Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರೈತರಿಗೆ ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿ: ಡಾ.ಕುಮಾರ

ಮಂಡ್ಯ ಜಿಲ್ಲೆಯ ಎಲ್ಲಾ ರೈತರಿಗೆ ಬೆಳೆ ವಿಮೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ನೋಂದಣಿ ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಬೆಳೆ ಕಟಾವು ಪ್ರಯೋಗ, ಕೃಷಿ ಅಂಕಿ – ಅಂಶ ಹಾಗೂ 11 ನೇ ಕೃಷಿ ಗಣತಿ ಸಮಿತಿಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರಕಾರದಿಂದ ರೈತರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

2024-25 ನೇ ಪೂರ್ವ ಮುಂಗಾರು ಹಾಗೂ ಮುಂಗಾರು ಋತುವಿನಲ್ಲಿ ರೈತರ ಬೆಳೆ ಕಟಾವು ಪ್ರಯೋಗಗಳಿಗೆ ಶೇ. 35% ರಷ್ಟು ಮೇಲ್ವಿಚಾರಣೆ ಕೈಗೊಳ್ಳಬೇಕಾಗಿದೆ. ಇದರಲ್ಲಿ ಸಾಂಖ್ಯಿಕ ಇಲಾಖೆ – ಶೇ.15%, ಕೃಷಿ ಇಲಾಖೆ – ಶೇ.5%, ಆರ್.ಡಿ.ಪಿ.ಆರ್ ಇಲಾಖೆ – ಶೇ.5% ತೋಟಗಾರಿಕಾ ಇಲಾಖೆ – ಶೇ. 5%, ಕಂದಾಯ ಇಲಾಖೆ – ಶೇ. 5% ಮೇಲ್ವಿಚಾರಣೆ ಕಡ್ಡಾಯವಾಗಿದ್ದು, ಬೇಸಿಗೆ ಋತುವಿನಲ್ಲಿ ಒಟ್ಟು 588 ಪ್ರಯೋಗಗಳನ್ನು ಅದರಲ್ಲಿ 420 ಪ್ರಯೋಗಗಳು ಕೈಗೊಂಡಿದ್ದು,116 ಪ್ರಯೋಗಗಳಿಗೆ ಮೇಲ್ವಿಚಾರಣೆ ನಿಯೋಜಿಸಿದ್ದು, ಅದರಲ್ಲಿ 23 ಪ್ರಯೋಗಗಳಿಗೆ ಮಾತ್ರ ಮೇಲ್ವಿಚಾರಣೆ ನಡೆಸಲಾಗಿರುತ್ತದೆ. ಮೇಲ್ವಿಚಾರಣೆ ನಿಯೋಜಿಸಿರುವ ಪ್ರಯೋಗಗಳಿಗೆ ಕಡ್ಡಾಯವಾಗಿ ಮೇಲ್ವಿಚಾರಣೆ ಕೈಗೊಳ್ಳುವಂತೆ ತಿಳಿಸಿದರು.

2022-23 ನೇ ಸಾಲಿನ ಹಾಗೂ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ (ವಿಮಾ)ಯೋಜನೆ ಅಡಿ ಮೂಲ ಕಾರ್ಯಕರ್ತರು ಬೆಳೆ ಕಟಾವು ಪ್ರಯೋಗಗಳ ಆಕ್ಷೇಪಣೆ ಮತ್ತು ನಷ್ಟಗೊಳಿಸಿರುವ ವಿವರದ ಬಗ್ಗೆ ಚರ್ಚಿಸಿದರು.

11 ನೇ ಕೃಷಿ ಗಣತಿಯ ಪ್ರಕಾರ ಒಂದೇ ಕುಟುಂಬಕ್ಕೆ ಸೇರಿದ ಒಬ್ಬನೇ ವ್ಯಕ್ತಿ ಅಥವಾ ಅದೇ ಕುಟುಂಬದ ಇತರ ಸದಸ್ಯರೊಡನೆ ಸೇರಿ ಹಿಡುವಳಿಯನ್ನು ಸಾಗುವಳಿ ಮಾಡುತ್ತಿದ್ದರೆ ಅಂತಹ ಹಿಡುವಳಿಯನ್ನು ವೈಯಕ್ತಿಕ ಹಿಡುವಳಿದಾರರ ಸಂಖ್ಯೆ ಎಂದು ಪರಿಗಣಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ವೈಯಕ್ತಿಕ ಹಿಡುವಳಿದಾರರ ಸಂಖ್ಯೆ ಶೇ. 22.9% ಹಾಗೂ ವಿಸ್ತೀರ್ಣ ಪ್ರಮಾಣದಲ್ಲಿ ಶೇ. 13% ರಷ್ಟು ಹೆಚ್ಚಾಗಿರುತ್ತದೆ. ಜಿಲ್ಲೆಯಲ್ಲಿ ಜಂಟಿ ಹಿಡುವಳಿದಾರರು ಹಾಗೂ ವೈಯಕ್ತಿಕ ಹಿಡುವಳಿದಾರರ ಸಂಖ್ಯೆಯ ಬಗ್ಗೆ ಚರ್ಚಿಸಿ, ಜಿಲ್ಲೆಯಲ್ಲಿ ವೈಯಕ್ತಿಕ ಹಿಡುವಳಿದಾರರ ಸಂಖ್ಯೆ ಶೇ. 22.9% ಹಾಗೂ ವಿಸ್ತೀರ್ಣ ಪ್ರಮಾಣದಲ್ಲಿ ಶೇ. 13 ರಷ್ಟು ಹೆಚ್ಚಾಗಿರುತ್ತದೆ ಎಂದರು.

ಪ್ರತಿ ವರ್ಷವೂ ಬೆಳೆ ಸಮೀಕ್ಷೆ

ಪ್ರತಿ ವರ್ಷವೂ ಬೆಳೆ ಸಮೀಕ್ಷೆಯನ್ನು ಜಿಐಎಸ್ ಆಧಾರಿತ ಮೊಬೈಲ್ ಆಪ್ ಮೂಲಕ ಪ್ರತಿ ಫ್ಲಾಟ್ ಗಳ ಬೆಳೆ ಸಮೀಕ್ಷೆ ನಡೆಸಿ ಬೆಳೆ ಸಮೀಕ್ಷೆಯಿಂದ ಬಂದ ದತ್ತಾಂಶಗಳನ್ನು ಮೇಲ್ವಿಚಾರಕರು ಮೇಲ್ವಿಚಾರಣೆ ಮಾಡಬೇಕು. ಬೆಳೆ ಸಮೀಕ್ಷೆಯ ಬೆಳೆವಾರು ದತ್ತಾಂಶಗಳನ್ನು ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಸಮನ್ವಯ ದೊಂದಿಗೆ ತಾಲೂಕು ಮಟ್ಟದಲ್ಲಿ ಬಳೆ ಕ್ಷೇತ್ರ ಮರ ಹೊಂದಾಣಿಕ ವರದಿಯನ್ನು ತಯಾರಿಸಿ ತಾಲೂಕು ಮಟ್ಟದ ಸಮನ್ವಯ ಸಮಿತಿಯಿಂದ ಅನುಮೋದನೆಗೊಂಡ ವರದಿಯನ್ನು ದೃಢೀಕರಿಸಿ ಸಲ್ಲಿಸಬೇಕು ಎಂದರು.

ಬೇಸಿಗೆ ಋತುವಿನ ಬೆಳೆ ಸಮೀಕ್ಷೆಯು ಪೂರ್ಣಗೊಂಡಿದ್ದು ಬೆಳೆ ಸಮೀಕ್ಷೆಯನ್ನು ಖಾಸಗಿ ನಿವಾಸಿಗಳು ಕೈಗೊಂಡಿದ್ದು ಕೆಲವು ಹೊಸ ಬೆಳೆಗಳ ಹೆಸರನ್ನು ನಮೂದು ಮಾಡಿ ಬೇರೆ ಬೆಳೆಯ ಛಾಯಾಚಿತ್ರ ತೆಗೆದು ನಮೂದು ಮಾಡಿರುತ್ತಾರೆ. ಖಾಸಗಿ ನಿವಾಸಿಗಳು ಕೈಗೊಂಡಿರುವ ಬೆಳೆ ಸಮೀಕ್ಷೆಯ ಛಾಯಾಚಿತ್ರಗಳನ್ನು ಹಾಗೂ ಬೆಳೆ ವಿವರಗಳನ್ನು ಮೇಲ್ವಿಚಾರಕರು ಪರಿಶೀಲಿಸದೆ ಎಲ್ಲ ಸರ್ವೆ ನಂಬರ್ ಗಳನ್ನು ಅನುಮೋದನೆ ನೀಡುತ್ತಿರುವುದರಿಂದ ಬೆಳೆಗಳ ವಿಸ್ತೀರ್ಣದಲ್ಲಿ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಮೇಲ್ವಿಚಾರಕರು ಛಾಯಾಚಿತ್ರಗಳನ್ನು ಹಾಗೂ ನಮೂದು ಮಾಡಿರುವ ಬೆಳೆ ವಿವರಗಳನ್ನು ಪರಿಶೀಲಿಸಿ ನಂತರ ಅನುಮೋದನೆ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೇಶವಮೂರ್ತಿ ಅವರು ಬೆಳೆ ಕಟಾವು, ಕೃಷಿ ಅಂಕಿ – ಅಂಶಗಳಿಗೆ ಸಂಬಂಧಿಸಿದ ವರದಿಯನ್ನು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಧನುಷ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಕೆ ಎನ್ ರೂಪಶ್ರೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೆಚ್ ಕೆ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ