Thursday, November 19, 2026

ಪ್ರಾಯೋಗಿಕ ಆವೃತ್ತಿ

ಮುಂದುವರೆದ ಚಿರತೆ ದಾಳಿ : ಅರೆತಿಪ್ಪೂರಿನಲ್ಲಿ ಕುರಿ ಮೇಲೆ ದಾಳಿ ಮಾಡಿದ ಚಿರತೆ

ಜಿಲ್ಲೆಯಾದ್ಯಂತ ಚಿರತೆ ಹಾವಳಿ ಮಿತಿ ಮೀರಿದೆ ಸಾಕಷ್ಠು ಹಳ್ಳಿಗಳಲ್ಲಿ ಚಿರತೆ ಕಾಣಿಸಿಕ್ಕೊಂಡ ಸಾಕು ಪ್ರಾಣಿಗಳಾದ ಕುರಿ ನಾಯಿಗಳನ್ನು ಹೊತ್ತೊಯ್ದ ಘಟನೆಗಳು ನಿತ್ಯ ವರದಿಯಾಗುತ್ತಲೆ ಇವೆ.

ಮದ್ದೂರು ತಾಲ್ಲೂಕು ಅರೆತಿಪ್ಪೂರಿನಲ್ಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ಚಿಕ್ಕಪುಟ್ಟೇಗೌಡ ಅವರ ಮಗ ಶ್ರಿನಿವಾಸ್ ಎಂಬ ರೈತರ ಕುರಿಗಳ ಮೇಲೆ‌ ದಾಳಿ ಮಾಡಿ ಚಿರತೆ ಕುರಿಗಳನ್ನು ಅರೆ ಬರೆ ತಿಂದು ಹೋಗಿರುವ ಘಟನೆ ಜರುಗಿದೆ.

ಅನೆಸೆರೆ ಕಾರ್ಯಪಡೆ ಮಾದರಿಯಲ್ಲಿ ಚಿರತೆ ಸೆರೆಹಿಡಿಯಲು ಕಾರ್ಯಪಡೆ ರಚಿಸಿರುವುದಾಗಿ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಜನರಲ್ಲಿ ನೆಮ್ಮದಿ ತಂದಿದೆ ಆದರು ಕಾರ್ಯಪಡೆ ನಮ್ಮೂರಿಗೆ ಬಂದಿಲ್ಲ ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ.

ಮೂರು ದಿನಗಳ ಹಿಂದೆಯಷ್ಠೆ ಕೂಳಗೆರೆಯ ಕಲ್ಲುಬಂಡೆಗಳ ಬಳಿ ಚಿರತೆ ಮರಿಗಳು ಪತ್ತೆಯಾಗಿವೆ. ಹಲವು ತಿಂಗಳುಗಳಿಂದ ತಿಪ್ಪೂರು, ಕೂಳಗೆರೆ, ಕೊಕ್ಕೊರೆ, ಬೆಳ್ಳೂರು ಗ್ರಾಮಗಳ ಸುತ್ತಾ ಮುತ್ತಾ ಚಿರತೆ  ಪದೇ ಪದೇ ಕಾಣಿಸಿಕೊಳ್ಳುತ್ತಲೆ ಇದ್ದರೂ,  ಆರಣ್ಯ ಇಲಾಖೆ, ತಾಲ್ಲೂಕು ಆಡಳಿತ ಈ ಬಗ್ಗೆ ಕ್ರಮ ವಹಿಸದೆ ಕೇವಲ ಬೋನು ಇಟ್ಟು, ಕೈ ತೊಳೆದುಕ್ಕೊಳ್ಳುತ್ತಿದೆಯೇ ಹೊರತು, ಈ ಭಾಗದ ಚಿರತೆ ಗಳ ಸೆರೆಹಿಡಿಯಲು ಕ್ರಮವಹಿಸುತ್ತಿಲ್ಲ. ಈ ಬಗ್ಗೆ,  ತಿಪ್ಪೂರು ಮನೋಹರ್ ಗೌಡ ( ಮನು) ಆಕ್ರೋಶ ವ್ಯಕ್ತಪಡಿಸಿ. ಹೀಗಾದರೆ ರಾತ್ರಿ ಕಾಲದಲ್ಲಿ ಪಂಪ್ ಸೆಟ್ ಗಳ ಮೂಲಕ ಹೊಲಕ್ಕೆ ನೀರುಹಾಯಿಸಲು ಹೊಗುವ ರೈತರ ರಕ್ಷಣೆ ಯಾರ ಹೊಣೆ ? ಎಂದು ಪ್ರಶ್ನಿಸಿದ್ದಾರೆ.

ಕಾಡು ಪ್ರಾಣಿಗಳ ಹಾವಳಿ ತಡೆ ಹಾಗು ಪರಿಹಾರಗಳ ಕುರಿತು ಇತ್ತೀಚಿಗೆ ಮದ್ದೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ತಾಲ್ಲೊಕು ಕಛೇರಿ ಎದುರು ಪ್ರತಿಭಟನೆ ನಡೆಸಿತ್ತು

ಈ ಕುರಿತು ನುಡಿಕರ್ನಾಟಕ.ಕಾಮ್ ಜೊತೆಗೆ ಮಾತನಾಡಿದ ನ.ಲಿ.ಕೃಷ್ಣ ಈ ಕೂಡಲೆ ಚಿರತೆ ಕಾರ್ಯಪಡೆ ಕೂಳಗೆರೆ ತಿಪ್ಪೂರು ಕೊಕ್ಕರೆ ಬೆಳ್ಳೂರು ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿ, ಚಿರತೆಗಳನ್ನು ಸೆರೆಹಿಡಿದು ಈ ಭಾಗದ ಜನರ ನೆಮ್ಮದಿಯಿಂದ ಜೀವನ ನಡೆಸಲು ಕ್ರಮವಹಿಸಬೇಕು. ಚಿರತೆದಾಳಿಗೆ ಬಲಿಯಾದ ಪ್ರತಿ ಕುರಿಗೆ ಹತ್ತು ಸಾವಿರ ರೂ ಪರಿಹಾರ ನೀಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮಾರ್ಗದರ್ಶಕ ನ.ಲಿ.ಕೃಷ್ಣ ಸರ್ಕಾರಕ್ಕೆ ಆಗ್ರಹ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ