Sunday, November 22, 2026

ಪ್ರಾಯೋಗಿಕ ಆವೃತ್ತಿ

”ದಳಪತಿ”ಯನ್ನು ಸ್ವಾಗತಿಸಿದ ಬೃಹತ್ ವಿಶೇಷ ಹಾರಗಳು !

ಪಂಚರತ್ನ ಯಾತ್ರೆ ಮೂಲಕ ನಿನ್ನೆ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರವನ್ನು ಪ್ರವೇಶಿಸಿದ ಜೆಡಿಎಸ್ ನಾಯಕ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಅವರ ಅಭಿಮಾನಿಗಳು ಈ ಬಾರಿ ವಿಶೇಷವಾದ ಹಾರಗಳ ಮೊರೆ ಹೋದರು.

“>

ನಿನ್ನೆ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಕೈಗೊಂಡ ತಮ್ಮ ನೆಚ್ಚಿನ ನಾಯಕನನ್ನು ಬೆಲ್ಲದಿಂದಲೇ ಕಟ್ಟಿದ ಬೃಹತ್ ಹಾರವನ್ನು ಕ್ರೇನ್ ಸಹಾಯದಿಂದ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರಿಗೆ ಹಾಕಿ ಅಭಿಮಾನ ಮೆರೆದರು.

ಯಾತ್ರೆಯುದ್ದಕ್ಕೂ ಕುಮಾರಸ್ವಾಮಿಯವರು ಅಭಿಮಾನಿಗಳು ಕಟ್ಟಿದ್ದ ಮುಸುಕಿನ ಜೋಳದ ಹಾರ, ಸೇಬಿನ ಹಾರ, ಅನಾನಸ್ ಹಾರ, ಮೊಸಂಬಿ ಹಾರ, ಕಬ್ಬಿನ ಜಲ್ಲೆಗಳಿಂದಲೇ ತಯಾರಿಸಿದ ಹಾರ ಸೇರಿದಂತೆ ಬೃಹತ್ ಪುಷ್ಪಮಾಲೆಗಳಿಗೆ ಕೊರಳೊಡ್ಡಿದರು. ತಮ್ಮ ನಾಯಕನಿಗೆ ವಿಶೇಷದ ಹಾರ ಹಾಕಿ ಅಭಿಮಾನಿಗಳು ಸಂಭ್ರಸಿದರು.

ಮಗುವಿಗೆ ಕುಮಾರಸ್ವಾಮಿ ಎಂದು ಹೆಸರು ನಾಮಕರಣ

ಪಂಚರತ್ನ ಯಾತ್ರೆಯ ಸಂದರ್ಭದಲ್ಲಿ ಪತ್ರಕರ್ತ ಮಹೇಶ್ ಎಂಬುವವರ ತಂಗಿಯ ಮಗುವಿಗೆ ಕುಮಾರಸ್ವಾಮಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ನಾಮಕರಣ ಮಾಡಿದರು.

ನಿನ್ನೆ ರಾತ್ರಿ ದುಗ್ಗನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ 1:30 ಗಂಟೆಯಾದರೂ ಚಳಿಯಲ್ಲಿ ನನಗಾಗಿ ಕಾದಿದ್ದಿರ ಇದಕ್ಕೆ ನಾನು ನಿಮಗೆ ಚಿರಋಣಿಯಾಗಿರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ