Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಎಂ.ಹರ್ಷ ಪುಣ್ಯ ಸಂಸ್ಮರಣೆ| ಪೌರಕಾರ್ಮಿಕರು-ನಾಟಿ ಹಾಕುವ ಮಹಿಳೆಯರಿಗೆ “ಕಾಯಕ ಪ್ರಶಸ್ತಿ” ಪ್ರದಾನ

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವ್‌ ಅವರ ಪುತ್ರ ಕೆ.ಎಂ.ಹರ್ಷ ಅವರ ಪ್ರಥಮ ವರ್ಷದ ಪುಣ್ಯ ಸಂಸ್ಮರಣೆಯ ಅಂಗವಾಗಿ ನ.4ರಂದು ಶನಿವಾರ ಬೆಳಗ್ಗೆ 10.30 ಗಂಟೆಗೆ ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ ಶಂಕರಗೌಡ ಸಭಾಂಗಣದಲ್ಲಿ ಶ್ರಮಿಕ ವರ್ಗದ ನಾಟಿ ಹಾಕುವ ಮತ್ತು ಪೌರಕಾರ್ಮಿಕ ಮಹಿಳೆಯರಿಗೆ “ಕಾಯಕ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹರ್ಷ ಸಮಾಜಸೇವಾ ಫೌಂಡೇಷನ್ ಸಂಚಾಲಕ ದೇವರಾಜ್ ಕೊಪ್ಪ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ 5 ಮಕ್ಕಳಿಗೆ ಶಾಲಾ ಶುಲ್ಕಕ್ಕಾಗಿ ತಲಾ ಮೂರು ಸಾವಿರ ರೂ.ಗಳ ಪ್ರೋತ್ಸಾಹಧನ ವಿತರಣೆ ಹಾಗೂ ತಾಲೂಕು ಜಾನಪದ ಪರಿಷತ್ತಿನ ಹಿರಿಯ ಜಾನಪದ ಗಾಯಕರಿಂದ ನುಡಿ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಈ ಕಾರ್ಯಕ್ರಮವನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಹಿ.ಶಿ. ರಾಮಚಂದ್ರಗೌಡ ಉದ್ಘಾಟಿಸಲಿದ್ದು, ಭಾರತೀಯ ರೆಡ್ ಕ್ರಾಸ್‌ ಸಂಸ್ಥೆಯ ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು ಪ್ರಶಸ್ತಿ ಪ್ರದಾನ ಮಾಡುವರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮತ್ತು ಶಿವಮೂರ್ತಿ ಕೀಲಾರ ಅವರು ಬಡ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಪ್ರೋತ್ಸಾಹ ಧನ ವಿತರಣೆ ಮಾಡುವರು.

ಪೌರಕಾರ್ಮಿಕರು-ನಾಟಿ ಹಾಕುವ ಮಹಿಳೆಯರಾದ ಪಿ.ಕೆ.ಕಾಲೋನಿಯ ಸತ್ಯಮ್ಮ, ಪೂವತ್ತಮ್ಮ, ಆರ್.ಟಿ.ಓ ಸ್ಕಂ ನ ಜಯಮ್ಮ, ಹನಿಯಂಬಾಡಿ ಹುಚ್ಚಮ್ಮ, ಹಳುವಾಡಿ ಮಹದೇವಮ್ಮ, ಮಲ್ಲನಾಯಕನಕಟ್ಟೆ ಸಾಕಮ್ಮ, ಕಾರಸವಾಡಿ ಕಮಲಮ್ಮ, ಸುಂದರಮ್ಮ, ಮಂಗಲ ಲಕ್ಷ್ಮಮ್ಮ ಹಾಗೂ ತಗ್ಗಹಳ್ಳಿ ಶಾಂತಮ್ಮ ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಫೆರ್ವಾಡ್ -ಕೆ ರಾಜ್ಯಾಧ್ಯಕ್ಷ ಮಹೇಶ್‌ ಚಂದ್ರ, ಗುರು, ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿಯ ಗೌರವಾಧ್ಯಕ್ಷ ಪೂವಯ್ಯ, ಜಂಟಿ ಕೃಷಿ ನಿರ್ದೇಶಕ ಎ.ಎಸ್ ಅಶೋಕ್, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇಗೌಡ, ಕರ್ನಾಟಕ ಜಾನಪದ ಪರಿಷತ್ತಿನ ಮಂಡ್ಯ ಜಿಲ್ಲಾಧ್ಯಕ್ಷರಾದ ಡಿ.ಪಿ ಸ್ವಾಮಿ, ಜಿಲ್ಲಾ ಪೌರಕಾರ್ಮಿಕ ನೌಕರರ ಸಂಘದ ಅಧ್ಯಕ್ಷ ನಾಗರಾಜು ಭಾಗವಹಿಸುವರು ಎಂದರು.

ಗೋಷ್ಠಿಯಲ್ಲಿ ಫೌಂಡೇಷನ್ ಸಂಚಾಲಕರಾದ ಬಸವರಾಜು ಜಯಪುರ, ಕೋ.ಪು.ಗುಣಶೇಖರ್, ಪುಟ್ಟಸ್ವಾಮಿ ಬೋರ್ ವೆಲ್, ಮಂಜೇಶ್ ಚನ್ನಾಪುರ ಹಾಗೂ ಕೃಷ್ಣಪ್ಪ ಜೀಗುಂಡಿಪಟ್ಟಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!