Friday, November 20, 2026

ಪ್ರಾಯೋಗಿಕ ಆವೃತ್ತಿ

ಮುಂದಿನ ಬಾರಿಯೂ ಅನ್ನದಾನಿಗೆ ರಾಜಕೀಯ ಭವಿಷ್ಯವಿಲ್ಲ- ಅಂಬರೀಷ್ ಟೀಕೆ

ರಾಜಕೀಯವಾಗಿ ನಿವೃತ್ತಿ ಘೋಷಿಸಲಿ ಎಂಬ ಹಿನ್ನೆಲೆಯಲ್ಲಿಯೇ ಮಳವಳ್ಳಿ ಕ್ಷೇತ್ರದ ಮತದಾರರು ಜೆಡಿಎಸ್ ನ ಅನ್ನದಾನಿ ಅವರನ್ನು 46 ಸಾವಿರದ ಅಂತರದಲ್ಲಿ ಸೋಲಿಸಿದ್ದಾರೆ, ಅವರಿಗೆ ಮುಂದಿನ ಭಾರಿಯೂ ರಾಜಕೀಯ ಭವಿಷ್ಯವಿಲ್ಲ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್ ಟೀಕಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜಿಪುರ ವ್ಯಾಪ್ತಿಯ ಜನರು ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಹೆಚ್ಚು ಮತಗಳನ್ನು ಕೊಟ್ಟು ಗೆಲ್ಲಿಸಿ, ನಿಮ್ಮನ್ನು ಸೋಲಿಸಿದ್ದಾರೆ ಎನ್ನುವುದನ್ನು ಮರೆಯಬೇಡಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಮಾತನಾಡಿ, ಚುನಾವಣೆಯಲ್ಲಿ ಸೋತರೇ ಆರೆಸ್ಟ್ರಾದಲ್ಲಿ ಹಾಡು ಹಾಡುತ್ತೇನೆಂದು ಹೇಳಿದ್ದೀರಿ, ಸೋತಿರುವ ಅನ್ನದಾನಿ ಅವರೇ ಹಾಡು ಆಡುವುದನ್ನು ಬಿಟ್ಟು ಏಕೆ ರಾಜಕೀಯ ಮಾಡಲು ಬರುತ್ತಿದ್ದಿರಲ್ಲ ಎಂದು ವ್ಯಂಗ್ಯವಾಡಿದರು. ಒಕ್ಕಲಿಗ ನಾಯಕರ ಬೆಳವಣಿಗೆ ಸಹಿಸದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ಚಲುರಾಯಸ್ವಾಮಿ ವಿರುದ್ದ ಟೀಕಿಸುತ್ತಿದ್ದ ಸಂದರ್ಭದಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಕಾಂಗ್ರೆಸ್ ನಾಯಕರ ಪರವಾಗಿ ನಿಂತು ಮಾತನಾಡಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಲ್ಲಯ್ಯ ಮಾತನಾಡಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷರ ಬೆದರಿಕೆಗೆ ಎಂದಿಗೂ ಹೆದುರುವುದಿಲ್ಲ, ಕಳೆದ 9 ವರ್ಷಗಳಿಂದ ಮನ್‌ಮುಲ್‌ನಲ್ಲಿ ನಡೆದಿರುವ ಅವ್ಯವಹಾರ ಹಾಗೂ ಹಾಲು ನೀರು ಹಗರಣವನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತೇವೆ, ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ಅವರ ನಾಯಕತ್ವವನ್ನು ಮೆಚ್ಚಿ 35 ಸೀಟುಗಳನ್ನು ಗೆಲ್ಲಿಸಿದ್ದಾರೆ, ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆಂದು ಭವಿಷ್ಯ ನುಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್‌ರಾಜು ಮಾತನಾಡಿ, 2018ರಲ್ಲಿ ಡಾ.ಕೆ.ಅನ್ನದಾನಿ 26 ಸಾವಿರ ಮತಗಳಿಂದ ನನ್ನನ್ನು ಗೆಲ್ಲಿಸಿದ್ದು, ಐದು ವರ್ಷ ಮನೆಯಲ್ಲಿಯೇ ಇರಿ ಎಂದು ಪಿ.ಎಂ ನರೇಂದ್ರಸ್ವಾಮಿಗೆ ಹೇಳಿದ್ದರು, 2023ನೇ ವಿಧಾನಸಭಾ ಚುನಾವಣೆಯಲ್ಲಿ ಬಡ್ಡಿ ಸಮೇತ ಶಾಸಕರಾದ ಪಿ.ಎಂ ನರೇಂದ್ರಸ್ವಾಮಿ ಅವರು  ತೀರಿಸಿದ್ದಾರೆ, ಅದರಂತೆ ಅನ್ನದಾನಿ ಸುಮ್ಮನೆ ಮನೆಯಲ್ಲಿ ಕೂರದೇ ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಗೋಷ್ಠಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯರಾದ ಸುಜಾತ ಕೆ.ಎಂ ಪುಟ್ಟು, ಸುಷ್ಮಾರಾಜು, , ಟಿಎಪಿಸಿಎಂಸಿ ಅಧ್ಯಕ್ಷ ದ್ಯಾಪೇಗೌಡ ಮಾತನಾಡಿದರು.

ಇದೇ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಆರ್‌ಎನ್ ವಿಶ್ವಾಸ್, ಪುಟ್ಟಸ್ವಾಮಿ, ಮಾಜಿ ಉಪಾಧ್ಯಕ್ಷ ಸಿ ಮಾಧು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕುಳ್ಳಚನ್ನಂಕಯ್ಯ, ನಿರ್ದೇಶಕಿ ಸವಿತಾ, ಪುರಸಭೆ ಸದಸ್ಯರಾದ ಶಿವಸ್ವಾಮಿ, ಮಾಜಿ ಸದಸ್ಯ ಕಿರಣ್‌ಶಂಕರ್, ಕಿರುಗಾವಲು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನರೇಂದ್ರ, ಮುಖಂಡರಾದ ಪ್ರಕಾಶ್, ದಯಾಶಂಕರ್, ಬಂಕ್‌ಮಹದೇವು, ಶಿವಮಾದೇಗೌಡ, ಸಿದ್ದಲಿಂಗಸ್ವಾಮಿ, ಜಗದೀಶ್, ದೊರೆಸ್ವಾಮಿ, ಸೇರಿದಂತೆ ಇತರರು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ