Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು : ಎಸ್.ಡಿ.ಬೆನ್ನೂರ

ನಾವು ವಾಸಿಸುವ ಪರಿಸರ ಚೆನ್ನಾಗಿರಬೇಕು, ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು. ಶುಚಿತ್ವವನ್ನು ನಾವು ಕಾಪಾಡಿದರೆ, ಶುಚಿತ್ವ ನಮ್ಮನ್ನು ಕಾಪಾಡುತ್ತದೆ . ಹಾಗಾಗಿ ಸ್ವಚ್ಚವಾಗಿ ಕೈತೊಳೆದು ಕೊಳ್ಳುವುದರಿಂದ ಹಲವಾರು ಖಾಯಿಲೆಗಳಿಂದ ದೂರವಿರಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ ಎಂ ಹೊಸೂರು ಆರೋಗ್ಯ ಕೇಂದ್ರ ವ್ಯಾಪ್ತಿಯ ಜಕ್ಕನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಶಾಲಾ ಆರೋಗ್ಯ ಕಾರ್ಯಕ್ರಮ”ದ ಅಡಿಯಲ್ಲಿ ನಡೆದ ಮಕ್ಕಳಿಗೆ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಆರೋಗ್ಯ ಶಿಕ್ಷಣ ಪರಿಸರ ಒಂದಕ್ಕೊಂದು ತ್ರಿಕೋನ ಸಂಬಂಧವಿದೆ, ಊಟಕ್ಕೆ ಮೊದಲು, ಶೌಚದ ನಂತರ ತಪ್ಪದೇ ಸೋಪಿನಿಂದ ಕೈತೊಳೆದುಕೊಳ್ಳಬೇಕು. ಸೋಂಕು ನಿವಾರಣೆಗೆ ಸೂಕ್ತ ಕೈ ತೊಳೆಯುವ ವಿಧಾನಗಳನ್ನು ಅನುಸರಿಸಬೇಕು, ದಿನಾಲು ಸ್ನಾನ ಮಾಡಬೇಕು, ಪ್ರತಿ ದಿನ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜಬೇಕು, ಜಂಕ್ ಫುಡ್ ಆಹಾರದಿಂದ ದೂರವಿರಬೇಕು, ಪೌಷ್ಠಿಕ ಆಹಾರ ಸೇವಿಸಿ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಹೆಚ್ಚು ಸೊಪ್ಪು ಹಸಿರು ತರಕಾರಿ, ಹಣ್ಣು ಹಂಪಲ ಬಳಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮಂಜುಳಾ, ಸಹ ಶಿಕ್ಷಕರಾದ ಗಣೇಶ್, ಅತಿಥಿ ಶಿಕ್ಷಕಿ ರಕ್ಷಿತ ಹಾಗೂ ಆಶಾ, ಕಾರ್ಯಕರ್ತೆ ಲಕ್ಷ್ಮಮ್ಮ ಮತ್ತು ಶಾಲಾ ಮಕ್ಕಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!