Friday, September 20, 2024

ಪ್ರಾಯೋಗಿಕ ಆವೃತ್ತಿ

ಪಿಯುಸಿ ಫಲಿತಾಂಶ| ಪ್ರಥಮ ಸ್ಥಾನ ಪಡೆದ ವೇದಾಂತ್ ಗೆ ‘ಗ್ಯಾರಂಟಿ’ ಆಸರೆಯಾಗಿದ್ದು ಖುಷಿ ತಂದಿದೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲಾ ವಿಭಾಗದಿಂದ ವಿಜಯಪುರದ ಹುಡುಗ ವೇದಾಂತ್ ನವಿ 596 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು, ಇದಕ್ಕಾಗಿ ನಮ್ಮ ಗ್ಯಾರಂಟಿ ಯೋಜನೆಗಳ ಆಸರೆ ಪಡೆದಿರುವುದನ್ನು ಕೇಳಿ ಖುಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ತನ್ನ ಕುಟುಂಬದ ಹಿನ್ನೆಲೆ ವಿವರಿಸಿರುವ ವೇದಾಂತ್, ಬಡತನದಲ್ಲೇ ಶಿಕ್ಷಣ ಪಡೆಯುತ್ತಿರುವ ತನಗೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಯಿತು ಎಂದಿದ್ದನ್ನು ಕೇಳಿ ಖುಷಿಯಾಯಿತು. ಬಡತನ ನಾಡಿನ ಮಕ್ಕಳ ಕಲಿಕಾ ಸಾಧನೆಗೆ ಅಡ್ಡಿಯಾಗಬಾರದು, ಅಂತಹ ವ್ಯವಸ್ಥೆಯೊಂದನ್ನು ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿತ್ತು,ಗೃಹಲಕ್ಷ್ಮಿ ಆ ಕನಸನ್ನು ಸಾಕಾರಗೊಳಿಸಿದೆ ಎಂದು ತಿಳಿಸಿದ್ದಾರೆ.

ನಮ್ಮ ಸರ್ಕಾರದ ಕಾರ್ಯಕ್ರಮವೊಂದು ನಿರೀಕ್ಷೆಗೂ ಮೀರಿದ್ದನ್ನು ಸಾಧಿಸಿದೆ. ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯಗಳೆಂದು ಹೀಗಳೆವ ಮಂದಿಗೆ ಇದು ತಪರಾಕಿ ಬಾರಿಸಿದಂತಿದೆ ಎಂದು ಅವರು ಪ್ರತಿಕ್ರಿಸಿದ್ದಾರೆ.

“>

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!