Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೂ.4ರ ಮತ ಎಣಿಕೆ | ಎಚ್ಚರಿಕೆಯಿಂದ ಗಮನಿಸಿ ಎಂದು ರಾಜಕೀಯ ಪಕ್ಷಗಳಿಗೆ ಸಲಹೆ ನೀಡಿದ ಕಪಿಲ್ ಸಿಬಲ್

ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಜೂನ್ 4ರಂದು ನಡೆಯಲಿದೆ. ಈಗಾಗಲೇ ಆರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಕೊನೆಯ ಮತ್ತು ಏಳನೇ ಹಂತದ ಚುನಾವಣೆಯು ಜೂನ್ 2ರಂದು ನಡೆಯಲಿದೆ.

ಈ ಮತ ಎಣಿಕೆಗೂ ಮುನ್ನ ಎಲ್ಲ ರಾಜಕೀಯ ಪಕ್ಷಗಳು ಮತ್ತು ಜನರು ತಿಳಿದಿರಬೇಕಾದ ಪ್ರಮುಖ ಮಾಹಿತಿಯನ್ನು ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ವಿವರಿಸಿದ್ದಾರೆ. ಭಾನುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಪಿಲ್ ಸಿಬಲ್ ಮತ ಎಣಿಕೆ ವೇಳೆ ತಪ್ಪದೆ ಪರಿಶೀಲಿಸ ಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

“>

 

“ಮತ ಎಣಿಕೆ ದಿನ ಇವಿಎಂ ಮಿಷನ್‌ಗಳು ತೆರೆದ ಸಂದರ್ಭದಲ್ಲಿ ಜನರು ಮತ್ತು ರಾಜಕೀಯ ಪಕ್ಷಗಳು ಏನು ಮಾಡಬೇಕು ಎಂಬ ಬಗ್ಗೆ ನಾನು ಅರಿವು ಮೂಡಿಸಲು ಬಯಸುತ್ತೇನೆ. ಇದು ಅತೀ ಮಹತ್ವಪೂರ್ಣವಾದ ವಿಚಾರವಾಗಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯ ವೇಳೆ ಎಲ್ಲ ರಾಜಕೀಯ ಪಕ್ಷಗಳು ಮತ್ತು ಏಜೆಂಟ್‌ಗಳು ಪರಿಶೀಲಿಸಬೇಕಾದ ಸುರಕ್ಷತಾ ಅಂಶಗಳ ಬಗ್ಗೆ ನಾನು ಚಾರ್ಟ್ ಒಂದನ್ನು ಮಾಡಿದ್ದೇನೆ” ಎಂದು ತಿಳಿಸಿದರು.

ಚಾರ್ಟ್‌ನಲ್ಲಿ ಪರಿಶೀಲಿಸಬೇಕಾದ ಅಂಶಗಳ ವಿವರ

“ಈ ಚಾರ್ಟ್‌ನಲ್ಲಿ ಸಿಯು ನಂಬರ್ ಎಂದರೆ ಕಂಟ್ರೋಲ್ ಯುನಿಟ್ ನಂಬರ್‌ ಅನ್ನು ಎಡ ಬದಿಯಲ್ಲಿ ಮೇಲ್ಭಾಗದಲ್ಲಿ ಬರೆಯಲಾಗಿರುತ್ತದೆ. ಸಿಯು ನಂಬರ್‌ನ ಕೆಳಗಡೆ ಬಿಯು ನಂಬರ್ ಅಂದರೆ ಬ್ಯಾಲೆಟ್ ಯುನಿಟ್ ನಂಬರ್ ಬರೆಯಲಾಗಿರುತ್ತದೆ. ಪೇಪರ್ಸ್ ಸೀಲ್ ಅದರ ನೇರವಾಗಿ ಇರಲಿದೆ. ಅಲ್ಲಿಯೇ ವಿವಿಪ್ಯಾಟ್ ನಂಬರ್ ಇರಲಿದೆ. ಲಿಖಿತ ರೂಪದಲ್ಲಿರುವ ಈ ನಾಲ್ಕು ಅಂಶಗಳನ್ನು ಪರಿಶೀಲಿಸುವುದು ಅತೀ ಮುಖ್ಯವಾಗಿದೆ” ಎಂದು ಕಪಿಲ್ ಸಿಬಲ್ ವಿವರಿಸಿದ್ದಾರೆ.

“ಕೌಂಟಿಂಗ್ ಟೇಬಲ್ ನಂಬರ್ ಒಂದರಲ್ಲಿ ಇವಿಎಂ ಇಸ್ ಆನ್ ಇಸಿಐ (EVM is on ECI) ಎಂದು ಬರೆಯಲಾಗಿರುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಮೂರನೇ ಕಾಲಮ್ ಅತೀ ಮುಖ್ಯವಾದುದ್ದು. ಮೂರನೇ ಕಾಲಮ್‌ನಲ್ಲಿ ಮತ ಎಣಿಕೆ ನಡೆಯುವ ದಿನಾಂಕ ನಮೂದಿಸಲಾಗಿರುತ್ತದೆ. ಅದರ ಕೆಳಭಾಗದಲ್ಲಿಯೇ ಸಮಯವನ್ನು ಬರೆಯಲಾಗಿರುತ್ತದೆ. ಫಲಿತಾಂಶಕ್ಕೂ ಮುನ್ನ ಈ ಸಮಯವನ್ನು ಬರೆಯಲಾಗಿರುತ್ತದೆ” ಎಂದು ತಿಳಿಸಿದ್ದಾರೆ.

“>

 

“ಈ ಸಮಯದಲ್ಲಿ ಅಂತರವಿದ್ದರೆ ಇವಿಎಂನಲ್ಲಿ ಸಮಸ್ಯೆ ಇರಬಹುದು. ಈ ಸಮಯದಲ್ಲಿ ಯಾವುದೇ ಅಂತರ ಇದೆಯೇ ಎಂದು ನೀವು ಮೊದಲು ಪರಿಶೀಲಿಸಬೇಕು. ಮತ ಎಣಿಕೆ ದಿನ ಮೆಷಿನ್‌ ತೆರೆದ ಸಂದರ್ಭದಲ್ಲಿ ನೀವು ಕೌಂಟರ್‌ ನಂಬರ್ ಒಂದರಲ್ಲಿ ಯಾವ ಸಮಯವಿದೆ ಎಂದು ನೋಡಬೇಕು. ಮೆಷಿನ್‌ನಲ್ಲಿ ಯಾವ ಸಮಯವಿದೆ ಎಂದು ನೋಡಬೇಕು. ಈ ಸಮಯದ ನಡುವೆ ವ್ಯತ್ಯಾಸವಿದ್ದರೆ ಈ ಮೆಷಿನ್ ಅನ್ನು ಮತ ಎಣಿಕೆ ಮಾಡುವುದಕ್ಕೂ ಮುನ್ನ ಬೇರೆ ಸ್ಥಳದಲ್ಲಿ ತೆರೆಯಲಾಗಿದೆ ಎಂದು ಅರ್ಥವಾಗಿರುತ್ತದೆ” ಎಂದು ಹೇಳಿದರು.

“ಅದರ ನಂತರವಿರುವ ಕಾಲಮ್ ಇನ್ನಷ್ಟು ಮುಖ್ಯವಾದುದ್ದು. ಅದುವೇ ಸಿರೀಯಲ್ ನಂಬರ್. ಈ ಸಿರೀಯಲ್ ನಂಬರ್ ಹೊಂದಾಣಿಕೆಯಾದರೆ ಸಮಸ್ಯೆಯಿಲ್ಲ. ಅದಾದ ಬಳಿಕ ಅಭ್ಯರ್ಥಿಗಳ ಹೆಸರು ಇರಲಿದೆ. ಒಟ್ಟು ಮತದಾನ ಪ್ರಮಾಣ ಇರಲಿದೆ. ಒಟ್ಟು ಮತದಾನ ಪ್ರಮಾಣವನ್ನು ನೀವು ಸರಿಯಾಗಿ ಗಮನಿಸಬೇಕು. ಕೌಂಟಿಂಗ್ ವೇಳೆ ಮತ ಹೆಚ್ಚು ಕಡಿಮೆಯಿದ್ದರೆ ಅಲ್ಲಿ ಸಮಸ್ಯೆಯಿದೆ ಎಂದರ್ಥ” ಎಂದು ಕಪಿಲ್ ಸಿಬಲ್ ಮಾಹಿತಿ ನೀಡಿದರು.

“ಈ ಎಲ್ಲ ಅಂಶಗಳನ್ನು ಸರಿಯಾಗಿ ಪರಿಶೀಲಿಸಿ ಹೋಲಿಕೆ ಮಾಡಿದ ನಂತರವೇ ನೀವು ಫಲಿತಾಂಶದ ಬಟನ್ ಅನ್ನು ಒತ್ತಲು ಅವಕಾಶ ನೀಡಬೇಕು. ಮತದಾನ ನಡೆದ ದಿನಾಂಕ ಉಲ್ಲೇಖವಾಗಿರುತ್ತದೆ. ಈ ದಿನಾಂಕದಲ್ಲಿ ವ್ಯತ್ಯಾಸವಿದೆಯೇ ಎಂದು ಪರಿಶೀಲಿಸಬೇಕು. ಮತದಾನ ಆರಂಭವಾದ ಸಮಯ ಮತ್ತು ಮತದಾನ ಮುಕ್ತಾಯವಾದ ಸಮಯ ಅತೀ ಮುಖ್ಯವಾಗಿರುತ್ತದೆ” ಎಂದು ತಿಳಿಸಿದರು.

“ಪ್ರಮುಖವಾಗಿ ಎರಡು ಅಂಶಗಳ ಬಗ್ಗೆ ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲ ಕಾಲಮ್‌ಗಳ ಪರಿಶೀಲನೆ ನಡೆದ ಬಳಿಕವೇ ಫಲಿತಾಂಶದ ಬಟನ್ ಒತ್ತಲು ಅವಕಾಶ ನೀಡಿ. ಎಲ್ಲ ರಾಜಕೀಯ ಪಕ್ಷಗಳು ಮತ್ತು ಆಯಾ ಪಕ್ಷದ ಚುನಾವಣಾ ಏಜೆಂಟ್‌ಗಳು ಈ ಮಾಹಿತಿ ತಿಳಿದಿರುವುದು ಅತೀ ಮುಖ್ಯ” ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!