Friday, September 13, 2024

ಪ್ರಾಯೋಗಿಕ ಆವೃತ್ತಿ

ಪ್ರೇಮಿಗಳ ಮೇಲೆ ದರ್ಪ ಮೆರೆದ ಪೋಲೀಸರು

ಮಂಡ್ಯ ಗ್ರಾಮಾಂತರ ಠಾಣೆಯ ಪೋಲಿಸರು ಪ್ರೀತಿಸಿ ಮದುವೆಯಾದ ಯುವ ಜೋಡಿಯ ಜೊತೆಗೆ ಅಮಾನುಷವಾಗಿ ನಡೆದುಕೊಂಡಿರುವ ಘಟನೆ  ತಾಲ್ಲೂಕಿನ ಚೀರನಹಳ್ಳಿಯಲ್ಲಿ ನಟ್ಟ ನಡುರಾತ್ರಿಯಲ್ಲಿ ನಡೆದುಹೋಗಿದೆ.

ಮದ್ಯರಾತ್ರಿ ಎರಡು ಗಂಟೆಗೆ ಚೀರನಹಳ್ಳಿಗೆ ಬಂದ ಮಂಡ್ಯ ಗ್ರಾಮಾಂತರ ಠಾಣೆ ಪೋಲಿಸರು ಮತ್ತು ಶಿಡ್ಲಘಟ್ಟ ಪೋಲಿಸರು, ಹುಡುಗನ ಮನೆಗೆ ನುಗ್ಗಿ ದುಂಡಾವರ್ತಿ ಮೆರೆದು ಅಕ್ಷರಶಃ ಧಮಕಿ ಹಾಕಿ ಗ್ರಾಮಾಂತರ ಠಾಣೆಗೆ ಕರೆದು  ತಂದಿದ್ದಾರೆ.

ಒಬ್ಬ ಹೆಣ್ಣು ಮಗಳನ್ನು ಕರೆದು ತರಲು ಮಹಿಳಾ ಪೇದೆಯನ್ನು ಕರೆದುಕೊಂಡು ಹೋಗಬೇಕು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲದ ಪೋಲಿಸ್ ವ್ಯವಸ್ಥೆ ನಡುರಾತ್ರಿಯಲ್ಲಿ, ಕಾನೂನು ಅರಿವಿಲ್ಲದೇ ಬೆತ್ತಲಾಗಿ ಹೋಗಿದೆ.

ಚೀರನಹಳ್ಳಿಯ ಹುಡುಗ ಮಲ್ಲೇಶ (ಗಂಗಾ ಮತಸ್ಥ)  ಶಿಡ್ಲಘಟ್ಟದ ಭಾಗ್ಯ (ಲಿಂಗಾಯತ) ಇವರು ಎರಡು ವರ್ಷಗಳಿಂದ ಇನ್ಸ್ಟಾಗ್ರಾಮ್ ನಲ್ಲಿ ಪರಿಚಿತರಾಗಿ ಪ್ರೀತಿಸುತ್ತಿದ್ದರು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರು ಮದುವೆಯಾಗಲು ನಿರ್ಧರಿಸಿ ರಿಜಿಸ್ಟರ್ ಮದುವೆ ಮಾಡಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿಷಯ ತಿಳಿದ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪೋಲಿಸರು ಹುಡುಗನ ಜಾಡು ಹಿಡಿದು ಮಂಡ್ಯ ಗ್ರಾಮಾಂತರ ಪೋಲಿಸರ ಸಹಕಾರದೊಂದಿಗೆ ಮಧ್ಯ ರಾತ್ರಿ, ಚೀರನಹಳ್ಳಿಯಲ್ಲಿರುವ ಹುಡುಗನ ಮನೆಗೆ ದಾಂಗುಡಿ ಇಟ್ಟಿದ್ದಾರೆ.

ಬೇಟೆಯಾಡುವ ರೀತಿಯಲ್ಲಿ ಪ್ರೇಮಿಗಳಿದ್ದ ಮನೆ ಮೇಲೆ ದಾಳಿ ಮಾಡಿ, ಒಬ್ಬ ಮಹಿಳಾ ಪೇದೆಯನ್ನು ಕರೆದುಕೊಂಡು ಹೋಗದೆ ಮಲ್ಲೇಶ ಹಾಗು ಭಾಗ್ಯ ಅವರನ್ನು ನಡುರಾತ್ರಿಯಲ್ಲಿ ಠಾಣೆಗೆ ಎಳೆದು ತರುವುದು ಎಷ್ಟು ಸರಿ?

ಕೊಲೆಪಾತಕರನ್ನು ಎಳೆದೊಯ್ಯುವಂತೆ ಅಮಾನವೀಯವಾಗಿ ಕರೆದೊಯ್ಯಲು ಮುಂದಾದ ಪೊಲೀಸರ ನಡುವಳಿಕೆಯನ್ನು ಖಂಡಿಸಿ ವಕೀಲರಾದ ಲಕ್ಷ್ಮಣ್ ಹಾಗು  ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಮಂಜುನಾಥ ರವರು ಮಧ್ಯ ಪ್ರವೇಶಿಸಿ ಮುಂದಾಗುವ ಅನಾಹುತಕ್ಕೆ ಅಂತ್ಯವಾಡಿದ್ದಾರೆ.

ಇನ್ನೂ ಘಟನೆಯ ಬಗ್ಗೆ ಮನವರಿಕೆ ಮಾಡಲು ಚಿಕ್ಕಬಳ್ಳಾಪುರ SP ರವರಿಗೆ ತುಂಬಾ ಸಲ ಫೋನಾಯಿಸಿದರೂ ಫೋನ್ ತೆಗೆಯುವುದಿಲ್ಲ. ಅದೇ ಸಂದರ್ಭದಲ್ಲಿ ಅಂದರೆ ಎರಡು ಗಂಟೆ ರಾತ್ರಿಯಲ್ಲಿ ಘಟನೆಯ ಕುರಿತು ವಿವರಿಸಲು ಮಂಡ್ಯ ಎಸ್ ಪಿ ಯತೀಶ್ ರವರಿಗೆ ವಕೀಲ ಲಕ್ಷ್ಮಣ್ ಚೀರನಹಳ್ಳಿ ಪೋನಾಯಿಸಿದ್ದಾರೆ.

ಅಷ್ಟೊತ್ತಲ್ಲೂ ಪೋನೆತ್ತಿ ಪ್ರತಿಕ್ರಿಯೆ ನೀಡಿರುವ ಮಂಡ್ಯ ಎಸ್ ಪಿ ಯತೀಶ್ ರವರು ಘಟನೆ ಮತ್ತು ಪ್ರೇಮಿಗಳ ಪರ ಅಧಿಕಾರಿಗಳು ಗಮನವಹಿಸುವಂತೆ ಮತ್ತು ತೊಂದರೆಯಾಗದಂತೆ ನೆರವಿಗೆ ನಿಂತು ದೊಡ್ಡತನ ಮೆರೆದಿದ್ದಾರೆ.

ಒಟ್ಟಿನಲ್ಲಿ ಪ್ರೇಮಿಸುವುದೇ ಅಪರಾಧ ಎಂಬಂತೆ ಕ್ಷಣಕ್ಕೊಂದು ಮರ್ಯಾದೆ ಹತ್ಯಗೆಳು ನಡೆಯುತ್ತಿರುವ ಈ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಪ್ರಜ್ಞಾಪೂರ್ವಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದೆ ಹತ್ಯೆಯನ್ನು ತಪ್ಪಿಸಿದ ಮಂಡ್ಯ ಎಸ್.ಪಿ .ಯತೀಶ್ ರವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!