ಐದು ವರ್ಷಕ್ಕೊಮ್ಮೆ ನಡೆಯಲಿರುವ ಶ್ರೀ ಉಕ್ಕಲಗೆರೆ ಮಲ್ಲಣ್ಣೇಶ್ವರಸ್ವಾಮಿಯ ದೊಡ್ಡಪರ ಹಾಗೂ ವಿಶೇಷ ಪೂಜಾ ಮಹೋತ್ಸವವು ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿಯಲ್ಲಿ ಸಂಭ್ರಮದಿಂದ ಭಕ್ತಿ-ಭಾವದೊಂದಿಗೆ ನಡೆಯಿತು.
ಮಲ್ಲಣ್ಣೇಶ್ವರ ಸ್ವಾಮಿ ದೇವರ ಒಕ್ಕಲಿನವರು 5 ವರ್ಷಕ್ಕೊಮ್ಮೆ ಉಕ್ಕಲಗೆರೆ ಬೆಟ್ಟದ ತಪ್ಪಲಿನಲ್ಲಿ ಮಲ್ಲಣ್ಣೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ನಡೆಸಿದ ಬಳಿಕ ಶನಿವಾರ ಗ್ರಾಮಕ್ಕೆ ವಾಸಪ್ ಆಗಿದ್ದರು.
ಭಾನುವಾರ ಧವಸ ಧಾನ್ಯವನ್ನು ಸಂಗ್ರಹಿಸಿ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಸೋಮವಾರ 12 ಗಂಟೆಗೆ ಕಾಗೇಪುರ ಬಸವೇಶ್ವರ ಬಸಪ್ಪವನ್ನು ಕರೆಸಿ ಪೂಜೆ ಸಲ್ಲಿಸಿದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಇಂದು ರಾತ್ರಿ 8.30ಕ್ಕೆ ಮಲ್ಲಪ್ಪ, ಅಂತರಹಳ್ಳಿ ಸಿದ್ದಪ್ಪ, ಮಾತೇಮಾರಮ್ಮ, ಪಟ್ಟಲದಮ್ಮ, ಕ್ಯಾತಮ್ಮ ತಾಯಿಯ ಹೂವು ಹೊಂಬಾಳೆಯನಂತರ ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ.
ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.