Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ದಿನದ ಮಹತ್ವವೇನು ? ನಾವೇಕೆ ಈ ದಿನ ಆಚರಿಸಬೇಕು…?

ನವೆಂಬರ್ 26,1949 ನಮ್ಮ ಭಾರತೀಯ ಸಂವಿಧಾನವನ್ನು ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ನೇತೃತ್ವದ ಭಾರತ ಸರ್ಕಾರ ಅಂಗೀಕಾರ ಮಾಡಿದ ದಿನ. ಈ ದಿನವನ್ನೇ ನಾವು ಸಂವಿಧಾನ ದಿನ ಎಂದು ಆಚರಣೆ ಮಾಡುತ್ತಿದ್ದೇವೆ.

2015ರ ಮೇ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು “ದೇಶದ ಜನರಲ್ಲಿ ಸಾಂವಿಧಾನಿಕ ಮೌಲ್ಯ”ಗಳನ್ನು ಮುನ್ನಡೆಸಲು ನ.26 ಅನ್ನು ಸಂವಿಧಾನ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಿತು. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಜನ್ಮದಿನದ ಸುವರ್ಣ ಸಂದರ್ಭದಲ್ಲಿ ಈ ದಿನವನ್ನು ಘೋಷಿಸಲಾಯಿತು.

ಸಂವಿಧಾನದ ಬಗ್ಗೆ ಆಸಕ್ತಿಕರ ಸಂಗತಿಗಳು

ಭಾರತೀಯ ಸಂವಿಧಾನವು ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಸಂವಿಧಾನದ ಮೂಲ ಪ್ರತಿಯನ್ನು ಕೈಯಿಂದ ಬರೆಯಲಾಗಿದೆ. ಸಂವಿಧಾನದ ಮೂಲ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ. ಇದನ್ನು ಇರಿಸಲಾಗಿರುವ ಪೆಟ್ಟಿಗೆಯು ಹೀಲಿಯಂನಿಂದ ತುಂಬಿರುತ್ತದೆ ಮತ್ತು ನಾಫ್ಥಲೀನ್ ಚೆಂಡುಗಳೊಂದಿಗೆ ಫ್ಲಾನಲ್ ಬಟ್ಟೆಯಲ್ಲಿ ಸುತ್ತಿಡಲಾಗಿದೆ. 

ಸಂವಿಧಾನದ ಪ್ರತಿಯೊಂದು ಪುಟವು ಚಿನ್ನದ ಹಾಳೆಯ ಚೌಕಟ್ಟನ್ನು ಹೊಂದಿದೆ ಮತ್ತು ಪ್ರತಿ ಅಧ್ಯಾಯದ ಆರಂಭಿಕ ಪುಟವು ಕೆಲವು ರೀತಿಯ ಕಲಾಕೃತಿಗಳನ್ನು ಹೊಂದಿದೆ. ಖ್ಯಾತ ಬರಹಗಾರ ಪ್ರೇಮ್ ನಾರಾಯಣ ರೈಜಾಡಾ ಅವರು ಸಂವಿಧಾನದ ಮೂಲ ಪ್ರತಿಗಳನ್ನು ಸಿದ್ಧಪಡಿಸಿದ್ದರು. ಭಾರತೀಯ ಸಂವಿಧಾನದ ಮೂಲ ರಚನೆಯು ಭಾರತ ಸರ್ಕಾರದ ಕಾಯಿದೆ 1935 ಅನ್ನು ಆಧರಿಸಿದೆ.

ಸಂವಿಧಾನದ ಕರಡು ಸಿದ್ದಪಡಿಸಿದ್ದು ಯಾರು ?

ಆಗಸ್ಟ್ 14, 1947 ರ ಅಸೆಂಬ್ಲಿಯ ಸಭೆಯಲ್ಲಿ ಸಂವಿಧಾನ ಸಮಿತಿಗಳನ್ನು ಪ್ರಸ್ತಾಪಿಸಲಾಯಿತು. ಸಂವಿಧಾನದ ಕರಡು ರಚನೆಯ ಸಮಿತಿಯ ಅಧ್ಯಕ್ಷರನ್ನಾಗಿ ಆಗಸ್ಟ್ 29, 1947ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನೇಮಿಸಲಾಯಿತು. ಅದರಂತೆ, 2 ವರ್ಷ 11 ತಿಂಗಳು 18 ದಿನಗಳ ಅವಧಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯು ಭಾರತ ಸಂವಿಧಾನದ ಕರಡನ್ನು ಸಿದ್ದಪಡಿತು. ಅಲ್ಲದೇ ನ.26, 1949 ರಂದು ಭಾರತ ಸರ್ಕಾರವು ಈ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತರಲು ಅಂಗಿಕರೀಸಿತು. ಅದರಂತೆ 2 ತಿಂಗಳ ನಂತರ ಅಂದರೆ, ಜನವರಿ 26, 1950ರಂದು ಭಾರತ ಸಂವಿಧಾನ ದೇಶದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು.

ಪರಿಷ್ಕೃತ ಕರಡು ಸಂವಿಧಾನವನ್ನು ಚರ್ಚಿಸುವಾಗ, ಸಭೆಯು ಒಟ್ಟು 2,473 ತಿದ್ದುಪಡಿಗಳನ್ನು ಮಂಡಿಸಿ, ಚರ್ಚಿಸಿ, ವಿಲೇವಾರಿ ಮಾಡಿತು. ಸಂವಿಧಾನವನ್ನು ಅಂಗೀಕರಿಸುವ ಮೊದಲು, ಸಂಸತ್ತಿನಲ್ಲಿ 165 ದಿನಗಳಲ್ಲಿ ಹನ್ನೊಂದು ಅಧಿವೇಶನಗಳನ್ನು ನಡೆಸಲಾಯಿತು. ಭಾರತ ಸಂವಿಧಾನಕ್ಕೆ ಸಂವಿಧಾನ ರಚನಾ ಸಮಿತಿಯ ಒಟ್ಟು 284 ಸದಸ್ಯರು ಸಹಿ ಹಾಕಿದರು.

ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಸಂವಿಧಾನದ ದೊಡ್ಡ ಪುಸ್ತಕದ ಮೇಲೆ ಬಾಗಿ ಸಹಿ ಹಾಕಿದರು. ಅಸೆಂಬ್ಲಿಯ ಅಂತಿಮ ಅಧಿವೇಶನವು  ಜನವರಿ 24, 1950 ರಂದು ಕರೆಯಲ್ಪಟ್ಟಿತು. ಪ್ರತಿಯೊಬ್ಬ ಸದಸ್ಯರು ಸಂವಿಧಾನದ ಎರಡು ಪ್ರತಿಗಳಿಗೆ ಸಹಿ ಹಾಕಿದರು.

ಒಂದು ಹಿಂದಿಯಲ್ಲಿ ಮತ್ತು ಇನ್ನೊಂದು ಇಂಗ್ಲಿಷ್‌ನಲ್ಲಿದೆ, ಮೂಲ ಸಂವಿಧಾನವನ್ನು ಕೈಯಿಂದ ಬರೆಯಲಾಗಿದೆ, ಪ್ರತಿ ಪುಟವನ್ನು ಶಾಂತಿನಿಕೇತನದ ಕಲಾವಿದ ಬೆಯೋಹರ್ ರಾಮಮನೋಹರ್ ಸಿನ್ಹಾ ಮತ್ತು ನಂದಲಾಲ್ ಬೋಸ್‌ ಅ ಅಲಂಕರಿಸಿದ್ದಾರೆ. ಇದರ ಕ್ಯಾಲಿಗ್ರಾಫರ್ ಪ್ರೇಮ್ ಬಿಹಾರಿ ನರೇನ್ ರೈಜಾದಾ. ಸಂವಿಧಾನವನ್ನು ಡೆಹ್ರಾಡೂನ್‌ನಲ್ಲಿ ಪ್ರಕಟಿಸಲಾಯಿತು ಮತ್ತು ಸರ್ವೆ ಆಫ್ ಇಂಡಿಯಾದಿಂದ ಫೋಟೋಲಿಥೋಗ್ರಾಫ್ ಮಾಡಲಾಗಿದೆ. ಮೂಲ ಸಂವಿಧಾನದ ಉತ್ಪಾದನೆಯು ಸುಮಾರು ಐದು ವರ್ಷಗಳನ್ನು ತೆಗೆದುಕೊಂಡಿತು. ಇದು ಭಾರತದ ಕಾನೂನಾಯಿತು. ಸಂವಿಧಾನ ಸಭೆಯ ಅಂದಾಜು ವೆಚ್ಚ ₹6.3 ಕೋಟಿ ಆಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!