಿದರು.

ಸಾಹಿತಿ ಪ್ರದೀಪಕುಮಾರ ಹೆಬ್ರಿ ಮಾತನಾಡಿ, ನೃತ್ಯ, ಕಲೆಗಳನ್ನು ಕಲಿಯುವವರು ಸಾಕಷ್ಟು ಇದ್ದಾರೆ, ಕಲಿಯಲಿಕ್ಕೆ ಬೇಕಾಗಿರುವ ಅವಕಾಶಗಳು ಮತ್ತು ಸಂಪನ್ಮೂಲ ಲಭಿಸುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ನೃತ್ಯ ಕೃಪಾ ಕಲಾ ಶಾಲೆಯ ನಿರ್ದೇಶಕಿ ವಿದುಷಿ ಚಂದನಾ ಮೋಹನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಜಾನಪದ ಗಾಯಕ ಕೀಲಾರ ಕೃಷ್ಣೇಗೌಡ, ಮೈಸೂರಿನ ನೃತ್ಯ ವಿದುಷಿ ನಾಗಶ್ರೀಫಣೀಂದ್ರ ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ