ಮಳವಳ್ಳಿ ಪಟ್ಟಣದ ರೋಟರಿ ಪ್ರೌಢಶಾಲೆಯ ವಿದ್ಯಾರ್ಥಿ ಎಂ.ಎನ್. ಸೂರಜ್‌ಗೌಡ ಗರಿಷ್ಠ ಅಂಕ (625) ಪಡೆಯುವ ಮೂಲಕ ಜಿಲ್ಲೆಗೆ, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾನೆ.
ಈತನ ತಂದೆ ನಂಜುಂಡರವರು ಮಳವಳ್ಳಿ ಪಟ್ಟಣದಲ್ಲಿ ಕಾಯಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಾರೆ. ತಾಯಿ ಮೀನಾಕ್ಷಿ ಗೃಹಿಣಿ.
ನುಡಿ ಕರ್ನಾಟಕ.ಕಾಮ್ ಜೊತೆ ಮಾತನಾಡಿದ ಸೂರಜ್ ಗೌಡ, ಫಲಿತಾಂಶ ತುಂಬಾ ಖುಷಿ ತಂದಿದೆ.ಇದಕ್ಕಾಗಿ ರೋಟರಿ ಶಾಲೆಯ ಎಲ್ಲ ಶಿಕ್ಷಕರಿಗೂ ಹಾಗೂ ನನ್ನ ಕುಟುಂಬಕ್ಕೂ ಕೃತಜ್ಞತೆ ತಿಳಿಸುತ್ತೇನೆ. ನಾನು ದಿನಕ್ಕೆ ಮೂರರಿಂದ ನಾಲ್ಕು ಗಂಟೆ ವ್ಯಾಸಂಗ ಮಾಡುತ್ತಿದ್ದೆ.
ನಾನು ಶಾಲೆಯಲ್ಲಿ ಹೇಳಿಕೊಟ್ಟ ಪಾಠವನ್ನು ಅಂದೇ ಮನೆಗೆ ಬಂದು ಪುನರಾವರ್ತನೆ ಮಾಡುತ್ತಿದ್ದೆ.ನನಗೆ ಐಐಟಿ-ಜೆಇಇ ಓದಬೇಕೆಂಬ ಆಸೆ ಇದ್ದು, ಪ್ರಥಮ ಪಿಯುಸಿಗೆ ವಿಜ್ಞಾನ ವಿಭಾಗಕ್ಕೆ ಸೇರುವುದಾಗಿ ತಿಳಿಸಿದರು.