Saturday, November 21, 2026

ಪ್ರಾಯೋಗಿಕ ಆವೃತ್ತಿ

ಹೇಗ್ ನಡೀತು ನಿಮ್ ‘ಸಂ’ವಾದ’ ಕಾರ್ಯಕ್ರಮ…..

ಸಂಚು : ಹೇಗ್ ನಡೀತು ನಿಮ್ ‘ಸಂ’ವಾದ’ ಕಾರ್ಯಕ್ರಮ..

ಪಂಚು : ನಿನ್ಗೆ ಹೇಗ್ ಗೊತ್ತಾಯ್ತು..’Conversation’ with Narendra Naik

ಸಂಚು : ಹೇಗೋ ಗೊತ್ತಾಯ್ತು, ಚಿತ್ರಕೂಟದವರು ಸಾಮಾನ್ಯದವರಲ್ಲ ಬಿಡು

ಪಂಚು : ಯಾಕೆ..

ಸಂಚು : ಏನಿಲ್ಲ ಪ್ರೊ.ನರೇಂದ್ರ ನಾಯಕ್ ಸರ್ ಮಂಡ್ಯಕ್ಕೆ ಬಂದಿದ್ರು, ಇದೆ ಒಳ್ಳೆ ಚಾನ್ಸು ಅಂತ, ಸಂವಾದ ಎನ್ನುವ ಒಂದ್ ಕಾರ್ಯಕ್ರಮವನ್ನ ಸಡನ್ ಆಗಿ ಆಯೋಜನೆ ಮಾಡಿದ್ರಲ್ಲ ಅದಿಕ್ಕೆ..

ಪಂಚು : ಹೌದು ಮಾಡಿದ್ರು ನಾನು ಹೋಗಿದ್ದೆ..

ಸಂಚು : ನೀನ್ ಹೋಗಿದ್ದೆ ಅಂತ ಗೊತ್ತು ಬಾಡೂಟ ಇದ್ರೆ ಮಿಸ್ ಮಾಡ್ದೆ ಹೇಳ್ತಿಯೇ, ಇಂತ ಕಾರ್ಯಕ್ರಮಕ್ಕೆ ಯಾಕ್ ಹೇಳಲ್ಲ ನನ್ಗೆ…

ಪಂಚು : ಸಂವಾದ ಕಾರ್ಯಕ್ರಮ ಅಂತ ಮಾತ್ರ ನಿನ್ಗೆ ಗೊತ್ತಿರೋದು, ಯಾವ ವಿಷಯ ಮಂಡನೆ ಆಯ್ತು ಅಂತ ಗೊತ್ತಿತ್ತಾ..

ಸಂಚು : ಗಡಿಬಿಡಿಲಿ ಪೋಸ್ಟರ್ ಸರಿಯಾಗಿ ನೋಡಿಲ್ಲ

ಪಂಚು : ಈ ಕಾರ್ಯಕ್ರಮದಲ್ಲಿ ಅತ್ಯಾಚಾರ ಪ್ರಕರಣಗಳು ಮತ್ತು ಪ್ರಭುತ್ವ ಈ ವಿಷಯದ ಬಗ್ಗೆ ವಿಚಾರ ಮಂಡನೆ ಇತ್ತು,

ಸಂಚು : ನಾನು ಬರ್ತಿದ್ದೆ,

ಪಂಚು : ನೀನೇನೋ ಬರ್ತಿದ್ದೆ ಕಣಪ್ಪ ನಿನ್ನ ಒಳಗೆ ಇರೋ ಅಂದ ಧರ್ಮಾಭಿಮಾನಿ ಕಾರ್ಯಕ್ರಮದಲ್ಲಿ ಸೌಜನ್ಯ ಕೇಸ್ ಬಗ್ಗೆ ಮತ್ತು ಕುಡುಮ ಬಗ್ಗೆ ಮಾತಾಡುವಾಗ ಹುಚ್ಚೇದ್ದು ಕುಣಿದರೆ ಏನ್ ಮಾಡೋದು ಅಂತ ನಿನ್ಗೆ ಹೇಳಿಲ್ಲ…

ಸಂಚು : ಅಲ್ಲ ದೇಶದಲ್ಲಿ ಬೇರೆ ಹೆಣ್ಣು ಮಕ್ಕಳ ಮೇಲೆ ರೇಪ್ ಹಾಗೆ ಇಲ್ವಾ… ಎಲ್ ನೋಡುದ್ರು ಸೌಜನ್ಯ ಸೌಜನ್ಯ ಅಂತ ಅವ್ಳ್ ಬಗ್ಗೆನೇ ಚರ್ಚೆ…

ಪಂಚು : ಮಗಾ ಸೌಜನ್ಯ ಕೇಸ್ ನಲ್ಲಿ, ಸೊಂತೋಷ್ ರಾವ್ ನಿರಪರಾಧಿ ಅಂತ ಗೊತ್ತಾದ್ಮೇಲೆ, ಕಾನೂನು ವ್ಯವಸ್ಥೆ ಕೈ ಕಟ್ಟಿ ಯಾಕೆ ಕುತ್ಕೋ ಬೇಕು ಅಲ್ವಾ, ಅಪರಾಧಿ ಯಾರು ಅಂತ ಪತ್ತೆ ಹಚ್ಚಬೇಕು ತಾನೇ, ಇಷ್ಟೊಂದೆಲ್ಲ ಆಗಿದೆ ನ್ಯಾಯನೂ ಸಿಕ್ಕಿಲ್ಲ ಸೌಜನ್ಯ ಕೇಸ್ ಬಗ್ಗೆ ಎಲ್ಲ ಕಡೆ ಚರ್ಚೆ ಆಗೋದು ಸರ್ವೇ ಸಾಮಾನ್ಯ..

ಸಂಚು : ಆದ್ರೆ ನ್ಯಾಯ ಕೇಳೋ ಬರದಲ್ಲಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುದು ತಪ್ಪು…

ಪಂಚು : ಧರ್ಮಸ್ಥಳ ಅಂದರೆ ಒಂದು ಜಾಗದ ಹೆಸರು, ಮೊದಲು ಕುಡುಮ ಈಗಾ ಧರ್ಮಸ್ಥಳ ಆಗಿದೆ ಅಷ್ಟೇ… ಸರಿ ಧರ್ಮಸ್ಥಳ ಅಂತೀಯಾ ಅಲ್ವಾ ಯಾವ್ ಧರ್ಮದ ಸ್ಥಳ ಹೇಳಪ್ಪ…

ಸಂಚು : ಧರ್ಮಸ್ಥಳ ಹೆಸರು ಇಟ್ಟಿದ್ದೆ ನಮ್ ವೀರೇಂದ್ರ ಹೆಗ್ಗಡೆಯವ್ರು… ಅದು ಮಂಜುನಾಥ ಸ್ವಾಮಿ ಇರೋದ್ರಿಂದ ಹಿಂದೂಧರ್ಮದ ಸ್ಥಳ…

ಪಂಚು : ಆ ಹೆಸರು ಕೊಟ್ಟಿದ್ದು ಉಡುಪಿ ಮಠದವರಂತೆ ಸ್ವಲ್ಪ ವಿಚಾರ ಮಾಡು..

ಸಂಚು : ನೀವ್ ಏನ್ರೋ ಹಳೇದೆಲ್ಲಾ ಕೆದುಕ್ತಾಯಿದ್ದೀರಿ ಅನ್ಸುತ್ತೆ…

ಪಂಚು : ನಾವ್ ಕೆದುಕದೆ ಇದ್ದರೂ ಸತ್ಯ ಎಷ್ಟು ಅಂತ ಮಣ್ಣಲ್ಲಿ ಮುಚ್ಚಿಕೊಂಡು ಇರುತ್ತೆ ಹೇಳು, ಒಂದಲ್ಲಾ ಒಂದು ದಿನ ಬೆಳಕಿಗೆ ಬರಲೇ ಬೇಕು ಅಲ್ವಾ..

ಸಂಚು : ನಮ್ ಧರ್ಮಸ್ಥಳವನ್ನ ದತ್ತಿ ಇಲಾಖೆಯ ಸ್ವಾದಿನಕ್ಕೆ ತಗೋಬೇಕು ಅಂತ ಧ್ವನಿ ಎತ್ತುತ್ತಿರುವುದು ಸರಿಯಿರಲ್ಲ ನೋಡು…

ಪಂಚು : ನೀನೊಬ್ಬ ಹಿಂದೂ ಆಗಿ ಮಸೀದಿ ಕಟ್ಟಿ ಕೊಂಡು ಜೀವ್ನ ಮಾಡ್ತಿಯಾ…

ಸಂಚು : ನಮಗೆ ಅಂತ ದರ್ದು ಬಂದಿಲ್ಲ, ಹಿಂದೂ ಧರ್ಮದವನು ಯಾವನೇ ಆಗ್ಲಿ ಈರೀತಿ ಮಾಡಲ್ಲ ಮಾಡೋಕು ನಾವ್ ಬಿಡಲ್ಲ…

ಪಂಚು : ಬೇರೆ ಧರ್ಮದವರು ಹಿಂದೂ ದೇವಸ್ಥಾನ ಕಟ್ಟಿಕೊಂಡು ಜೀವ್ನ ಮಾಡ್ತಾ ಇದ್ರೆ ಏನ್ ಮಾಡ್ತೀರಿ..

ಸಂಚು : ಕಟ್ಟಿರೋ ದೇವಸ್ಥಾನವನ್ನ ಹಿಂದೂಗಳ ಒಡೆತನಕ್ಕೆ ತಗೋತೀವಿ..

ಪಂಚು : ನಿನ್ ಹೆಸರಿಗೆ ತಗೋತಿಯ, ನಿಮ್ ಸಂಘದ ಹೆಸರಿಗೆ ಮಾಡ್ಕೊತೀಯ..

ಸಂಚು : ಕಾನೂನಿನಲ್ಲಿ ಇದಕೆಲ್ಲ ಅವಕಾಶ ಇಲ್ಲ, ಸೊ ದತ್ತಿ ಇಲಾಖೆಗೆ ಸೇರ್ಸಿತೀವಿ…

ಪಂಚು : ಈಗ ಇಡ್ದೇ ನೋಡು ನೀನು ಜಾಡು.. ಧರ್ಮಸ್ಥಳದ ಮಾಲೀಕರು ಶುದ್ಧ ಜೈನ ಧರ್ಮದವರು ಕಣಪ್ಪ, ನಿಮ್ ಧರ್ಮಸ್ಥಳ ನಿಮ್ಮ ಹಿಂದೂಗಳದು ಅಲ್ಲ ಈಗಾ ಏನ್ ಮಾಡ್ತೀರಿ…

ಸಂಚು : ಹೌದಲ್ವಾ, ಒಂದ್ ರೀತಿಲಿ ದತ್ತಿ ಇಲಾಖೆಗೆ ಸೇರೋದೇ ವಾಸಿ ಅನ್ಸುತ್ತೆ, ಧರ್ಮದ ಪರವಾಗಿ ನಿಲ್ಲೋರು ಯಾರು ಕೂಡ ಇದಕ್ಕೆ ವಿರೋಧ ಮಾಡಲ್ಲ…

ಪಂಚು : ಮುಂಚೆ ನೀನೇ ವಿರೋಧ ಮಾಡ್ತಿದ್ದೆ, ಹೀಗಾ ನೀನೇ ಸರಿ ಅಂತಿದ್ಯ..

ಸಂಚು : ವಿಚಾರ ಗೊತ್ತಿರ್ಲಿಲ್ಲ, ನಮತ್ರ ಬರೋ ವಿಚಾರ ಹೇಗಿರುತ್ತೆ ಅಂದ್ರೆ, ಧರ್ಮ ರಕ್ಷಣೆ ಮಾಡ್ಬೇಕು ಅಷ್ಟೇ ಸರಿ ತಪ್ಪು ನೋಡಲ್ಲ,

ಪಂಚು : ಧರ್ಮ ರಕ್ಷಣೆ ಮಾಡಿ,ಆದ್ರೆ ವ್ಯಕ್ತಿಗಳನ್ನು ರಕ್ಷಣೆ ಮಾಡೋಕೆ ಗುಲಾಮರಾಗಿ ನಿಮ್ಮನ್ನ ಬಳಸಿ ಕೊಳ್ಳುವವರ ಬಗ್ಗೆ ಎಚ್ಚರದಿಂದ ಇರ್ರಪ್ಪ..

ಸಂಚು : ಆದ್ರೂ ಸರಿಯಾಗಿ ತಲೆಗೆ ಹುಳ ಬಿಟ್ಟೆ ಗುರು ನೀನು, ಧರ್ಮಸ್ಥಳ ಯಾವ್ ಧರ್ಮದ ಸ್ಥಳ… 🤯🤔🥴

ಪಂಚು : ಚೆನ್ನಾಗಿ ಯೋಚ್ನೆ ಮಾಡು ನಿಮ್ಮ ಬಾಸ್ ಜೊತೆಗೆ ಸ್ವಲ್ಪ ಚರ್ಚೆಗೆ ಮಾಡಿ ಏನ್ ಅಂತಾರೆ ಅಂತ ನಮಗೂ ಹೇಳು..

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ