ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ವತಿಯಿಂದ ಡಾ.ಹೆಚ್.ಎಲ್.ನಾಗರಾಜು ಅವರಿಗೆ ನೂತನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಡಿ.೧೪ ಮತ್ತು ೧೫ರಂದು ಬೆಂಗಳೂರಿನ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದಲ್ಲಿ ನೆರವೇರಲಿದೆ ಎಂದು ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ತಿಳಿಸಿದರು
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳು ಉತ್ತರಾಧಿಕಾರಿಗೆ ಪಟ್ಟಾಧಿಕಾರ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗೂಳೂರು ಮಹಾ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಅಧ್ಯಕ್ಷತೆಯನ್ನು ತರಳಬಾಲು ಜಗದ್ಬುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು, ಬೇಲಿಮಠ ಸಂಸ್ಥಾನದ ಶಿವಾನುಭವ ಚರಮೂರ್ತೀ ಶಿವರುದ್ರ ಮಹಾಸ್ವಾಮಿಗಳು ಸದಾಶಯನುಡಿಗಳಣ್ನಾಡುವುರು ಎಂದರು.

ಪಟ್ಟಾಧಿಕಾರ ಮಹೋತ್ಸವದಲ್ಲಿ ಹಲವು ಪೀಠಗಳ ಸ್ವಾಮೀಗಳು ಭಾಗವಹಿಸಲಿದ್ದಾರೆ. ಡಿ.೧೫ರ ಬೆಳಿಗ್ಗೆ ೧೦.೩೦ಕ್ಕೆ ನೂತನ ಪೀಠಾಧ್ಯಕ್ಷರಿಗೆ ಶುಭಹಾರೈಕೆಯ ಸಮಾರಂಭ ನಡೆಯಲಿದ್ದು. ರಾಜ್ಯದ ಮಹಾಸಂಸ್ಥಾನ ಮಠಗಳು ಹಾಗೂ ಪೀಠಗಳ ಪೀಠಾಧಿಕಪತಿಗಳು ಹಾಗೂ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಘನ ಉಪಸ್ಥಿತಿ ವಹಿಸಲಿದ್ದು, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಕಸಾಪ ನಗರ ಅಧ್ಯಕ್ಷ ಸುಜಾತ ಕೃಷ್ಣ, ನೆಲದನಿ ಬಳಗದ ಸದಸ್ಯರಾದ ಕುಮಾರ್ ಗೌಡ, ರಕ್ಷಿತ್, ಪ್ರಭುಸ್ವಾಮಿ ಇದ್ದರು.




