Tuesday, November 24, 2026

ಪ್ರಾಯೋಗಿಕ ಆವೃತ್ತಿ

ಯತ್ನಾಳ್ ಹೇಳಿಕೆಗೆ ಓಂಕಾರೇಶ್ವರ ಸ್ವಾಮೀಜಿ ಖಂಡನೆ

ಚಾಂಮುಂಡೇಶ್ವರಿಯನ್ನು ಪೂಜಿಸಲು ದಲಿತ ಮಹಿಳೆಯರು ಅರ್ಹರಲ್ಲ ಎಂಬ ಹೇಳಿಕೆ ನೀಡಿರುವ ಬಿಜೆಪಿಯ ಉಚ್ಚಾಟಿತ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಮಳವಳ್ಳಿ ತಾಲ್ಲೂಕಿನ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.

ಯತ್ನಾಳ್ ಅವರು ಈ ಕೂಡಲೇ ನೀವು ದಲಿತ ಸಮುದಾಯ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರಜ್ಞಾವಂತರು ಸಮುದಾಯದ ಜನತೆ ಹೋರಾಟ ನಡೆಸಲಿದ್ದಾರೆ. ಈ ಹಿಂದೆ ವಿಶ್ವ ಗುರು ಅವರಿಗೆ ಅವಮಾನ ಮಾಡಿ ನಿಮಗೆ ಆದ ಅನುಭವ ಮರೆತು ಹೋಗಿ, ಮತ್ತೆ ಜೇನುಗೂಡಿಗೆ ಕಲ್ಲು ಹೊಡೆಯುವ ಸಾಹಸ ಮಾಡಿದ್ದೀರಿ, ಇದಕ್ಕೆ ಪ್ರಜ್ಞಾವಂತ ಲಿಂಗಾಯತರು ತಕ್ಕಪಾಠ ಕಲಿಸಲಿದ್ದಾರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ