Monday, October 28, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಒಳಮೀಸಲಾತಿ ಜಾರಿಗೆ ಸಂಪುಟದ ಸಮ್ಮತಿ ; ಸ್ವಾಗತಾರ್ಹ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯ ಒಳಮಿಸಲಾತಿ ಜಾರಿಗೆ ಒಪ್ಪಿಗೆ ಸೂಚಿಸಿರುವುದನ್ನು ಡಾ.ಬಾಬುಜಗಜೀವನರಾಮ್ ಸಂಘಗಳ ಒಕ್ಕೂಟ ಸ್ವಾಗತಿಸಿದೆ.

ಒಳಮೀಸಲಾತಿ ಜಾರಿಗಾಗಿ ನಿವೃತ್ತ ನ್ಯಾಯಮೂರ್ತಿ ಅವರ ಸಮಿತಿ ರಚನೆ ಮಾಡಲು ತೀರ್ಮಾನ ತೆಗೆದು ಕೊಂಡಿರುವುದು ಹಾಗೂ ಬಹುಮುಖ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಒಳಮೀಸಲಾತಿ ಜಾರಿ ಮಾಡವವರೆವಿಗೂ ತಡೆಯಿಡಿದಿರುವುದು ಸ್ವಾಗತಾರ್ಹ ಕ್ರಮ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎನ್ ಆರ್ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನೂ ವಿಳಂಬ ಮಾಡದೇ ಕಾಲಮಿತಿಯಲ್ಲಿ ಜಾರಿಗೆ ತರಬೇಕೆಂದು ಒತ್ತಾಯಿಸಿರುವ ಅವರು,ಸರ್ಕಾರದ ಮೇಲೆ ಒತ್ತಡ ತಂದು ಒಳಮೀಸಲಾತಿ ಜಾರಿ ಮಾಡಲು ಒತ್ತಾಯಿಸಿದ ಮಾಜಿ ಸಚಿವ ಹೆಚ್ ಅಂಜನೇಯ, ಸಚಿವರಾದ ಕೆ ಹೆಚ್ ಮುನಿಯಪ್ಪ, ಆರ್ ಬಿ ತಿಮ್ಮಪ್ಪುರ್ ಹಾಗೂ ಡಾ.ಎಲ್ ಹನುಮಂತಯ್ಯ ಅವರನ್ನು ಅಭಿನಂದಿಸಿದ್ದಾರೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತರಾಜು, ಕೆ ಆರ್ ಪೇಟೆ ತಾಲ್ಲೂಕು ಅಧ್ಯಕ್ಷ ಹೆಚ್ ಎಂ ಪುಟ್ಟರಾಜು, ಮಂಡ್ಯ ತಾಲ್ಲೂಕು ಅಧ್ಯಕ್ಷ ಮುದಗಂದೂರು ಚಂದ್ರಶೇಖರ್, ಮದ್ದೂರು ತಾಲ್ಲೂಕು ಅಧ್ಯಕ್ಷ ಚಾಮನಹಳ್ಳಿ ಮಂಜು, ಮಳವಳ್ಳಿ ತಾಲ್ಲೂಕಿನ ಅಧ್ಯಕ್ಷ ಸತೀಶ್, ಮಂಜುನಾಥ, ನಾಗಮಂಗಲದ ನರಸಿಂಹಮೂರ್ತಿ, ಶ್ರೀರಂಗಪಟ್ಟಣ ತಾಲ್ಲೂಕಿನ ಅಧ್ಯಕ್ಷ ಶಿವಕುಮಾರ್, ಪಾಂಡವಪುರ ತಾಲ್ಲೂಕಿನ ಅಧ್ಯಕ್ಷಹನುಮಯ್ಯ ಮುಂತಾದವರು ಸಂಪುಟದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!