Friday, May 17, 2024

ಪ್ರಾಯೋಗಿಕ ಆವೃತ್ತಿ

ಅನುಭವಕ್ಕಿಂತ ದೊಡ್ಡದು ಬೇರಾವುದೂ ಇಲ್ಲ- ಹೆಚ್.ವಿಶ್ವನಾಥ್

ಜೀವನದಲ್ಲಿ ಸಿಗುವ ಸ್ನೇಹಿತರು, ಗುರುಗಳು, ಮಾರ್ಗದರ್ಶಕರು, ಅವರೆಲ್ಲರೊಂದಿಗಿನ ಸಂಪರ್ಕ, ಒಡನಾಟ, ಅದರಿಂದ ಕಲಿತ ಪಾಠ, ಉತ್ತಮ ಜೀವನಕ್ಕೆ ಸಿಕ್ಕ ದಾರಿ ಇವೆಲ್ಲವೂ ಪಠ್ಯದಿಂದ ಸಿಗುವಂತಹದ್ದಲ್ಲ. ಒಬ್ಬೊಬ್ಬರ ಅನುಭವವೂ ಒಂದೊಂದು ರೀತಿಯಲ್ಲಿರುತ್ತದೆ. ಅನುಭವಕ್ಕಿಂತ ದೊಡ್ಡದು ಬೇರಾವುದೂ ಇರುವುದಿಲ್ಲ ಮಾಜಿ ಸಚಿವ ಹೆಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಬಿ.ಬಸವರಾಜು ಅಭಿಮಾನಿ ಬಳಗದ ವತಿಯಿಂದ ಭಾನುವಾರ ನಡೆದ  ಬಿ.ಬಸವರಾಜು ಅವರಿಗೆ ಅಭಿನಂದನೆ ಮತ್ತು ‘ಮೌನ ಚಿಂತಕ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ರಾಜಕೀಯ ಸಾಮಾನ್ಯ ಜನರ ಜೀವನದ ಭಾಗವಾಗಿದೆ. ಅದೃಷ್ಟ ಮತ್ತು ಅವಕಾಶ. ಇವೆರಡೂ ಸಿಕ್ಕಾಗ ಏನು ಬೇಕಾದರೂ ಆಗಬಹುದು. ಭಾರತದಲ್ಲಿ ರಾಜಕೀಯ ಎನ್ನುವುದು ಬಹಗಳ ಮುಖ್ಯ. ರಾಜಕಾರಣವಿಲ್ಲದೆ ಏನೂ ಇಲ್ಲ. ಅದಕ್ಕೆ ಅಂಬೇಡ್ಕರ್ ಅವರು ಭಾರತದಲ್ಲಿ ಬದುಕುವ ಯಾವುದೇ ಜಾತಿ-ಜನಾಂಗ, ಧರ್ಮದವರ ಭವಿಷ್ಯದ ಜೀವನದ ಭಾಗ ರಾಜಕೀಯ ಅಧಿಕಾರ ಎಂದು ಹೇಳಿದ್ದಾರೆ. ರಾಜಕೀಯದಲ್ಲಿ ಯಾರು ಯಾವ ಸಮಯದಲ್ಲಿ ಏನಾಗುತ್ತಾರೆ ಎಂಬುದನ್ನು ಊಹಿಸಲಾಗುವುದಿಲ್ಲ. ನಾನು ರಾಜಕಾರಣ ಪ್ರವೇಶಿಸಿ ಶಾಸಕ, ಮಂತ್ರಿಯೂ ಆದೆ. ಜೀವನದಲ್ಲಿ ಇವೆಲ್ಲ ಹುದ್ದೆ ಸಿಗುತ್ತವೆ ಎಂದು ನಾನು ಕನಸಿನಲ್ಲೂ ಕಂಡಿರಲಿಲ್ಲ ಎಂದು ತಿಳಿಸಿದರು.

ಗ್ರಾಮೀಣ ಜನರಿಗೆ ವಿದ್ಯೆ ಇಲ್ಲದಿದ್ದರೂ ವಿವೇಕವಿದೆ. ನಾಗರೀಕತೆ, ಸಂಸ್ಕೃತಿ, ಸಂಸ್ಕಾರ ಹಳ್ಳಿಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಸ್ನೇಹಕ್ಕೆ, ಪ್ರೀತಿಗೆ ವಿಶೇಷ ಗೌರವ-ಮರ್ಯಾದೆಗಳನ್ನು ನೀಡುತ್ತಿದ್ದಾರೆ. ನಗರದವರಗಿಂತಲೂ ಸಾಮಾನ್ಯ ಜ್ಞಾನ ಗ್ರಾಮೀಣ ಭಾಗದ ಜನರಲ್ಲಿದೆ ಎಂದು ನುಡಿದರು.

ಬಿ.ಬಸವರಾಜು ಅವರು ವಿದ್ಯಾರ್ಥಿ ಜೀವನದಿಂದಲೇ ನಾಯಕತ್ವದ ಗುಣವನ್ನು ರೂಢಿಸಿಕೊಂಡಿದ್ದರು. ಅವರಿಗೆ ರಾಜಕೀಯ ಗಾಡ್ ಫಾದರ್ ಆಗಿ ಜಿ.ಮಾದೇಗೌಡರು ಸಿಕ್ಕರು. ಹಲವಾರು ನಾಯಕರು ಬಸವರಾಜು ಮೇಲೆ ಪ್ರಭಾವ ಬೀರಿ ವ್ಯಕ್ತಿತ್ವವನ್ನು ಅರಳಿಸಿದ್ದಾರೆ. ನನಗೂ ಮಂಡ್ಯ ಜಿಲ್ಲೆಯಲ್ಲಿ ಅಪಾರ ಸ್ನೇಹ ಬಳಗವಿದೆ. ಆ ಸ್ನೇಹದ ಸಂಕೋಲೆಯೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ. ಜಿ.ಮಾದೇಗೌಡ, ಹೆಚ್.ಚೌಡಯ್ಯ, ಕೆ.ಎಸ್.ಪುಟ್ಟಣ್ಣಯ್ಯ ಸೇರಿದಂತೆ ಹಲವರೊಂದಿಗಿನ ಒಡನಾಟ ನನಗೆ ಹೊಸ ಹೊಸ ಅನುಭವವನ್ನು ತಂದುಕೊಟ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ವಹಿಸಿದ್ದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಹಿಳಾ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಶಿವರಾಮು, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಬಿ.ಬಸವರಾಜು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!