Wednesday, November 18, 2026

ಪ್ರಾಯೋಗಿಕ ಆವೃತ್ತಿ

ಅಧಿಕಾರವನ್ನು ಆಳ್ವಿಕೆ ಎಂದು ಭಾವಿಸದೆ ಸೇವೆ ಎಂದು ಪರಿಗಣಿಸಿ : ಡಾ.ಕುಮಾರ

ಸರ್ಕಾರಿ ಅಧಿಕಾರಿಗಳು ಅಧಿಕಾರವನ್ನು ಆಳ್ವಿಕೆ ಎಂದು ಭಾವಿಸಿದೆ, ಸಾರ್ವಜನಿಕರ ಸೇವೆಗೆ ಅಧಿಕಾರವನ್ನು ಬಳಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ಮಂಡ್ಯದ ಜಿ.ಪಂ. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸೇವಾ ಸರ್ವೊತಮ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಿ ನೌಕರರ ಕೆಲಸದ ಮಹತ್ವ ದೊಡ್ಡದು ಎಂದು ಹೇಳಿದರು.

ಎಲ್ಲರೂ ಸರ್ಕಾರಿ ಸೇವೆ ಸಲ್ಲಿಸಲು ಸಾಧ್ಯವಿಲ್ಲ, ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ ಪುಣ್ಯವಂತರು, ನಾವ್ಯಾರೂ ಉಚಿತವಾಗಿ ಸರ್ಕಾರಿ ಸೇವೆ ಸಲ್ಲಿಸುತ್ತಿಲ್ಲ ನಮಗೆ ಸರ್ಕಾರ ವೇತನ ನೀಡುತ್ತಿದೆ, ಆದರಿಂದ ಪ್ರಾಮಾಣಿಕತೆ, ಪರಿಶುದ್ಧತೆ, ಆತ್ಮಸಾಕ್ಷಿ ಹಾಗೂ ಮನಃಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

2023 ನೇ ಸಾಲಿನಲ್ಲಿ ಸೇವಾ ಸರ್ವೊತಮ ಪ್ರಶಸ್ತಿ 2024 ರಲ್ಲಿ ನೀಡಬೇಕಾಗಿತ್ತು ಆದರೆ ಕಾರಣಾಂತರದಿಂದ ಇಂದು ನೀಡುತ್ತಿದ್ದೇವೆ, 2024 ಮತ್ತು 2025 ನೇ ಸಾಲಿನ ಪ್ರಶಸ್ತಿಯನ್ನು ನೀಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ, ಪ್ರಶಸ್ತಿ ಪ್ರಕ್ರಿಯೆಗೆ ಆನ್ ಲೈನ್ ಮೂಲಕ ಅರ್ಜಿ ಪ್ರಾರಂಭಿಸಿದಾಗ ಎಲ್ಲ ಸರ್ಕಾರಿ ನೌಕರರು ಅರ್ಜಿ ಸಲ್ಲಿಸುವುದು ಸೂಕ್ತ ಎಂದರು.

ಸರ್ಕಾರಿ ನೌಕರರ ಕಾರ್ಯ ದಕ್ಷತೆ ಹೆಚ್ಚಿಸಲು ಪ್ರಶಸ್ತಿಯನ್ನು ನೀಡಲಾಗುವುದು, ಕೇವಲ 10 ಮಾತ್ರವಲ್ಲದೆ ಅನೇಕ ನೌಕರರು ಉತ್ತಮ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ, ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಬೇಕಾದರೆ ನಿಮ್ಮ ಹೊಣೆಗಾರಿಕೆ, ಕಾರ್ಯವ್ಯಾಪ್ತಿ ಅರಿತುಕೊಂಡು ಸಾಮರಸ್ಯದಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಮಾತನಾಡಿ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಪಾಟೀಲ್ ಮೊದಲನೇ ಭಾರತೀಯ ನಾಗರೀಕ ಸೇವಾ ಅಧಿಕಾರಿಗಳಿಗೆ ಭಾಷಣ ನೀಡಿದ ಏಪ್ರಿಲ್ 21ರ ದಿನವನ್ನು ನಾಗರೀಕ ಸೇವಾ ದಿನಾಚರಣೆಯಾಗಿ ಆಚರಿಸುತ್ತೇವೆ, ಅದೇ ಕಾರಣಕ್ಕಾಗಿ ಇಂದು ಸೇವಾ ಸರ್ವೋತ್ತಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ, ಇಂದು ಸೇವಾ ಸರ್ವೊತಮ ಪ್ರಶಸ್ತಿಗೆ ಭಾಜನರಾಗಿರು ಎಲ್ಲರೂ ಎಲ್ಲಾ ಸರ್ಕಾರಿ ನೌಕರರ ಪ್ರತಿನಿಧಿಗಳು ಎಂದರು.

ಸರ್ಕಾರಿ ಕ್ಷೇತ್ರದಲ್ಲಿ ಇನ್ನೂ ಅನೇಕ ನೌಕರರು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ, ಅವರೆಲ್ಲರೂ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಅವರೆಲ್ಲರೂ ಪ್ರಶಸ್ತಿಗಳಿಗೆ ಅರ್ಜಿಗಳು ಆಹ್ವಾನಿಸಿದಾಗ ಅರ್ಜಿ ಸಲ್ಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ಕೆಲಸದ ಕುರಿತು ಯಾವುದೇ ಕೀಳರಿಮೆ ತೋರಿಸಿದೆ ತಮ್ಮ ಕೆಲಸಗಳನ್ನು ಉತ್ತಮ ಕಾರ್ಯದಕ್ಷತೆಯಿಂದ ನಿರ್ವಹಿಸಿ ಎಂದು ಹೇಳಿದರು.

ನಂತರದ ಜಿಲ್ಲಾ ಸೇವಾ ಸರ್ವೊತಮ ಪ್ರಶಸ್ತಿ ಆಯ್ಕೆಯಾದ ಎಲ್ಲಾ ಸರ್ಕಾರಿ ನೌಕರರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ನಾಗೇಶ್, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿಗಳಾದ ಶ್ರೀನಿವಾಸ್ ಮತ್ತು ಶಿವಮೂರ್ತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ