Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರೈಲಿನಲ್ಲೇ ರಿವಾಲ್ವರ್ ಬಿಟ್ಟು ಬಂದಿದ್ದ ಕಾನ್‌ಸ್ಟೇಬಲ್ ಸಸ್ಪೆಂಡ್

ರೈಲಿನ ಶೌಚಾಲಯದಲ್ಲಿ ಸರ್ವೀಸ್ ರಿವಾಲ್ವರ್ ಬಿಟ್ಟು ಬಂದಿದ್ದ ಕಾನ್‌ಸ್ಟೇಬಲ್ ನಾಗರಾಜು ಅವರನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸೇವೆಯಿಂದ ಅಮಾನತು ಮಾಡಿದ್ದಾರೆ.

ಮೊನ್ನೆ ಭಾನುವಾರ ಪೇದೆ ನಾಗರಾಜು ಬೆಂಗಳೂರಿನಿಂದ ಮಂಡ್ಯಕ್ಕೆ ಕಾಚಿಗುಡ ಎಕ್ಸ್ಪ್ರೆಸ್ ರೈಲಿನಲ್ಲಿ ಬರುವಾಗ ಶೌಚಾಲಯಕ್ಕೆ ತೆರಳಿದಾಗ ಶೌಚಾಲಯದ ವಾಶ್ ಬೆಷಿನ್‌ನ ಮೇಲೆ ಗನ್ ಇಟ್ಟು, ಶೌಚ ಮುಗಿ ಬರುವಾಗ ಗನ್ ಅಲ್ಲಿಯೇ ಬಿಟ್ಟು ಬಂದಿದ್ದರು.

ಶೌಚಕ್ಕೆ ತೆರಳಿದ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ಎಲ್ಲ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ನಂತರ ರಿವಾಲ್ವರ್ ಮೇಲಿನ ಸಂಖ್ಯೆಯ ತಪಾಸಣೆ ನಡೆಸಿದಾಗ ಇದು ಮಂಡ್ಯ ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ನಾಗರಾಜು ಎಂಬುದು ಗೊತ್ತಾಗಿತ್ತು.

ನಾಗರಾಜು ನಿವೃತ್ತ ವಿಶೇಷ ಸರ್ಕಾರಿ ಅಭಿಯೋಜಕರೊಬ್ಬರ ಅಂಗ ರಕ್ಷಕರಾಗಿ ಕರ್ತವ್ಯದಲ್ಲಿದ್ದರು. ಘಟನೆ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ನಾಗರಾಜು ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ