Friday, October 11, 2024

ಪ್ರಾಯೋಗಿಕ ಆವೃತ್ತಿ

ದೇವಾಲಯಗಳು ನಮ್ಮ ಸಂಸ್ಕೃತಿ – ಇತಿಹಾಸದ ಜೀವಂತ ಸ್ಮಾರಕಗಳು

ದೇವಾಲಯಗಳು ಶರಣ ಸಂಸ್ಕೃತಿ ಹಾಗೂ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳು ಎಂದು ವರಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಆದಿಹಳ್ಳಿ ಗ್ರಾಮದಲ್ಲಿ ಇಂದು 80 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕೋಡಾಲರಾಯಸ್ವಾಮಿ ದೇವಾಲಯದ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಗ್ರಾಮಸ್ಥರು ನೀಡಿದ ಆತ್ಮೀಯ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದು ಮಾನವರಾದ ನಮಗೆ ಅನಿವಾರ್ಯವಾಗಿದೆ.ದೇವಾಲಯದಿಂದ ಮನಸ್ಸಿಗೆ ಶಾಂತಿ,ನೆಮ್ಮದಿಯು ದೊರೆಯುತ್ತದೆ. ಆದಿಹಳ್ಳಿ ಗ್ರಾಮಸ್ಥರು ಶಿಥಿಲವಾಗಿದ್ದ ಶ್ರೀ ಕೋಡಾಲರಾಯಸ್ವಾಮಿ ದೇವಾಲಯವನ್ನು ಕಲ್ಲಿನಲ್ಲಿ ಪುನರ್ ನಿರ್ಮಾಣ ಮಾಡಿಸಿ ಜೀರ್ಣೋದ್ಧಾರ ಮಾಡಿ ಇಡೀ ನಾಗರಿಕ ಸಮಾಜವೇ ಮೆಚ್ಚಿ ಒಪ್ಪುವಂತಹ ಕೆಲಸ ಮಾಡಿದ್ದಾರೆ ಎಂದರು.

ಈ ಹಿಂದೆ ಗ್ರಾಮದಲ್ಲಿ ನಡೆದ ಬೀರೇದೇವರ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದೆ. ಗ್ರಾಮದಲ್ಲಿ ಮತ್ತೊಂದು ದೇವಾಲಯವನ್ನು ನಿರ್ಮಿಸುತ್ತಿರುವ ಬಗ್ಗೆ ವಿಚಾರ ತಿಳಿದು ನನಗೆ ಸಂತೋಷವಾಗಿದೆ. ನಮಗೆ ದೈನಂದಿನ ಬದುಕಿನ ಜೊತೆಗೆ ದೇವರು ಮತ್ತು ಧರ್ಮದ ವಿಚಾರವೂ ಕೂಡ ಅಷ್ಟೇ ಮುಖ್ಯವಾಗಿದೆ. ಈ ದಿಕ್ಕಿನಲ್ಲಿ ಆದಿಹಳ್ಳಿ ಗ್ರಾಮಸ್ಥರ ಶ್ರದ್ಧಾಭಕ್ತಿ ಮತ್ತು ಆಚಾರಗಳು ನಮಗೆಲ್ಲರಿಗೂ ಸ್ಪೂರ್ತಿಧಾಯಕವಾಗಿವೆ ಎಂದು ಯತೀಂದ್ರ ಹೇಳಿದರು.

ಮಾಜಿ ಶಾಸಕ ಬಿ.ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದಿಹಳ್ಳಿ ಗ್ರಾಮಸ್ಥರ ದೈವ ಕಾರ್ಯ ಹಾಗೂ ದೇವಾಲಯಗಳ ಪುನರುಜ್ಜೀವನ ಸಾಹಸವನ್ನು ಹೊಗಳಿದರು.

ಇದೇ ಸಂದರ್ಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾಮಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿಗಳನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.

ಜಿ.ಪಂ ಮಾಜಿ ಸದಸ್ಯರಾದ ಬಿ.ನಾಗೇಂದ್ರಕುಮಾರ್, ಕೋಡಿಮಾರನಹಳ್ಳಿ ದೇವರಾಜು, ಸಮಾಜ ಸೇವಕ ವಿಜಯ್ ರಾಮೇಗೌಡ, ಕೆಯುಐಡಿಎಫ್ ಸಿ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ರಮೇಶ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನ್ ಮುಲ್ ನಿರ್ದೇಶಕ ಹೆಚ್.ಟಿ.ಮಂಜು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಮುಖಂಡರಾದ ರಾಧಾಶ್ರೀ ನಾಗೇಶ್, ಲಕ್ಷ್ಮಮ್ಮ ಮಹದೇವಣ್ಣ, ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಆರ್.ರವೀಂದ್ರಬಾಬು, ಉದ್ಯಮಿ ಮುಂಬೈ ರಮೇಶ್, ರಂಗನಾಥಪುರ ಕ್ರಾಸ್ ಗ್ರಾಮ ಪಂಚಾಯತಿ ಅಧ್ಯಕ್ಷ ಗೊರವಿ ಮಂಜೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!