Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಅಲ್ಲ….

✍️ ಶಿವಸುಂದರ್

” ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಅಲ್ಲ

ಆದರೆ……

ಅವುಗಳ ನಡುವಿನ ವ್ಯತ್ಯಾಸವೂ ಅಷ್ಟೇನೂ ದೊಡ್ಡದಿಲ್ಲ !?”

ಆತ್ಮೀಯರೇ ,

ಮತ್ತೊಂದು ಸಂವಿಧಾನ ದಿನ ಹತ್ತಿರ ಬರುತ್ತಿದೆ…

ಸಂವಿಧಾನದ ಮೇಲೆ ಸಂಘಿ ಫ್ಯಾಶಿಷ್ಟರ ದಾಳಿ ನಿರ್ಣಯಕ ಹಂತ ಮುಟ್ಟುತ್ತಿರುವ ಹೊತ್ತಿನಲ್ಲಿ, ಸಂವಿಧಾನದ ರಕ್ಷಿಸುವ ಉದ್ದೇಶದಿಂದ ಕರ್ನಾಟಕದ ಬಹುಪಾಲು ಪ್ರಗತಿಪರರು ಕಾಂಗ್ರೆಸನ್ನು ಗೆಲ್ಲಿಸುವುದು ಅನಿವಾರ್ಯ ಎಂದು ಪ್ರಾಮಾಣಿಕವಾಗಿ ಮತ್ತು ನಿಸ್ವಾರ್ಥ ವಾಗಿ ದುಡಿದರು…

ಈಗ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಆಗಿದೆ…

ಸಂಘಿ ಫ್ಯಾಶಿಸಮ್ ನ ಸಿದ್ಧಾಂತವೇ ಬ್ರಾಹ್ಮಣೀಯ ಜಾತಿ ವ್ಯವಸ್ಥೆ, ಶೂದ್ರ ದಲಿತರ ಗುಲಾಮಗಿರಿ, ಗಂಡಾಳ್ವಿಕೆ ಬೋಧಿಸುವ ಮನುಸ್ಮೃತಿ… ಅದನ್ನು ತಾತ್ವಿಕರಿಸುವ ರಾಮಾಯಣ, ಮಹಾಭಾರತ ಬೋಧನೆ.. ಜೊತೆಗೆ ಮುಸ್ಲಿಮ್ ದ್ವೇಷ ಹಾಗೂ ಕಾರ್ಪೋರೆಟ್ ಸೇವೆ…

ಕಾಂಗ್ರೇಸ್ ಅಧಿಕಾರಕ್ಕೆ ಬಂದಮೇಲೆ ಈ ದಾಳಿಗಳಿಂದ ಸಂವಿಧಾನವನ್ನು ರಕ್ಷಿಸುವ ಹೆಜ್ಜೆಗಳನ್ನೇನಾದರೂ ಇಟ್ಟಿದೆಯೇ?

ಅಸಲುಒಂದು ಪಕ್ಷವಾಗಿ ಕಾಂಗ್ರೇಸ್ ಎಂಬ ಪಕ್ಷಕ್ಕೆ ಸಂಘಿ ಸಂವಿಧಾನವಾದ ಮನುಸ್ಮೃತಿಯನ್ನು ವಿರೋಧಿಸುವ ಅಜೆಂಡಾ ಅಥವಾ ಮನಸ್ಥಿತಿ ಇದೆಯೇ?

ಕ್ರೀಡೆಯ ಹೆಸರಲ್ಲಿ ಪಾಳೆಗಾರಿ ಸಂಸ್ಕೃತಿಯ ಕಂಬಳಕ್ಕೆ ಪ್ರೋತ್ಸಾಹ, ಅದಕ್ಕೆ ಕೀಚಕ ಬ್ರಿಜ್ ಭೂಷಣ್ ನಿಗೆ ಆಹ್ವಾನ,.. ಮತ್ತೊಂದೆಡೆ ಸಂಘಿ ಸ್ವಾಮಿಗಳು ಪ್ರಾರಂಭಿಸಿರುವ ಭಗವದ್ಗೀತೆl ಅಭಿಯಾನಕ್ಕೆ ಕಾಂಗ್ರೇಸ್ ಮಂತ್ರಿಗಳ ಅಧಿಕೃತ ಬೆಂಬಲ..ರಾಮಾಯಣವೇ ನಮ್ಮ ಸಂಸ್ಕೃತಿ ಎನ್ನುವ ಕಾಂಗ್ರೇಸ್ ನ ಪ್ರಧಾನ ನಾಯಕ ಗಣ… ರಾಮಮಂದಿರ ನಿರ್ಮಾಣ ನಮ್ಮ ತಂದೆ ತಾತನ ಅಪೂರ್ಣ ಸ್ವಪ್ನ ಎನ್ನುವ ಪ್ರಿಯಾನ್ಕ ಗಾಂಧೀಗಳು …

ಅಂಬೇಡ್ಕರ್ ಅತ್ಯಂತ ಸ್ಪಷ್ಟವಾಗಿ ಭಗವದ್ಗೀತೆ ಮನುಸ್ಮೃತಿಯನ್ನು ಎತ್ತಿಹಿಡಿಯುವ ರಾಜಕೀಯ ಕಾರ್ಯಸೂಚಿ ಎನ್ನುತ್ತಾರೆ…

ಕಾಂಗ್ರೇಸ್ ಕೂಡ ಸಂವಿಧಾನದ ಮೌಲ್ಯಗಳಿಗೆ ತದ್ವಿರುದ್ಧವಾಗಿರುವ ಮನುಸ್ಮೃತಿ ಹಾಗೂ ಭಾಗವದ್ಗೀತೆಗಳನ್ನು ಎತ್ತಿ ಹಿಡಿಯುವುದಾದರೆ…. ಸಂವಿಧಾನವನ್ನು ಉಳಿಸುವುದು ಎನ್ನುವುದಕ್ಕೆ ಅರ್ಥವೇನು?

ಹಿಂದೂ ಓಟುಗಳು ತಪ್ಪುತ್ತವೆ ಎನ್ನುವ ನೆಪದಲ್ಲಿ ಹಿಜಾಬ್ ಪ್ರಕರಣದಲ್ಲಿ ಸುಪ್ರೀಂ ನಲ್ಲಿ ನಿರಂತರ ವಾಯಿದೆ ತೆಗೆದುಕೊಳ್ಳುವುದು, ಕೋಮುವಾದಿ ಗೋಹತ್ಯ ನಿಷೇಧ, ಮತಾಂತರ ನಿಷೇಧದ ಮಸೂದೆಯ ಬಗ್ಗೆ ಮಾತನಾಡದಿರುವುದು,

ಸಾಮಾಜಿಕ ನ್ಯಾಯದ ಜನಗಣತಿ, ಒಳ ಮೀಸಲಾತಿ ಇತ್ಯಾದಿಗಳ ವಿಷಯದಲ್ಲಿ ಬಿಜೆಪಿಯಂತೆ ಬಲಿಷ್ಠ ಜಾತಿಗಳಿಗೆ ಮಣೆ ಹಾಕುತ್ತಿರುವುದು….

ಅಧಿಕಾರಕ್ಕೆ ಬಂದ ಆರುತಿಂಗಳಲ್ಲಿ ಕರ್ನಾಟಕವನ್ನು ಬಿಜೆಪಿ ಕಂಡ ಕನಸಿನಂತೆ ಕಾರ್ಪೋರೆಟ್ ಲಾಭಕೋರರ ಕನಸು ತಾಣವನ್ನಾಗಿ ಮಾಡಲು… ಬೀದಿ ವ್ಯಾಪಾರಿಗಳನ್ನು, ರೈತರನ್ನು, ಕಾರ್ಮಿಕರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೀದಿ ಪಾಲು ಮಾಡುತ್ತಿರುವುದು…

ಕೊನೆಗೆ ಪ್ಯಾಲೇಸ್ತಿನ್ ನಲ್ಲಿ ಶಾಂತಿ ಕೋರುವ ಪ್ರದರ್ಶನಗಳಿಗೆ ಅವಕಾಶಕೊಟ್ಟರೆ ತಮ್ಮ ಸರ್ಕಾರಕ್ಕೆ ಕೇವಲ ಮುಸ್ಲಿಂ ಪರ ಎಂಬ ಹೆಸರು ಬಂದುಬಿಡುತ್ತದೆ ಎಂದು ಪ್ಯಾಲೆಸ್ತಿನ್ ಪರ ಪಿಸುಗುಡುಲೂ ಅವಕಾಶಕೊಡದಿರುವುದು…

ಇವೆಲ್ಲ ಸಂವಿಧಾನ ಉಳಿಸುವ ಕ್ರಮಗಳೋ ಅಥವಾ ಬಿಜೆಪಿ ಕಾಲದಲ್ಲಿ ಉಳಿದುಹೋಗಿದ್ದ ಸಂವಿಧಾನ ವಿರೋಧಿ ಸಂಘಿ ಅಜೆಂಡಾಗಳೋ?

ಹೋದ ವರ್ಷ ನವಂಬರ್ 26 ರ ಸಂವಿಧಾನ ಸಮರ್ಪಣಾ ದಿನವನ್ನು ಬಿಜೆಪಿ ವೇದಗಳ ದಿನವನ್ನಾಗಿ ಆಚರಿಸಲು ಕರೆ ನೀಡಿತ್ತಷ್ಟೆ. ಅದು ಸಂವಿಧಾನದ ಮುಸುಕಿನಲ್ಲೇ ಬ್ರಾಹ್ಮಣಶಾಹಿಯನ್ನು ಮರುಸ್ಥಾಪಿಸುವ ಪ್ರತಿಕ್ರಾಂತಿಯ ಕುತಂತ್ರವಾಗಿರುವುದು ಸ್ಪಷ್ಟ..

ಬ್ರಾಹ್ಮಣವಾದ ಭಾರತದ ಫ್ಯಾಸಿಸಂನ ಸೈದ್ಧಾಂತಿಕ ತಿರುಳು ಎಂಬುಡು ನಮಗೆಲ್ಲಾ ಗೊತ್ತಿಲ್ಲದ ವಿಷಯವೇನಲ್ಲ.

ಅದಿರಲಿ.

ಬಿಜೆಪಿಯ ಈ ಬ್ರಾಹ್ಮಣಿಯ ಕುತಂತ್ರವನ್ನು ಕಾಂಗ್ರೆಸ್, ಖಂಡಿಸಿತೇ ?

ಸಂವಿಧಾನ ಸಮರ್ಪಣಾ ದಿನದಲ್ಲಿ ಎಲ್ಲಿಯೂ “ವೇದಗಳ ಕಾಲದಲ್ಲಿ ಮನುಷ್ಯ ವಿರೋಧಿ ಜಾತಿ ವ್ಯವಸ್ಥೆ ಗಟ್ಟಿಗೊಂಡಿತೇ ವಿನಾ ಲೋಕತಂತ್ರವಿರಲಿಲ್ಲ” ಎಂದು ಯಾವ ಕಾಂಗ್ರೆಸ್ ನಾಯಕರೂ ಗಟ್ಟಿಯಾಗಿ ಹೇಳಿದ್ದು ಈವರೆಗೆ ಕಂಡು ಬಂದಿಲ್ಲ.

ಆದರೂ ಒಂದು ವ್ಯತ್ಯಾಸವಿದೆ

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ರೀತಿ ಸಂವಿಧಾನದ ಬದಲಿಗೆ ವೈದಿಕ ಬ್ರಾಹ್ಮಣ್ಯವನ್ನು ಆಚರಿಸಲು ಬಹಿರಂಗವಾಗಿ ಕರೆ ನೀಡಿರಲಿಲ್ಲ.

ಅದು ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ವ್ಯತ್ಯಾಸ … !

ಆದರೆ , ಬಿಜೆಪಿ ತನ್ನ ಸಂವಿಧಾನ ದತ್ತ ಅಧಿಕಾರವನ್ನು ಬಳಸಿ ಇಂಥಾ ಸಂವಿಧಾನ ವಿರೋಧಿ ಬ್ರಾಹ್ಮಣ ಶಾಹಿ ಕುತಂತ್ರಗಳಿಗೆ ಮುಂದಾದರೆ ..

ಕಾಂಗ್ರೆಸ್ ಅದನ್ನು ಬಹಿರಂಗವಾಗಿ ವಿರೋಧಿಸುವುದೂ ಇಲ್ಲ

ಇದು ಕಾಂಗ್ರೇಸ್ ಹಾಗೂ ಬಿಜೆಪಿಯ ನಡುವಿನ ವ್ಯತ್ಯಾಸದ ಮಿತಿ

ಆದರೆ ಅಷ್ಟೇ ಅಲ್ಲ.
ರಾಮಮಂದಿರ ನಿರ್ಮಾಣ ತಮ್ಮ ಪಕ್ಷದ ನಾಯಕರ ಕನಸು ಕೂಡ ಎಂದು ಕಾಂಗ್ರೇಸ್ ನ ರಾಷ್ಟ್ರೀಯ ನಾಯಕರು ಟ್ವಿಟ್ ಮಾಡಿದ್ದರು…

ಸಾಮಾಜಿಕ ನ್ಯಾಯದ ವಿಷಯ??

EWS ಮಸೂದೆಯನ್ನು 2013 ರಲ್ಲಿ ಸಿದ್ಧಪಡಿಸಿದ್ದು ಕಾಂಗ್ರೆಸ್ ಸರ್ಕಾರವೇ ..

ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ಈ ಬ್ರಾಹ್ಮಣೀಯ ಮಸೂದೆಯನ್ನು ಶಾಸನ ಮಾಡಲು ಮಾಡಲು ಬಿಜೆಪಿಯನ್ನು ಬೆಂಬಲಿಸಿದ್ದು ಕಾಂಗ್ರೆಸ್ ಪಕ್ಷವೇ…

ಅಂದು ಕಾಂಗ್ರೆಸ್ ಸಿದ್ದಪಡಿಸಿದ ಮಸೂದೆಯನ್ನು ..

ಇಂದು ಬಿಜೆಪಿ ಮತ್ತಷ್ಟು ಉಗ್ರವಾಗಿ ಜಾರಿ ಮಾಡುತ್ತದೆ…

ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದ್ದಿರಬಹುದಾದ ಸೈದ್ಧಾಂತಿಕ ವ್ಯತ್ಯಾಸ ಕಿರಿದಾಗುತ್ತಿರುವ ಉದಾಹರಣೆಯಲ್ಲವೇ?

ಕಾಂಗ್ರೆಸ್ ನೊಂದಿಗೆ ಆಪ್, ಬಿಎಸ್ಪಿ ಮತ್ತು ಎಡಪಕ್ಷಗಳೂ ಸಹ ಬಿಜೆಪಿಯ ಈ ಬ್ರಾಹ್ಮಣಶಾಹಿ ಕುತಂತ್ರವನ್ನು ಸಂಸತ್ತಿನಲ್ಲಿ ಬೆಂಬಲಿಸಿದ್ದವು…

(ಹೋದ ವರ್ಷ ಪ. ಬಂಗಾಳದಲ್ಲಿ ನಡೆದ ಸಹಕಾರಿ ಸಂಸ್ಥೆಗಳ ಚುನಾವಣೆ ಗಳಲ್ಲಿ ಸಿಪಿಮ್ ಮತ್ತು ಬಿಜೆಪಿ ಪಕ್ಷಗಳು ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿರುವ ಅಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ)

ಇದು ಏನನ್ನು ಸೂಚಿಸುತ್ತದೆ?

ಜನ ಚಳವಳಿಯ ಮೂಲಕ ಜನಮಾನಸದಲ್ಲಿರುವ ದ್ವೇಷರೂಪಕವಾದ ಮೋದಿಯನ್ನು ಕಿತ್ತೊಗೆಯದೆ, ಬಿಜೆಪಿಯನ್ನು ಚುನಾವಣೆ ಯಲ್ಲಿ ಸೋಲಿಸಬಹುದೇ?

ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕೆಂದರೂ ಇರುವ ಏಕೈಕ ಆದರೆ ಸುದೀರ್ಘ ಹಾಗೂ ಕಡುಕಷ್ಟದ ಮಾರ್ಗ ….

ಆದರೆ, ಅದರ ಗೈರು ಹಾಜರಿಯಲ್ಲಿ…..ಹಿಂದುತ್ವದ ಯಜಮಾನ್ಯ ಮತ್ತು ಕಾರ್ಪೋರೆಟ್ ಹಂಗಿನಲ್ಲಿರುವ ಚುನಾವಣೆ ವ್ಯವಸ್ಥೆಯ ಮೂಲಕವೇ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ಆಶಯಗಳನ್ನು ಹೊಂದಿರುವ ಪಕ್ಷಗಳು…ಸಂಘಪರಿವಾರ ಸೃಷ್ಟಿಸಿರುವ ಹಿಂದೂತ್ವ ಆಧಾರಿತ ಹಿಂದೂ ಮತದಾರರನ್ನು ಕಳೆದುಕೊಳ್ಳುವ ಭಯದಿಂದ ಮಾಡಿಕೊಳ್ಳುತ್ತಿರುವ ಈ ರಾಜಿಗಳು…..

ಬಿಜೆಪಿಯನ್ನು ಸೋಲಿಸುವ ಬದಲಿಗೆ ಹಿಂದುತ್ವದ ಯಾಜಮಾನ್ಯವನ್ನು ಗಟ್ಟಿಗೊಳಿಸುವುದಿಲ್ಲವೇ?

*ಹೀಗಾಗಿ, ಈ ಬೆಳವಣಿಗೆಗಳು ಬ್ರಾಹ್ಮಣಶಾಹಿ ಫ್ಯಾಸಿಸಂ ಗೆ ಸಂಸದೀಯ ಪ್ರತಿರೋಧ ಸಾಧ್ಯ ಎಂಬ ಭ್ರಾಂತಿ ಸಲ್ಲದು ಎಂದು ಹೇಳುತ್ತಿಲ್ಲವೇ?*

ಹಾಗೆ ನೋಡಿದರೆ ..

ಜನ ಚಳವಳಿಗಳೇ ಫ್ಯಾಸಿಸಂ ಗೆ ನೈಜ ಪರ್ಯಾಯಗಳು..

ಜನಚಳವಳಿಯ ಅರಿವಿನ ಮೂಲಕ, ಜನ ಮಾನಸದಲ್ಲಿರುವ ದ್ವೇಷಧಾರಿತ ಮೋದಿತ್ವವನ್ನು ಸೋಲಿಸದೇ, ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ

*ಬೀದಿಗಳು ನಮ್ಮವಾಗದೆ ನೈಜ ಅಧಿಕಾರ ನಮ್ಮದಾಗದು

ಕಾಂಗ್ರೆಸ್ಸಿನ ಮೇಲಿನ ನಿರೀಕ್ಷೆ, ಪ್ರತ್ಯಕ್ಷ ಹಾಗೂ ಪರೋಕ್ಷ ಅವಲಂಬನೆಯ ಧೃತರಾಷ್ಟ್ರ ಆಲಿಂಗನದಿಂದ ಜನಚಳ ವಳಿಗಳು ಹೊರಬಂದು ಬಲಿಷ್ಠ ಜನಚಲವಳಿ ಕಟ್ಟುವುದೊಂದೇ ಸಂವಿಧಾನ ಉಳಿಸಲು ಮತ್ತು ಬೆಳೆಸಲು ಇರುವ ಏಕೈಕ ದಾರಿ…

ಅಲ್ಲವೇ?

ಜಸ್ಟ್ ಆಸ್ಕಿಂಗ್

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!