-
‘ದೊಡ್ಡಹಟ್ಟಿ ಬೋರೇಗೌಡ’ ಫೆ,17 ರಂದು ಬೆಳ್ಳಿ ತೆರೆಗೆ
- ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ರಘು ನಿರ್ದೇಶನದ ಚಿತ್ರ
ಕೆ.ಎಂ.ರಘು ನಿರ್ದೇಶನದ ತರ್ಲೆ ವಿಲೇಜ್ ಎಂಬ ಸಿನಿಮಾ ಕೆಲ ವರ್ಷಗಳ ಹಿಂದೆ ಬಿಡುಗಡೆ ಕಂಡು, ಗಾಂಧಿನಗರದ ಬಾಕ್ಸ್ ಆಫೀಸ್ ನಲ್ಲಿ ಲಾಭ ಮಾಡುವುದರ ಮೂಲಕ ಸದ್ದು ಮಾಡಿತ್ತು. ಆಗ ಆ ಚಿತ್ರ 50 ದಿನಗಳ ಕಾಲ ಅನೇಕ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿತ್ತು.
ತದನಂತರ ‘ಪರಸಂಗ; ಎಂಬ ಸಿನಿಮಾವನ್ನು ರಘು ನಿರ್ದೇಶಿಸಿದ್ದರು. ಇದು ಒಂದು ಉತ್ತಮ ಚಿತ್ರ, ಒಂದು ಒಳ್ಳೆಯ ಸಂದೇಶ ಹೊಂದಿದ ಹೆಗ್ಗಳಿಕೆಯೊಂದಿಗೆ ಜೋಗಿ ಪ್ರೇಮ್ ಹಾಡಿದ್ದ ‘ಮರಳಿ ಬಾರದೂರಿಗೆ ನಿನ್ನ ಪಯಣ‘ ಎಂಬ ಸಾಂಗು ಜನರ ಮನಸ್ಸಲ್ಲಿ ಉಳಿಯುವುದರ ಜೊತೆಗೆ ಕೋಟಿಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿತ್ತು.
ಈಗ ಮತ್ತೊಮ್ಮೆ ಕೆ.ಎಂ.ರಘು ‘ತಿಥಿ’ ಸಿನಿಮಾದ ರೀತಿ ಅಪ್ಪಟ ಹಳ್ಳಿ ಪ್ರತಿಭೆಗಳನ್ನು ಇಟ್ಟುಕೊಂಡು ದೊಡ್ಡಹಟ್ಟಿ ಬೋರೇಗೌಡ ಎಂಬ ಸಿನಿಮಾವನ್ನು ಮಾಡಿ, ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಕರ್ನಾಟಕದ ರಾಜ್ಯಪಾಲರಿಂದ ಪಡೆಯುವುದರ ಮೂಲಕ ಮತ್ತೊಂದು ಉತ್ತಮ ಸಿನಿಮಾವನ್ನ ಕನ್ನಡ ಜನರಿಗೆ ನೀಡಲು ಬಂದಿದ್ದಾರೆ.
ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ ಗಳು ಸದ್ದು ಮಾಡುತ್ತಿವೆ, ಟ್ರೈಲರ್ ನೋಡಿದವರು ಇದೊಂದು ಅಪ್ಪಟ ನೈಜ ಸಿನಿಮಾವಾಗಿ ಸಕ್ಸಸ್ ಆಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಸಿನಿಮಾಗಳು ಗೆಲ್ಲಬೇಕು ಎಂಬುದು ನಮ್ಮ ಆಶಯಯು ಹೌದು. ಫೆಬ್ರವರಿ 17ರಂದು ಚಿತ್ರ ಕರ್ನಾಟಕದಾದ್ಯಂತ ತೆರೆ ಕಾಣುತ್ತಿದೆ ಚಿತ್ರ ಯಶಸ್ವಿ ಪ್ರದರ್ಶನ ಕಾಣಲಿ.
ಈ ಚಿತ್ರಕ್ಕೆ ಕೆ.ಎಂ.ಲೋಕೇಶ್, ಬಿ.ಸಿ. ಶಶಿಕುಮಾರ್ ಬಂಡವಾಳ ಹೂಡಿದ್ದಾರೆ. ಹರ್ಷವರ್ಧನ್ ಸಂಗೀತ ಸಂಗೀತವಿದೆ. ನಾಗರಾಜ್ ಮೂರ್ತಿ ಛಾಯಾಗ್ರಾಣವಿದೆ, ಮುಖ್ಯ ಪಾತ್ರದಲ್ಲಿ ಶಿವಣ್ಣ ಬೀರುಹುಂಡಿ, ಗೀತಾ ಸಂಪತ್, ಕಲಾರತಿ ಮಹದೇವ್ ಎಂಬ ಹೊಸ ಕಲಾವಿದ ದಂಡೆ ಇದೆ.




