Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮೋಹನ್ ಭಾಗವತ್ ಹೇಳಿಕೆಗೆ ಕಾಂಗ್ರೆಸ್ ಖಂಡನೆ

ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆಯ ಬಳಿಕ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂತು ಎಂದು ಹೇಳಿಕೆ ನೀಡಿರುವುದನ್ನು ಎಂದು ಕಾಂಗ್ರೆಸ್ ರಾಜ್ಯ ಸಂಚಾಲಕ (ಪರಿಶಿಷ್ಟ ಜಾತಿ ವಿಭಾಗ) ಕೆ.ಎನ್.ದೀಪಕ್ ಖಂಡಿಸಿದ್ದಾರೆ.

ಆರ್.ಎಸ್.ಎಸ್. ಸಂಸ್ಥೆಯಾಗಲಿ, ಅದರ ಮುಖಂಡರಾಗಲಿ, ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ, ಬ್ರಿಟಿಷರ ವಸಾಹತುಶಾಹಿ ನೀತಿಯ ಎದುರು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನೀಯರ ತ್ಯಾಗ ಮತ್ತು ಬಲಿದಾನದಿಂದಾಗಿಯೇ ನಮ್ಮ ದೇಶ ಸ್ವಾತಂತ್ರ್ಯ ಹೊಂದಿತ್ತು. ಈ ದೇಶದ ಸ್ವಾತಂತ್ರ್ಯಕ್ಕೆ ಅರ್ಥ ತಂದುಕೊಡುವಲ್ಲಿ ಸಂವಿಧಾನದ ಪಾತ್ರ ಅತ್ಯಂತ ದೊಡ್ಡದಾಗಿದ್ದು, ಇದಕ್ಕಾಗಿ ನಾವು ಅಂಬೇಡ್ಕರಂತಹ ಮಹಾನೀಯರಿಗೆ ಋಣಿಯಾಗಿರಬೇಕೇ ವಿನಃ ಬಾಲರಾಮನಿಗಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗಾಗಿ ಅಪೂರ್ಣಗೊಂಡಿದ್ದ ರಾಮಮಂದಿರವನ್ನು ಉದ್ಘಾಟಿಸುವ ಕೆಲಸ ಮಾಡಿದ ಬಿಜೆಪಿಗರು ತಮಗೆ ಚುನಾವಣೆಯೇ ಮುಖ್ಯ ಹೊರತು ಯಾವ ರಾಮನಲ್ಲ ಎಂದು ದೇಶಕ್ಕೆ ಸಾರಿ ಹೇಳಿದ್ದಾರೆ. ಅದಕ್ಕಾಗಿ ಮುಖ್ಯವಾಗಿ ಈ ದೇಶದ ಮೂಲೆ ಮೂಲೆಗಳಲ್ಲಿ ಹಿಂದಿನಿಂದಲೂ ರಾಮಮಂದಿರ, ಮಸೀದಿ, ಚರ್ಚ್, ಇಗರ್ಜಿ ಎಲ್ಲವೂ ಇವೆ. ಆದರೆ ಕರೋನ ಸಮಯ ಬಂದಾಗ ಇವೆಲ್ಲವೂ ಕೂಡ ಭದ್ರವಾಗಿ ಬಾಗಿಲನ್ನು ಹಾಕಿಕೊಂಡಿದ್ದೇವು ಎಂಬುದನ್ನು ನಾವು ಯಾರು ಮರೆಯಬಾರದು. ಆಗ ಬಡವರಿಗೆ, ಶ್ರಮಿಕರಿಗೆ ನೆರವಾಗಿದ್ದು, ಯು.ಪಿ.ಎ ಕಾಲದ ಮನ್‌ರೇಗಾ ಮತ್ತು ಕಾಂಗ್ರೆಸ್ ಸರ್ಕಾರ ನೀಡಿದ ಅನ್ಯಭಾಗ್ಯವೇ ವಿನಃ ಯಾವ ರಾಮ ಮಂದಿರವೂ ಅಲ್ಲ ಬಾಲರಾಮನು ಅಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ