Wednesday, May 8, 2024

ಪ್ರಾಯೋಗಿಕ ಆವೃತ್ತಿ

ಮೋದಿಗೆ ಕಾಣಿಸದ ಹುಲಿರಾಯ : ‘ಹಿಡಿದು ಮಾರಿಬಿಡುತ್ತಾರೆ’ ಎನ್ನುವ ಭಯವಿರಬೇಕೆಂದು ಕಾಲೆದ ಸಿದ್ದರಾಮಯ್ಯ

ಬಂಡೀಪುರದಲ್ಲಿ 22 ಕಿ.ಮೀ.ಸಫಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಹುಲಿರಾಯ ಕಾಣಿಸಲಿಲ್ಲ ಎಂಬುದು ಸುದ್ದಿಯಾಗುತ್ತಿದ್ದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಮೋದಿಯವರ ಕಾಲೆಳೆದಿದ್ದು, ”ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ..
ಅಯ್ಯೋ ಪಾಪ….!! ಇನ್ನು ಕೆಲವೇ ದಿನಗಳಲ್ಲಿ #SaveBandipur ( ಬಂಡಿಪುರ ಉಳಿಸಿ ) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ..ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೆಂದ್ರ ಮೋದಿಜೀ ಎಂದು ಕೆಣಕಿದ್ದಾರೆ.

“>

ಆರ್‌ಎಸ್‌ಎಸ್ ಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ. ನಮ್ಮ ರೈತರ ಜಾನುವಾರುಗಳಿಗೆ ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ರಾಜ್ಯದ ಬಿಜೆಪಿ ಸರ್ಕಾರ ಸರ್ಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರ್‌ಎಸ್‌ಎಸ್ ನವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಫಲವಾದ ಲಕ್ಷಾಂತರ ಎಕರೆ ವಿಸ್ತೀರ್ಣದ ಅಮೃತ್ ಮಹಲ್ ಕಾವಲು ಪ್ರದೇಶ ಮಾಯವಾಗುತ್ತಿರುವುದು ಯಾರಿಂದ? ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ ಪಶು ಆಹಾರದ ಬೆಲೆಗಳು ಮೂರು ಪಟ್ಟು ಹೆಚ್ಚಾಗಿವೆ. 2017-18ರಲ್ಲಿ 49 ಕೆ.ಜಿ ಯ ಬೂಸಾದ ಬೆಲೆ 450 ರೂ. ಇದ್ದದ್ದು ಈಗ 1,350 ರೂ.ಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400 ರೂ.ಗಳಿಂದ 1,500 ಕ್ಕೇ ಏರಿದೆ. ಏನಿದು ನರೇಂದ್ರ ಮೋದಿಜೀ ? ನಮ್ಮ ಸರ್ಕಾರ ಐದು ವರ್ಷಗಳಲ್ಲಿ 1,356 ಕೋಟಿ ರೂಪಾಯಿಗಳನ್ನು ಹಾಲಿನ ಸಬ್ಸಿಡಿ ರೂಪದಲ್ಲಿ ರೈತರಿಗೆ ಕೊಟ್ಟಿತ್ತು. ಆದರೆ ಬಿಜೆಪಿ ಸರ್ಕಾರ 2020 -21 ರಲ್ಲಿ 1,186 ಕೋಟಿ ಖರ್ಚು ಮಾಡಿದ್ದರೆ, 2023-24ಕ್ಕೆ ಕೇವಲ 1,200 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಒದಗಿಸಿ ಅನ್ಯಾಯ ಮಾಡಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಬರ್ವಾಲ್ ಗಳು, ಬಿಂದ್ರಾಗಳು, ಜೈನ್ ಗಳು, ಶರ್ಮಾಗಳ ಬೀಫ್ ರಫ್ತು ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ.
ಇವರ ಮೇಲಿರುವ ಕೃಪಕಟಾಕ್ಷ ಯಾರದ್ದು ನರೇಂದ್ರ ಮೋದಿಜೀ ಎಂದು ಪ್ರಶ್ನಿಸಿದ್ದಾರೆ.

ಗುಜರಾತ್ ರಾಜ್ಯದ ಅಮುಲ್ ಪ್ರವೇಶದಿಂದ ನಂದಿನಿಯ ಬೇಡಿಕೆ ಇನ್ನಷ್ಟು ಕುಸಿದು ಕೆಎಂಎಫ್ ಹಾಲಿನ ಸಂಗ್ರಹ ಕಡಿಮೆಯಾಗಲಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕರ ಪ್ರಮುಖ ಆದಾಯದ ಮೂಲವಾದ ಹೈನುಗಾರಿಕೆಗೆ ಯಾಕೆ ಕಲ್ಲು ಹಾಕುತ್ತಿದ್ದೀರಾ ನರೇಂದ್ರ ಮೋದಿಜೀ ? ಕೆಎಂಎಫ್ ಹಾಲು ಖರೀದಿಸುತ್ತಿಲ್ಲ ಎಂದು ಹಳ್ಳಿಗಳಲ್ಲಿ ಪಶುಪಾಲಕರು ಗೋಳಾಡುತ್ತಿದ್ದಾರೆ. ಹಾಲು ಸಂಗ್ರಹದ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದಾಗಿ ಪ್ರತಿದಿನ ಸುಮಾರು 11 ಕೋಟಿ ರೂಪಾಯಿ ಹಣ ರೈತರ ಕೈತಪ್ಪಿ ಹೋಗುತ್ತಿದೆ. ಇದೇನಾ ನಿಮ್ಮ ರೈತರ ಆದಾಯ ದುಪ್ಟಟ್ಟುಗೊಳಿಸುವ ಯೋಜನೆ ? ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. 99 ಲಕ್ಷ ಲೀಟರ್ ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ. ಇದು ನೀವು ಮತ್ತು ಅಮಿತ್ ಶಾ ಕೂಡಿ ಕೆಎಂಎಫ್ ವಿರುದ್ಧ ಮಾಡಿರುವ ಷಡ್ಯಂತ್ರವೇ
ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!