Friday, September 20, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ನಟಿ ಲೀಲಾವತಿ ನಿಧನಕ್ಕೆ ಸಂತಾಪ

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಲೀಲಾವತಿ (85) ಅವರ ನಿಧನಕ್ಕೆ ಮಳವಳ್ಳಿ ತಾಲೂಕು ಡಾ. ರಾಜ್ ಕಲಾಸಂಘ ಅಧ್ಯಕ್ಷ ದೊಡ್ಡಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಳವಳ್ಳಿ ಪಟ್ಟಣದ ಗಂಗಾ ಪರಮೇಶ್ವರಿ ಸಹಕಾರ ಸಂಘದ ಕಚೇರಿ ಬಳಿ ಲೀಲಾವತಿಯವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಅವರು, ಲೀಲಾವತಿಯವರು ಹಲವಾರು ಚಿತ್ರಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಅಭಿನಯಿಸಿ, ಬಹುಮುಖ ನಟನೆಯಿಂದ ಬೆಳ್ಳಿತೆರೆಯನ್ನು ಅಲಂಕರಿಸಿದ ನಿಜವಾದ ಮಿನುಗುತಾರೆ ಎಂದು ಬಣ್ಣಿಸಿದರು.

ಕನ್ನಡ, ತಮಿಳು, ತೆಲುಗು ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಲೀಲಾವತಿ ನಟಿಸಿದ್ದರು. 1958ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ‘ಮಾಂಗಲ್ಯ ಯೋಗ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆನಂತರ ಕನ್ನಡ, ತೆಲುಗು, ತಮಿಳು, ತುಳು, ಮಲಯಾಳಂ ಸೇರಿ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಡಾ ರಾಜ್‌ಕುಮಾರ್ ಅವರ ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ಲೀಲಾವತಿ ಅವರು ಬಣ್ಣ ಹಚ್ಚಿದ್ದರು. ಇಂದಿನ ನಾಯಕ ನಟಿಯರಿಗೆ ಪ್ರೇರಣೆ ಆಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರಿಯಪ್ಪ, ಜಗ್ಗ, ಗಂಗರಾಜ್ ಅರಸು, ಕೃಷ್ಣ, ಮಂಜು, ಚಂದ್ರು, ನಾಗರಾಜು, ಗೋವಿಂದ. ನಂಜುಂಡಯ್ಯ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!