Thursday, November 19, 2026

ಪ್ರಾಯೋಗಿಕ ಆವೃತ್ತಿ

ರಾಹುಲ್ ಕುರಿತು ಅವಹೇಳನಕಾರಿ ಪೋಸ್ಟ್ : ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ- ರಸ್ತೆತಡೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅವಹೇಳನಕಾರಿಯಾಗಿ ರಾವಣನಿಗೆ ಹೋಲಿಕೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಿರುದ್ದ ಶನಿವಾರ ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿಯವರನ್ನು ತಾತ್ವಿಕವಾಗಿ ಎದುರಿಸಲಾಗದವರು, ಇಂತಹ ಅಪಪ್ರಚಾರದಲ್ಲಿ ತೊಡಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ, ಮಂಡ್ಯ ನಗರದ ಕಲ್ಲಹಳ್ಳಿ ಬಳಿ ಬೆಂಗಳೂರು– ಮೈಸೂರು ಹೆದ್ದಾರಿ ತಡೆ ನಡೆಸಿ ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್ ನಾಯಕನನ್ನು ರಾವಣ ಎಂಬಂತೆ ಬಿಂಬಿಸಿರುವ ಬಿಜೆಪಿಯ ಅನಾಗರಿಕ ವರ್ತನೆಯಾಗಿದೆ, ಬಿಜೆಪಿಯೂ ಯಾವಾಗಲೂ ವಾಮಮಾರ್ಗದಲ್ಲಿ ರಾಜಕಾರಣದಲ್ಲಿ ತೊಡಗಿದೆ, ಅದಕ್ಕೆ ರಾಹುಲ್ ಗಾಂಧಿಯವರನ್ನು ನೈತಿಕವಾಗಿ ಎದುರಿಸುವ ಧೈರ್ಯವಿಲ್ಲ, ಹಾಗಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ, ಅವರು ಎಷ್ಟೇ ಅಪಪ್ರಚಾರ ನಡೆಸಿದರೂ ದಿನೇ ದಿನೇ ರಾಹುಲ್ ಗಾಂಧಿಯವರು ಏನೇಂಬುದು ಜನತೆ ಅರ್ಥವಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಪಕ್ಷವು ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ‌ ಬಗ್ಗೆ ವಿಕೃತ ಪೋಸ್ಟರ್‌ ಬಳಸುತ್ತಿರುವುದು ಖಂಡನೀಯ.  ಪೋಸ್ಟರ್ ನಲ್ಲಿ ನವಯುಗದ ರಾವಣ ಎಂದು ಬಿಜೆಪಿ ಬಿಂಬಿಸಿ ಚಿತ್ರದಲ್ಲಿ ರಾವಣನಂತೆಯೇ ಹತ್ತು ತಲೆಗಳನ್ನು ಬಿಡಿಸಿರುವುದು ಖಂಡನೀಯ ಎಂದು ಕಿಡಿಕಾರಿದರು.

ಪ್ರತಿಭಟನೆ ನೇತೃತ್ವವನ್ನು ಶಾಸಕರಾದ ಪಿ ಎಂ. ನರೇಂದ್ರಸ್ವಾಮಿ, ದಿನೇಶ್ ಗೂಳಿಗೌಡ, ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಮಾಜಿ ಶಾಸಕ ಕೆ ಹೊನ್ನಲಗೆರೆ ರಾಮಕೃಷ್ಣ, ಕೀಲಾರ ರಾಧಾಕೃಷ್ಣ, ಅಪ್ಪಾಜಿ, ವಿಜಯಲಕ್ಷ್ಮಿ ರಘುನಂದನ್, ಸಿ.ಎಂ ದ್ಯಾವಪ್ಪ, ರುದ್ರಪ್ಪ ವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ