ಬಿಜೆಪಿಯದ್ದು 40% ಸರ್ಕಾರ ಎನ್ನುವ ಕಾಂಗ್ರೆಸ್ ನಾಯಕರು ಮೂರು ವರ್ಷದಿಂದ ನಿದ್ದೆ ಹೊಡಿತಿದ್ರಾ ಎಂದು ಆರೋಗ್ಯ ಸಚಿವ ಸುಧಾಕರ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಮೂರು ವರ್ಷಗಳಿಂದ ನಿದ್ದೆ ಹೊಡಿತಿದ್ದ ಕಾಂಗ್ರೆಸ್ ನಾಯಕರಿಗೆ ಚುನಾವಣಾ ವರ್ಷದಲ್ಲಿ ಈಗ ಜ್ಞಾನೋದಯವಾಯ್ತಾ? ನಮಗೂ ಮುಂಚೆ ಇದ್ದ ಸಮ್ಮಿಶ್ರ ಸರ್ಕಾರ, ಅದಕ್ಕೂ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿತ್ತು.
ಈ ಬಗ್ಗೆ ಸಿ.ಎಂ. ಬಸವರಾಜ ಬೊಮ್ಮಾಯಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಸತ್ಯಾಸತ್ಯತೆ ಆದಷ್ಟು ಬೇಗ ಹೊರಬೀಳಲಿದೆ ಎಂದರು.
ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರು RTI ಕಾರ್ಯಕರ್ತರನ್ನು,ಯಾರೋ ಅಮಾಯಕರನ್ನು ಮುಂದಿಟ್ಟುಕೊಂಡು, ಪ್ರಧಾನ ಮಂತ್ರಿ ಮತ್ತು ಸಿಎಂಗೆ ಪತ್ರ ಬರೆಸುತ್ತಿರುವುದನ್ನು, ಜಿಲ್ಲಾ ಕೇಂದ್ರಗಳಲ್ಲಿನ ಬೀದಿ ನಾಟಕ ಮಾಡಿಸುವುದನ್ನ ರಾಜ್ಯದ ಜನತೆ ನೋಡುತ್ತಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ನಿಜವಾಗಿಯೂ ತನಿಖೆ ಅಗಬೇಕೆಂದಿದ್ದರೆ ಎಸಿಬಿ, ಲೋಕಾಯುಕ್ತ,ನ್ಯಾಯಾಲಯದ ಮೊರೆ ಹೋಗಲಿ.
ಕಾಂಗ್ರೆಸ್ ನಾಯಕರಿಗೆ ತನಿಖೆ ಆಗೋದು ಬೇಕಿಲ್ಲ.ಜನರನ್ನು ದಾರಿ ತಪ್ಪಿಸುವುದಷ್ಟೇ ಅವರ ಉದ್ದೇಶ ಎಂದು ಅಣಕಿಸಿದರು.
ಇದನ್ನೂ ಓದಿ: ಕಮಲ ಹಿಡೀತಾರಾ ಅಶೋಕ್ ಜಯರಾಂ? ಏಕೆ ? ಯಾವಾಗ ?