Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ವಚ್ಚವಾದ ರಾಜಕಾರಣದ ಅವಶ್ಯಕತೆಯಿದೆ : ಸಹಕಾರ ಸಚಿವ ಕೆ.ಎನ್ ರಾಜಣ್ಣ

nudikarnataka.comಮಧುಗಿರಿ / ದೊಡ್ಡೇರಿ : ಇಂದಿನ ರಾಜಕೀಯ ವ್ಯವಸ್ಥೆ ಯಲ್ಲಿ ಸ್ವಚ್ಚವಾದ ರಾಜಕಾರಣದ ಅವಶ್ಯಕತೆಯಿದ್ದೂ ಯುವಕರು ರಾಜಕೀಯದಲ್ಲಿ ತೊಡಗಿಸಿಕೊಳ್ಳುವಂತಾಗ ಬೇಕಾಗಿದೆ ಎಂದು ಸಹಕಾರ ಸಚಿವರಾದ ಕೆ.ಎನ್ ರಾಜಣ್ಣ ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ನೂತನ ವಾಲ್ಮೀಕಿ ಭವನ ನಿರ್ಮಾಣ , ಗ್ರಾ.ಪಂ ಸಭಾಂಗಣದ ನವೀಕರಣ ಹಾಗೂ ಗ್ರಾಮಸ್ಥರಿಂದ ಆಯೋಜಿಸಿದ್ದ ಸನ್ಮಾನ , ಹೋಬಳಿಯ 9 ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ನೀಡುವ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ತಲೆ ತಲಾಮಾರುಗಳ ನಂತರ ಜನಪರವಾಗಿರುವ ಮನಸ್ಥಿತಿ ಹೊಂದಿರುವಂತಹ ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದ ಜನರ ಕಷ್ಟ ಸುಖ ಅರಿತವರುವಂತಹ ಯುವಕರ ಅಗತ್ಯತೆ ಇಂದೂ ಇದೆ. ಅದಷ್ಟೂ ಯುವಕರಿಗೆ ಹೆಚ್ವು ಜವಾಬ್ದಾರಿ ಯುತ ಸ್ಥಾನ ಮಾನಗಳನ್ನು ಕೊಟ್ಟು ಬೆಳೆಸಬೇಕಾಗಿರುವುದು ಹಿರಿಯ ನಾಯಕರ ಕರ್ತವ್ಯವಾಗಿದೆ.

1998 ರ ವಿಧಾನ ಪರಿಷತ್ ಸದಸ್ಯ ಸ್ಥಾನದ ನಂತರ ಕ್ಷೇತ್ರದಲ್ಲಿಯೇ ಅತೀ ಹೆಚ್ಚು ಮತದಾರರನ್ನು ಹೊಂದಿರುವ ದೊಡ್ಡೇರಿಯ 2004ರಲ್ಲಿ ಮತದಾರರು ನನಗೆ ರಾಜಕೀಯ ಜನ್ಮ ನೀಡಿದರು. 2008ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಅತೀ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದೆ 2013 ಮತ್ತೆ ಕ್ಷೇತ್ರದ ಶಾಸಕನಾದೆ 2018 ರಲ್ಲಿ ವೈಯಕ್ತಿಕ ತಪ್ಪುಗಳಿಂದ ಮತ್ತೆ ಪರಾಜಿತನಾಗಿ 2023ರ ಚುನಾವಣೆಯಲ್ಲಿ ಈ ಹೋಬಳಿಯಲ್ಲಿ ಲೀಡ್ ಬರುವುದಿಲ್ಲವೆಂದು ಕೆಲ ವಿರೋಧಿಗಳು ಭಾಷಣ ಬಿಗಿದರು ಸುಮಾರು ನಾಲ್ಕು ಮೂಕ್ಕಾಲು ಸಾವಿರ ಮತಗಳು ಗಳಿಕೆಯಾಗಿ ಒಟ್ಟಾರೆಯಾಗಿ 35523 ಬಾರಿ ಮತಗಳ ಅಂತರದಿಂದ ಜಯಶೀಲನಾಗುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರ ಸಚಿವನಾಗಿದ್ದೇನೆ.

ಈ ಹಿಂದೆ ಯಾರೂ ಸಹ ಗುಡಿಸಲಲ್ಲಿ ವಾಸ ಮಾಡಬಾರದೆಂಬ ಉದ್ದೇಶದಿಂದ ಸುಮಾರು 16400 ಮನೆಗಳ ನಿರ್ಮಾಣ ಹಾಗೂ ಅಧಿಕಾರಿಗಳೇ ಜನರ ಮನೆಗಳ ಬಳಿ ತೆರಳಿ ಸರಕಾರಿ ಸೌಲಭ್ಯಗಳನ್ನು ತಲುಪಿಸುತ್ತಿದ್ದ ಕೆಲಸ ಕಾರ್ಯಗಳು ಕ್ಷೇತ್ರದಲ್ಲಿ ನಡೆದಿವೆ.

ಮುಂದಿನ ದಿನಗಳಲ್ಲಿ ಸರಕಾರಿ ಜಮೀನು ಲಭ್ಯವಿಲ್ಲದೆ ಹೋದರೆ ಖಾಸಗಿ ಜಮೀನುಗಳನ್ನು ಖರೀದಿಸಿ ನಿವೇಶನ ಹಂಚುವ ಕೆಲಸ ಮಾಡಲಾಗುವುದು , ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ವಸತಿ ಶಾಲೆಗಳಿದ್ದರು ಸಹ ಈ ಹೋಬಳಿಗೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಂಜೂರಾತಿ ಹಾಗೂ ದೊಡ್ಡೇರಿಯ ಆಸ್ಪತ್ರೆ ಯನ್ನು ಮೇಲ್ದರ್ಜೆಗೆ ಏರಿಸುವುದರ ಜತೆಗೆ ಇಲ್ಲಿಯೇ ರೈತ ಸಂಪರ್ಕ ಕೇಂದ್ರದ ನಿರ್ಮಾಣ ಮಾಡಲಾಗುವುದು.

ಬಸವಣ್ಣನವರು ಹೇಳಿದಂತೆ ಯಾವಾಗಲೂ ನಿಂದಕರು ಇರ ಬೇಕಯ್ಯ ಎಂಬಂತೆ ನಿಂದಕರು ಇದ್ದರೆ ಮಾತ್ರ ಸತ್ಯಾಸತ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಲು ಸಾಧ್ಯವಾಗುತ್ತದೆ. ಮತದಾರರು ಯಾರೆಲ್ಲಾ ನನ್ನ ಕಷ್ಟ ಕಾಲದಲ್ಲಿ ನೆರವಾಗಿದ್ದಾರೊ ಅವರ ಋಣ ತೀರಿಸೊ ಕೆಲಸ ಮಾಡುತ್ತೇನೆ.

ಸಾರ್ವಜನಿಕ ಆಸ್ತಿಗಳು ಹೆಚ್ಚು ಸೃಷ್ಟಿಯಾದರೆ ಮುಂದಿನ ಪೀಳಿಗೆ ಹೆಚ್ಚು ಅನೂಕೂಲ ವಾಗುತ್ತದೆ ಅವುಗಳನ್ನು ಸಂರಕ್ಷಿಸಲು ಎಲ್ಲಾರೂ ಕೈ ಜೋಡಿಸ ಬೇಕು. ಲೋಕಸಭಾ ಸದಸ್ಯರಾದ ಬಸವರಾಜುರವರು ಕೋರ , ಚಿಕ್ಕತೊಟ್ಲಕೆರೆ , ಮಲ್ಲ ಸಂದ್ರ , ಬಿದರೆ , ಅಂಕಸಂದ್ರ , ಪುಲಮಘಟ್ಟ , ಇನ್ನಿತರೆ ಗ್ರಾಮಗಳಲ್ಲಿ ಎಂ ವಿ ಎಸ್ ಸ್ಟೇಷನ್ ಗಳನ್ನು ನಿರ್ಮಿಸಿ ರೈತರಿಗೆ ಸಹಕಾರಿಯಾಗಿದ್ದಾರೆ.

ತಾಲೂಕಿನಲ್ಲಿ ನೂತನವಾಗಿ ಗರಣಿ , ಕವಣದಾಲ ವಿದ್ಯುತ್ ಸ್ಥಾವರಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಐದು ವರ್ಷಗಳಿಂದ ಕುಂಠಿತವಾಗಿರುವ ಎತ್ತಿನ ಹೊಳೆ ಯೋಜನೆಗೆ ಚುರುಕು ಮುಟ್ಟಿಸಿ ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳಿಗೆ ನೀರು ಹರಿಸಲಾಗುವುದು.

ಕೊರೊನಾ ಸಂಧರ್ಭದಲ್ಲಿ ಸಿದ್ದರಾಮಯ್ಯ ನವರು ನೀಡಿದ ಅನ್ಯಭಾಗ್ಯ ಯೋಜನೆ ಸಾಕಾಷ್ಟು ಜನರ ಕೈ ಹಿಡಿಯಿತು , ಜನಸಂಖ್ಯೆ ಯಲ್ಲಿ ಅಜಾಗಜಾಂತರ ವ್ಯತ್ಯಾಸವಾಗುತ್ತಿದೆ ಆಹಾರ ಭದ್ರತಾ ಕಾಯ್ದೆಯ ಜಾರಿಯಿಂದಾಗಿ ಇಂದೂ ದೇಶದಲ್ಲಿ ಯಾರೂ ಹಸಿವಿನಿಂದ ಬಳಲುತ್ತಿಲ್ಲಾ.

ಮಳೆ ಹೆಚ್ಚಾದರೆ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಲಿವೆ , ರೈತ ಉತ್ಪಾದನೆ ಮಾಡುವಂತಹ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲಾ , ಹಾಲು ಉತ್ಪಾದನೆಯು ವಿವಿಧ ಕಾರಣಗಳಿಂದ ಕುಂಠಿತ ವಾಗಿದೆ , ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚು ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿದ್ದೇನೆ ಹಳ್ಳಿಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಲು ಕ್ರಮ ಕೈಗೊಳ್ಳಲಾಗುತ್ತಿದೆ.

ಕಳೆದ ಚುನಾವಣೆ ಯಲ್ಲಿ ನಾನು ಗ್ರಾಮಗಳಿಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ .ನಾವು ಯಾವಾಗಲೂ ಸತ್ಯದ ಪರವಾಗಿರುವವರು ಅಸಹಾಯಕರ ಪರವಾಗಿ ನಿಲ್ಲಬೇಕು ಚುನಾವಣೆ ಮುಗಿದ ನಂತರ ಎಲ್ಲಾರನ್ನೂ ಸಮನಾಗಿ ಕಾಣಬೇಕು

ಅಧಿವೇಶನ ಮುಗಿದ ನಂತರ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಲಿದ್ದೇನೆ.ಇನ್ನೊಂದು ವಾರದಲ್ಲಿ 1 ರಿಂದ 10ನೇ ತರಗತಿಯ ತಾಲೂಕಿನ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಗಳನ್ನು ತಲುಪಿಸುವ ಜವಾಬ್ದಾರಿ ನನ್ನದಾಗಿದ್ದು ಸರಕಾರಿ ಸೌಲಭ್ಯ ಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು , ಶಾಲಾ ಕೊಠಡಿ , ಶೌಚಾಲಯ , ಅಂಗನವಾಡಿಗಳ ದುರಸ್ಥಿ ಮತ್ತು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಮಾತನಾಡಿ ಕ್ಷೇತ್ರಕ್ಕೆ ಎತ್ತಿನಹೊಳೆಯ ನೀರು ಹರಿದು ಎಲ್ಲಾ ಕೆರೆಗಳು ತುಂಬಿ ಹರಿದರೆ ಈ ಭಾಗಗಳ ರೈತರು ತಮ್ಮ ಜಮೀನುಗಳಲ್ಲಿ ಬಂಗಾರದ ಬೆಳೆಗಳನ್ನು ಬೆಳೆಯಬಹುದು.
ಸಮುದ್ರಕ್ಕೆ ಹರಿಯುವ ನೇತ್ರಾವತಿ , ಕುಮಾರಧಾರ ನದಿಗಳಿಂದ ಬರುವ ನೀರನ್ನು ತಡೆಯುವ ಉದ್ದೇಶದಿಂದ 1ಲಕ್ಷದ 36 ಸಾವಿರ ಕೋಟಿ ರೂಗಳ ವೆಚ್ಚದಲ್ಲಿ ದಕ್ಷಿಣ ಕರ್ನಾಟಕದ ಎಲ್ಲಾ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಯ ಅಂದಾಜು ಪಟ್ಟಿ ತಯಾರಿಸಲಾಗಿದೆ. 125 ಟಿ ಎಂ ಸಿ ನೀರನ್ನು ತರಲು ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಮಧುಗಿರಿ , ಕೊರಟಗೆರೆ ಸೇರಿ 3.5 ಟಿಎಂಸಿ ನಿಗಧಿಯಾಗಿದ್ದು ಅದರಲ್ಲಿ 1.5 ಟಿಎಂಸಿ ನೀರು ಹರಿಸಲು ಹೋರಾಟ ನಡೆಸಬೇಕಾಗಿದೆ , ಜನ ಪರವಾಗಿರುವ ಕಾರ್ಯಕ್ರಮಗಳ ಬಗ್ಗೆ ಯಾವುದೇ ರೀತಿಯಲ್ಲಿ ರಾಜಕೀಯ ಮಾಡಲು ಹೋಗ ಬಾರದು , ಸ್ವತಂತ್ರ ಭಾರತದಲ್ಲಿ ಸಮಸ್ಯೆ ಗಳ ಉದ್ಬವವಾಗುತ್ತಿವೆ ಸುಮಾರು 41 ವರ್ಷಗಳಿಂದ ಈ ಕ್ಷೇತ್ರದ ಆಗುಹೋಗುಗಳನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಈ ಹೋಬಳಿಯ ಗೂಬಲಗುಟ್ಟೆ ಕೆರೆಯ ಏರಿಯನ್ನು ಹೆಚ್ಚಿಸಿದರೆ ಹೆಚ್ಚು ನೀರು ಸಂಗ್ರಹಣೆ ಹೆಚ್ಚಾಗುತ್ತದೆ. ಕ್ಷೇತ್ರದ ಜನರಿಗೆ ನೀರು , ವಿದ್ಯುತ್ ನೀಡಿದರೆ ಕ್ಷೇತ್ರ ಸುಭಿಕ್ಷೆಯಾಗಿರುತ್ತದೆ ಎಂದರು.

ಉಪವಿಭಾಗಾಧಿಕಾರಿ ರಿಷಿ ಆನಂದ್ ಮಾತನಾಡಿ ವಿದ್ಯೆಯು ಇಂದೂ ಎಲ್ಲಾರಿಗೂ ಅತ್ಯ ಗತ್ಯವಾಗಿದೆ. ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಗಳನ್ನು ವಿತರಿಸುತ್ತಿರುವುದು ಉತ್ತಮ ಕಾರ್ಯಕ್ರಮವಾಗಿದೆ ಪೋಷಕರು ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಬೇಕು , ಸಚಿವರು ಕ್ಷೇತ್ರದಲ್ಲಿ ಜನಪರವಾದ ಸೇವಾ ಮನೋಭಾವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನಮ್ಮ ಕಂದಾಯ ಇಲಾಖೆಯಿಂದ ದೊರೆಯುವಂತಹ ಸೌಲಭ್ಯಗಳನ್ನು ಪ್ರಮಾಣಿಕವಾಗಿ ಜನರಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗುವುದೆಂದರು.

ಗ್ರಾ.ಪಂ ಅದ್ಯಕ್ಷೆ ನಾಗಮಣಿ ರಂಗಾಸ್ವಾಮಿ , ಹರೀಶ್ , ವಿಜಯಪ್ರಕಾಶ್ , ಮಂಜುನಾಥ್ , ಡಿ.ಎಲ್.ರಾಮಯ್ಯ , ಮಂಜಮ್ಮ , ಸಿದ್ದಪ್ಪ , ವರದರಾಜು , ರತ್ನಮ್ಮ , ಶ್ರೀಶೈಲ ಕುಮಾರ , ಮಂಗಳಮ್ಮ , ಶ್ರೀ ದೇವಮ್ಮ , ಶಾರದಮ್ಮ , ಮಹಾಲಕ್ಷ್ಮೀ , ಕಲಾವತಿ ವೆಂಕಟಪ್ಪ , ಪಿ ಡಿ ಓ ಶಿಲ್ಪಾ , ಮುಖಂಡರಾದ ತುಂಗೋಟಿ ರಾಮಣ್ಣ , ಚಿನ್ನಪ್ಪ , ಲಕ್ಷ್ಮೀನಾರಾಯಣ್ , ದೊಡ್ಡೇರಿ ಶಿವಣ್ಣ , ಡಾ. ಕಣೀಮಯ್ಯ , ಪ್ರಸನ್ನ ಕುಮಾರ್ , ನಾಗರಾಜು , ಮಲ್ಲಿಕಾರ್ಜುನ್ , ಸಿರಿಯಪ್ಪ , ಕೆ.ಶಿವಣ್ಣ , ಎಂ.ಎಂ ಮೂರ್ತಿ , ಡಿ.ಎಲ್ ಮಹಾಲಿಂಗಯ್ಯ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!