‘ಹೇ ನಳಿನ್ ಕುಮಾರ್ ಕಟೀಲ್ ನೀನು ದೇವೇಗೌಡರ ಚಪ್ಪಲಿಗೆ ಆಗಲ್ಲ, ಹೆಂಡ ಕುಡ್ದು ಮಾತಾಡ್ತೀಯಾ ? ದೇವೇಗೌಡ ಬಗ್ಗೆ ಮಾತನಾಡುವಾಗ ಚೆನ್ನಾಗಿ ನಾಲಿಗೆ ಉಜ್ಜಿಕೊಂಡು ಮಾತಾಡು’ ಎಂದು ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ಕೆಂಡಕಾರಿದರು.
ಕಟೀಲ್ ದೇವೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಅಕ್ಷರಶಃ ಕೆಂಡಾಮಂಡಲರಾದ ಡಿ.ರಮೇಶ್ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಟೀಲ್ ಗೆ ತರಾಟೆ ತೆಗೆದುಕೊಂಡರು. ‘ದೇವೇಗೌಡರ ಕುಟುಂಬ ಮಾತ್ರ ಕುಟುಂಬ ರಾಜಕಾರಣ ಮಾಡ್ತಿದ್ಯಾ ? ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ವಾ ? ರಾಜ್ಯದಲ್ಲಿ ಸರ್ಕಾರ ರಚಿಸಲು ನಮ್ ಮನೆ ಬಾಗಿಲಿಗೆ ಬಂದು ಯಾಚನೆ ಮಾಡಿದ್ದು ನೀವು ? ಈಗ ನಮ್ಮ ವಿರುದ್ಧವೇ ಮಾತಾಡ್ತೀರಾ ? ‘ಕಟೀಲ್ ನಿನಗೆ ಎಚ್ಚರಿಕೆ ನೀಡುತ್ತಿದ್ದೇನೆ, ನೀನು ಹೀಗೆ ನಾಲಿಗೆ ಹರಿಯಬಿಟ್ಟರೇ ನಿನಗೆ ಮಸಿ ಬಳಿಯುವ ಕೆಲಸ ಮಾಡುತ್ತೇವೆ’ ಎಂದು ಎಚ್ಚರಿಕೆ ಕೊಟ್ಟರು.




