Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಪಿಕೆ(APK) ಮೂಲಕ ಸೈಬರ್ ವಂಚನೆ| ಎಚ್ಚರ ತಪ್ಪಿದ್ರೆ ನಿಮ್ಮ ಬ್ಯಾಂಕ್ ಖಾತೆಯ ಹಣ ಮಂಗಮಾಯ!

ಆಧುನಿಕ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳು ಆಗುತ್ತಿವೆ. ಡಿಜಿಟಲ್ ಬ್ಯಾಂಕಿಂಗ್‌ನಿಂದ ಇಡೀ ಬ್ಯಾಂಕಿಂಗ್ ವ್ಯವಸ್ಥೆಯೇ ಬದಲಾಗಿದೆ. ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರಗಳು ಸ್ಮಾರ್ಟ್‌ಫೋನ್‌ಗಳ ಮೂಲಕ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತವೆ. ಅದೇ ಸಮಯದಲ್ಲಿ, ಸೈಬರ್ ಅಪರಾಧಿಗಳು ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಗ್ರಾಹಕರ ಮುಗ್ಧತೆಯ ಜೊತೆಗೆ ಸೈಬರ್ ಕ್ರಿಮಿನಲ್ ಗಳು ದಿನವೂ ಹೊಸ ಹೊಸ ತಂತ್ರಗಳನ್ನು ಹೆಣೆದು ವಂಚನೆಗೆ ಮುಂದಾಗುತ್ತಿದ್ದಾರೆ. ಇದರಿಂದ ಬ್ಯಾಂಕ್ ನವರು ಕಾಲಕಾಲಕ್ಕೆ ಗ್ರಾಹಕರನ್ನು ಎಚ್ಚರಿಸುತ್ತಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳಾದ ಎಸ್‌ಬಿಐ ಮತ್ತು ಪಿಎನ್‌ಬಿ ಜೊತೆಗೆ ಖಾಸಗಿ ವಲಯದ ಬ್ಯಾಂಕ್‌ಗಳಾದ ಐಸಿಐಸಿಐ ಮತ್ತು ಆಕ್ಸಿಸ್ ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ಮೊಬೈಲ್ ಫೋನ್‌ಗಳಿಗೆ ಕಳುಹಿಸಲಾದ ಅನಗತ್ಯ ಸಂದೇಶಗಳು ಮತ್ತು ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ… ಒಟಿಪಿಗಳು, ಡೆಬಿಟ್/ಕ್ರೆಡಿಟ್ ಕಾರ್ಡ್ ಸಂಖ್ಯೆಗಳು, ಪಿನ್ ಸಂಖ್ಯೆಗಳು ಇತ್ಯಾದಿಗಳನ್ನು ಯಾರಿಗೂ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಅಪರಿಚಿತ ಆ್ಯಪ್‌ಗಳಿಗೆ ಹೋಗದಂತೆ ಮತ್ತು ಅವುಗಳನ್ನು ಇನ್ ಸ್ಟಾಲ್ ಮಾಡದಂತೆ ಸೂಚಿಸಲಾಗಿದೆ. ಇತ್ತೀಚೆಗೆ, ಎಸ್‌ಬಿಐ ತನ್ನ ಗ್ರಾಹಕರನ್ನು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಬಲೆಗೆ ಬೀಳಿಸಲು ಯತ್ನಿಸುವ ವಂಚಕರ ಪ್ರಕರಣ ಬೆಳಕಿಗೆ ಬಂದ ನಂತರ ಈ  ಎಚ್ಚರಿಕೆ ನೀಡಲಾಗಿದೆ.

ಗ್ರಾಹಕರಿಗೆ ಸಂದೇಶ ಹಾಗೂ ಫೋನ್ ಕರೆಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದಂತೆ, ಸ್ಕ್ಯಾಮರ್‌ಗಳು ಈಗ ಅಪ್ಲಿಕೇಶನ್‌ಗಳ ಮೂಲಕ ಮೋಸದ ಬಲೆ ಬೀಸುತ್ತಿದ್ದಾರೆ. ಎಪಿಕೆ ಫೈಲ್ ಗಳ ಮೂಲಕ  ಗ್ರಾಹಕರ ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿನ ಹಣ ದರೋಡೆ ಮಾಡುತ್ತಿದ್ದಾರೆ. APK ಎಂದರೆ ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್. ಈ ಎಪಿಕೆ ಮೂಲಕ ಸೈಬರ್ ಅಪರಾಧಿಗಳು ವಂಚನೆ ಮಾಡುತ್ತಿದ್ದಾರೆ ಎಂದು ಎಸ್‌ಬಿಐ, ಐಸಿಐಸಿಐ ಮತ್ತು ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿವೆ. ಆದರೂ ಗ್ರಾಹಕರು ಯಾಮಾರಿ ಹಣ ಕಳೆದುಕೊಳ್ಳುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಎಪಿಕೆ ಆಪ್ ನಿಮ್ಮ ಮೊಬೈಲ್ ಗೂ ಬರಬಹುದು ನೀವು ಅದನ್ನು ಇನ್ ಸ್ಟಾಲ್ ಮಾಡಿದರೆ, ನಿಮ್ಮ ಖಾತೆಯಲ್ಲಿನ ಹಣ ಕ್ಷಣಾರ್ಧದಲ್ಲಿ ವಂಚಕರ ಪಾಲಾಗುತ್ತದೆ, ಈ ಬಗ್ಗೆ ಗ್ರಾಹಕರು ಎಚ್ಚರಿಕೆ ವಹಿಸಬೇಕಿದೆ.

ಅಕ್ಸಿಸ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಬ್ಯಾಂಕ್ ಅಫ್ ಇಂಡಿಯಾ, ಕೋಟ್ಯಾಕ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಸೇರಿದಂತೆ ಇನ್ನೂ ಹಲವು ಬ್ಯಾಂಕ್ ಗಳ ಹೆಸರಿನಲ್ಲಿ ಬಹುಮಾನಗಳು ಬಂದಿದೆ ಎಂದು ಎಪಿಕೆ ಫೈಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸಂದೇಶಗಳನ್ನು ಕಳಿಸಿ ನಮ್ಮ ಬ್ಯಾಂಕ್ ಖಾತೆಯ ವಿವರಗಳನ್ಮು ಕದಿಯಲು ಮೊಬೈಲ್ ನೊಳಗೆ ನುಸುಳುತ್ತಾರೆ ಈ ಬಗ್ಗೆ ಎಚ್ಚರಿಕೆಯಿಂದಿರಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗಳ ಸಿವಿವಿ ನಂಬರ್ ಕದಿಯಲು ಒಟಿಪಿ ಹೇಳಿ, ಸಿವಿವಿ ನಂಬರ್ ಪಡೆದು ಹ್ಯಾಕರ್ ಗಳು ಹಣ ಲಪಾಟಿಸುತ್ತಾರೆ ಈ ಬಗ್ಗೆ ಎಚ್ಚರಿಕೆವಹಿಸುವುದರ ಜೊತೆ, ಇಂತಹ ಮಾಹಿತಿಯನ್ನು ಅಪರಿಚರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ, ಸೈಬರ್ ವಂಚನೆಯಿಂದ ಪಾರಾಗಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!