Wednesday, September 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸ್ಥಳೀಯ ಕಲಾವಿದರ ಕಡೆಗಣನೆ ಖಂಡಿಸಿ ‘ಸಾಂಸ್ಕೃತಿಕ ಪ್ರತಿಭಟನೆ’

ಮಂಡ್ಯ ಜಿಲ್ಲೆಯಲ್ಲಿ ನಡೆಯುವ ನಾಡಹಬ್ಬ, ರಾಷ್ಟ್ರೀಯ ಹಬ್ಬ, ಜಯಂತಿಗಳು, ಉತ್ಸವಗಳು, ಸಮ್ಮೇಳನಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಕಲಾವಿದರನ್ನು ಕಲೆಗಳನ್ನ ಕಡೆಗಣಿಸಿ ಇವೆಂಟ್ಸ್ ಮ್ಯಾನೇಟ್ವೆಂಟ್ ಗಳಿಗೆ ಕಾರ್ಯಕ್ರಮಗಳನ್ನು ಒಪ್ಪಿಸಿ ಕಲೆಗಳನ್ನು ಹಾಗೂ ಕಲಾವಿದರನ್ನು ಅಳಿವಿನ ಅಂಚಿಗೆ ದೂಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಡ್ಯ ಜಿಲ್ಲೆಯ ಎಲ್ಲ ಪ್ರಕಾರಗಳ ಕಲಾವಿದರು ಸೋಮವಾರ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಲಾವಿದರು, ಮಂಡ್ಯ ಜಿಲ್ಲೆ ಸಾಕಷ್ಟು ಕಲೆ ಹಾಗೂ ಕಲಾವಿದರಿಗೆ ಮೂಲಸ್ಥಾನ ಆಗಿದೆ. ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಮಂಡ್ಯ ಜಿಲ್ಲೆಯ ಕಲೆ ಕಲಾವಿದರಿಗೆ ದೊಡ್ಡ ಸ್ಥಾನಮಾನ ಇದೆ. ಸಾವಿರಾರು ಜನ ಕಲಾವಿದರು ಯಾವುದೇ ಫಲಾಪೇಕ್ಷೆಗಳಿಲ್ಲದೆ ಹಲವಾರು ವರ್ಷಗಳಿಂದ ಜಿಲ್ಲೆಯ ಕಲೆಗಳನ್ನು ಕಲಾವಿದರುಗಳನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಆದರೂ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಗಗನಚುಕ್ಕು ಜಲಪಾತೋತ್ಸವ ಸಮಿತಿ, ಶ್ರೀರಂಗಪಟ್ಟಣ ದಸರಾ ಸಮಿತಿ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಹಕ್ಕೋತ್ತಾಯ ಪತ್ರ ಸಲ್ಲಿಸಿದರು.

nudikarnataka.com

ಕಲಾವಿದರಿಗೆ ಆಗುತ್ತಿರುವ ಈ ಅನ್ಯಾಯಗಳು ಈ ತತ್ತಕ್ಷಣ ನಿಲ್ಲಬೇಕು. ಸ್ಥಳೀಯ ಕಲೆ ಕಲಾವಿದರಿಗೆ ಪ್ರಥಮ ಆದ್ಯತೆ ನೀಡುವಂತೆ ಆಗಬೇಕು. ಮಂಡ್ಯದ ಕಲೆ ಮತ್ತು ಕಲಾವಿದರು ರಾಜ್ಯ ರಾಷ್ಟ್ರಮಟ್ಟದಲ್ಲಿ ಇನ್ನೂ ಹೆಚ್ಚು ಉತ್ತುಂಗ ಸ್ಥಾನಕ್ಕೆರಬೇಕು ಎನ್ನುವ ಹಾಕ್ಕೋತಾಯದೊಂದಿಗೆ ಮಂಡ್ಯ ಜಿಲ್ಲೆಯ ಎಲ್ಲಾ ಕಲಾಪ್ರಕಾರಗಳ ಕಲಾವಿದರು ಪ್ರತಿಭಟಿಸಿದರು.

ಕಲಾವಿದರ ಹಕ್ಕೋತ್ತಾಯ ಪತ್ರದಲ್ಲೇನಿದೆ 

  • ಮಂಡ್ಯ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ರೀತಿಯ ತಾಲೂಕು ಮಟ್ಟದ ಜಿಲ್ಲಾಮಟ್ಟದ ಸರಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ಜಯಂತಿಗಳ ಮೆರವಣಿಗೆ ಉತ್ಸವ ಸಮಾವೇಶ ಸಮ್ಮೇಳನಗಳಲ್ಲಿ ಸ್ಥಳೀಯ ಕಲಾವಿದರುಗಳಿಗೆ ಮೊದಲ ಆದ್ಯತೆ ನೀಡಬೇಕು.
  • ಪ್ರತಿ ಸಲವು ಕಲಾವಿದರಿಂದ ಅರ್ಜಿಯನ್ನು ಆಹ್ವಾನ ಮಾಡುವ ಬದಲು ಜಿಲ್ಲೆಯಲ್ಲಿರುವ ಕಲಾವಿದರು ಹಾಗೂ ಕಲಾತಂಡಗಳ ಪಟ್ಟಿಗಳನ್ನು ಮಾಡಿ ಎಲ್ಲಾ ಕಲಾವಿದರಿಗೂ ಸಮಾನಾಂತರವಾಗಿ ಕಾರ್ಯಕ್ರಮಗಳು ನೀಡಿ ಪ್ರೋತ್ಸಾಹಿಸಬೇಕು.
  • ಕಲಾವಿದರಿಗೆ ಸಂಭಾವನೆಯ ವಿಷಯದಲ್ಲಿ ಮಾಡುತ್ತಿರುವ ಶೋಷಣೆಗಳನ್ನು ನಿಲ್ಲಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ಕಲಾಪ್ರಕಾರಗಳಿಗೆ ನೀಡುತ್ತಿರುವ ಸಂಭಾವನೆಯ ಕ್ರಮವನ್ನು ಅನುಸರಿಸಿ ಸಂಭಾವನೆಯನ್ನು ನೀಡಬೇಕು.
  • ಸರ್ಕಾರಿ ಇಲಾಖೆಗಳು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು 15 ದಿನದ ಒಳಗಾಗಿ ಕಲಾವಿದರಿಗೆ ಸಂಭಾವನೆಯನ್ನು ನೀಡುವ ಕ್ರಮವಹಿಸಬೇಕು.
  • ಕಲಾಪ್ರದರ್ಶನ ನಡೆಯುವ ಸಮಯದಲ್ಲಿ ಕಲಾವಿದರಿಗೆ ಉತ್ತಮ ನೀರಿನ ವ್ಯವಸ್ಥೆ ಊಟ ವಸತಿ ಹಾಗೂ ವಸ್ತ್ರಾಲಂಕಾರಕ್ಕೆ ಸ್ಥಳಾವಕಾಶ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಬೇಕು.
  • ರಾಜ್ಯ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಲಾವಿದರಿಗೆ ನೀಡುವ ಸ್ಥಾನಮಾನ ಗೌರವಗಳನ್ನು ಸ್ಥಳೀಯ ಕಲಾವಿದರಿಗೂ ನೀಡುವಂತಾಗಬೇಕು.
  • ಮಧ್ಯವರ್ತಿಗಳಿಗೆ ಅವಕಾಶ ನೀಡದೆ ನೇರವಾಗಿ ಕಲಾವಿದರು ಹಾಗೂ ಕಲಾತಂಡದವರನ್ನು ಸಂಪರ್ಕಿಸಿ ಕಾರ್ಯಕ್ರಮ ನೀಡುವಂತಾಗಬೇಕು.
  • ಎಲ್ಲಾ ರೀತಿಯ ಕಾರ್ಯಕ್ರಮಗಳಲ್ಲಿ ಕಲಾವಿದರುಗಳಿಗೆ ವಿಶೇಷ ಆದ್ಯತೆ ಗೌರವಗಳನ್ನು ನೀಡಲು ಕ್ರಮವಹಿಸಬೇಕು.
  • ಜಿಲ್ಲೆಯ ಜನಪ್ರತಿನಿಧಿಗಳು ಕಲಾವಿದರು ಹಾಗೂ ಕಲಾತಂಡಗಳನ್ನು ಗುರುತಿಸಿ ಅವರಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಎಲ್ಲಾ ಬಗೆಯ ಕಾರ್ಯಕ್ರಮಗಳಿಗೆ ನಿಯೋಜಿಸಲು ಶಿಫಾರಸ್ಸು ಮಾಡಿ ಉತ್ತಮ ಅವಕಾಶಗಳನ್ನು ಕಲ್ಪಿಸುವ ಪ್ರಕ್ರಿಯೆ ನಡೆಯಬೇಕು. ಇದು ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳು ಈ ಕೆಲಸವನ್ನು ಮಾಡುತ್ತಿದ್ದಾರೆ ಅದು ಮಂಡ್ಯದಲ್ಲೂ ಸಹ ಆಗಬೇಕು.
  • ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಜನ ಶಾಮಿಯಾನ, ಧ್ವನಿವರ್ಧಕ, ಬೆಳಕು, ದೀಪ ಅಲಂಕಾರ, ವಸ್ತ್ರಲಂಕಾರ, ಪೌರಾಣಿಕ ಡ್ರಾಮಾ ಸೀನರಿ ಮಾಲೀಕರು ಹಾಗೂ ಕಲಾವಿದರು ಸಾಮಾಜಿಕ ನಾಟಕ ಡ್ರಾಮಾ ಸೀನರಿ ಹಾಗೂ ಕಲಾವಿದರು ವಾದ್ಯಗೋಷ್ಠಿ ಕಲಾವಿದರು ಸಾಕಷ್ಟು ಜನ ಇದ್ದು ಸಣ್ಣ ಪುಟ್ಟ ಬೆರಳೆಣಿಕೆಯಷ್ಟು ಕಾರ್ಯಕ್ರಮಗಳಿಗೆ ಮಾತ್ರ ಸಂಬಂಧಪಟ್ಟ ಇಲಾಖೆಗಳು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ರೀತಿಯ ಜೀವನದ ಭದ್ರತೆಗಳು ಇಲ್ಲದಿರುವುದರಿಂದ ಇವರಿಗೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ತಗ್ಗಹಳ್ಳಿ ವೆಂಕಟೇಶ್, ಕಾರಸವಾಡಿ ಮಹದೇವು, ಸಿಐಟಿಯು ನಾಯಕಿ ಸಿ.ಕುಮಾರಿ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಶಿಲ್ಪ, ಕರುನಾಡ ಸೇವಕರು ಸಂಘಟನೆಯ ನಾಗಣ್ಣಗೌಡ, ಸುರೇಶ್, ಕೀಲಾರ ಕೃ‍ಷ್ಣೇಗೌಡ, ಮಂಗಲ ಲಂಕೇಶ್, ಹುರುಗಲವಾಡಿ ರಾಮಯ್ಯ ಬಸವರಾಜು ಸಂತೆಕಸಲಗೆರೆ, ದೇವರಾಜು, ಎನ್.ಶೇಖರ್, ವೈರಮುಡಿ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!