Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಿಪಿಐ(ಎಂ) ನಿಂದ ರಾಜ್ಯಾದ್ಯಂತ ಜನಾಂದೋಲನ : ಸಿ.ಕುಮಾರಿ

ಸಿಪಿಐ(ಎಂ)ನ ವತಿಯಿಂದ ರಾಜ್ಯಾದ್ಯಂತ ಡಿ.೧೫ವರೆಗೆ ಜನಾಂದೋಲನ ಮೂಲಕ ಮನೆ ಮನೆ ಭೇಟಿ, ಸಹಿ ಸಂಗ್ರಹ ಹಾಗೂ ಪಕ್ಷಕ್ಕೆ ನಿಧಿ ಸಂಗ್ರಹ ಕಾರ್‍ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್‍ಯದರ್ಶಿ ಸಿ.ಕುಮಾರಿ ತಿಳಿಸಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೧ರಿಂದ ಆರಂಭಗೊಂಡಿರುವ ಜನಾಂದೋಲನವು ಡಿ.೨೧ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆಯ ಮೂಲಕ ಅಂತ್ಯಗೊಳ್ಳಲಿದೆ ಎಂದರು.

ಪ್ರತಿಭಟನಾ ಬಹಿರಂಗ ಸಭೆಯ ಮೂಲಕ ಕಾವೇರಿ ನೀರಿನ ಸಮಸ್ಯೆ, ಕೃಷಿ ಬಿಕ್ಕಟ್ಟು, ಉದ್ಯೋಗ ಖಾತರಿ, ಭೂಮಿ ಸಂಬಂಧ ಸಮಸ್ಯೆ, ಕಾರ್ಮಿಕರ ಹಕ್ಕುಗಳು, ನಿರುದ್ಯೋಗ ಸಮಸ್ಯೆ, ಭ್ರಷ್ಟಾಚಾರ ಸಮಸ್ಯೆ, ಶಿಕ್ಷಣ, ಆರೋಗ್ಯ, ರೇಷನ್ ವ್ಯವಸ್ಥೆ, ವಸತಿ-ನಿವೇಶನ, ಮಹಿಳೆಯರ ಘನತೆ, ದಲಿತ-ಆದಿವಾಸಿ, ಅಲ್ಪಸಂಖ್ಯಾತ, ಕೋಮುವಾದ-ಜಾತಿವಾದ ಸಂಬಂಧ, ಸೇವಾ ಖಾಸಗೀಕರಣ ಸಮಸ್ಯೆಗಳು, ಹೆಚ್ಚುತ್ತಿರುವ ಬಡವ-ಶ್ರೀಮಂತರ ನಡುವಿನ ಅಸಮಾನತೆ, ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು, ಧರ್ಮಸ್ಥಳದ ಸಾವುಗಳು, ಬೆಂಗಳೂರು- ಮೈಸೂರು ಹೆದ್ದಾರಿಯ ಕಳಪೆ ಕಾಮಗಾರಿಯ ತನಿಖೆ, ರಸ್ತೆ, ಚರಂಡಿ ದುರಸ್ತಿಗೆ, ಬೀದಿ ದೀಪ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸದಸ್ಯರಾದ ಚಂದ್ರಶೇಖರ್, ಸಂತೋಷ್, ಎ.ಬಿ.ಶಶಿಕಲಾ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ