Friday, November 20, 2026

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ನಾಯಕರಿಗೆ ಮಂಡ್ಯದಲ್ಲಿ ಅದ್ಧೂರಿ ಸ್ವಾಗತ

ಪ್ರಜಾಧ್ವನಿ ಯಾತ್ರೆಗೆ ಆಗಮಿಸಿದ ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರಿಗೆ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.

“>

ಕಾಂಗ್ರೆಸ್ ನಾಯಕರಿಗೆ ಬೃಹತ್ ಗಾತ್ರದ ಬೆಲ್ಲದ ಹಾರ, ಕಬ್ಬಿನ ಹಾರ ಹಾಗೂ ಅನಾನಸ್ ಹಾರಗಳನ್ನು ಹಾಕಿ ಬರಮಾಡಿಕೊಳ್ಳಲಾಯಿತು. ನಾಯಕರಾದ ಡಿ.ಕೆ.ಶಿವಕುಮಾರ್, ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ತೆರದ ವಾಹನದಲ್ಲಿ ಮೆರವಣಿಗೆ ನಡೆಸಿ ವೇದಿಕೆಗೆ ಕರೆತರಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೇಕೆ, ಚಪ್ಪಾಳೆ ಹಾಗೂ ಶಿಳ್ಳೆಗಳು ಮುಗಿಲು ಮುಟ್ಟಿತು.

ಅಪಾರ ಸಂಖ್ಯೆಯ ಕಬ್ಬು ಬೆಳೆಗಾರರಿರುವ ಸಕ್ಕರೆ ನಗರಿ ಮಂಡ್ಯ ಜಿಲ್ಲೆಯ ಜನರ ಪ್ರೀತಿ, ಅಭಿಮಾನ ಬೆಲ್ಲದಷ್ಟೇ ಸಿಹಿ. ಇಂದು ಪ್ರಜಾಧ್ವನಿ ಯಾತ್ರೆ ಮಂಡ್ಯ ತಲುಪಿದ ವೇಳೆ ಕಬ್ಬು ಹಾಗೂ ಬೆಲ್ಲದ ಹಾರದ ಮೂಲಕ ನಮ್ಮನ್ನು ಸ್ವಾಗತಿಸಿ ತಮ್ಮ ದೇಸಿ ಸೊಗಡನ್ನು ಪ್ರದರ್ಶಿಸಿದರು. ಪಕ್ಷದ ಕುರಿತ ಅವರ ಮಮಕಾರಕ್ಕೆ ನಾನೆಂದಿಗೂ ಚಿರ ಋಣಿ ಎಂದು ಡಿ.ಕೆ.ಶಿವಕುಮಾರ್ ಅವರು ಈ ಕ್ಷಣವನ್ನು ತಮ್ಮ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ