Tuesday, September 17, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬೂದನೂರು ಗ್ರಾ.ಪಂ ಅಧ್ಯಕ್ಷರ ವಿರುದ್ಧ ತನಿಖೆಗೆ ಆಗ್ರಹ

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷರ ದುರಾಡಳಿತ ಹಾಗೂ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಮಾಜಿ ಸದಸ್ಯ ಬಿ.ಕೆ.ಸತೀಶ್ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೂದನೂರು ಗ್ರಾ.ಪಂ.ಅಧ್ಯಕ್ಷರ ಆಸ್ತಿ ಬಗ್ಗೆ ನೀಡಿರುವ ಸುಳ್ಳು ಮಾಹಿತಿ,ಖಾಸಗಿಯವರ ಶುದ್ದ ಕುಡಿಯುವ ನೀರಿನ ಘಟಕದ ವಿದ್ಯುತ್ ಬಿಲ್ ಪಾವತಿ ಮಾಡಿರುವ ಬಗ್ಗೆ ಹಾಗೂ ಪಂಚಾಯತಿಯಲ್ಲಿ ನಡೆದಿರುವ ಹಲವಾರು ಅಕ್ರಮಗಳ ಕುರಿತು ತನಿಖೆ ನಡೆಸಲು ಕಳೆದ ಜೂನ್ 10 ರಂದು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೆವು. ಆದರೆ ಇದುವರೆಗೂ ಯಾವ ಕ್ರಮ ಆಗಿಲ್ಲ ಎಂದರು.

ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನಾವು ಪ್ರಶ್ನಿಸಿದ ಕಾರಣಕ್ಕೆ ಅಡಳಿತಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾ.ಪಂ‌. ಆಡಳಿತ ಮಂಡಳಿ ಸದಸ್ಯರೇ ದೂರುತ್ತಿದ್ದಾರೆ‌. ಇದರಿಂದಾಗಿ ಗ್ರಾಮಸಭಾ ಸದಸ್ಯರಾದ ನಮ್ಮ ಹಕ್ಕುಚ್ಯುತಿಯಾಗುತ್ತಿದೆ‌. ಆಡಳಿತದಲ್ಲಿ ಜನ ಸಹಭಾಗಿತ್ವ, ಆಡಳಿತದಲ್ಲಿ ಪಾರದರ್ಶಕತೆ, ಸಮಸ್ಯೆಗಳನ್ನು ಸ್ಥಳೀಯವಾಗಿ ಗುರುತಿಸುವುದು, ಆದ್ಯತೆಗಳನ್ನು ನಿರ್ಧರಿಸುವುದು ಮತ್ತು ಪರಿಹಾರ ಕಂಡುಕೊಳ್ಳುವುದು, ಸಾಮಾಜಿಕ ನ್ಯಾಯ ಹಾಗೂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ನಿಟ್ಟಿನಲ್ಲಿ ನಾವು ಮಾಡುತ್ತಿರುವ ಪ್ರಯತ್ನಕ್ಕೆ ತಾವು ಕಾನೂನು ರೀತ್ಯಾ ಕ್ರಮ ವಹಿಸಬೇಕೆಂದು ಜಿ.ಪಂ.ಸಿಇಒ ಅವರಿಗೆ ಆಗ್ರಹಿಸುತ್ತಿದ್ದೇವೆ ಎಂದರು.

ನಾವು ಜೂ.10ರಂದು ಬೂದನೂರು ಗ್ರಾ.ಪಂ.ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ನೀಡಿರುವ ಮನವಿ ಸಂಬಂಧ ಕ್ರಮ ವಹಿಸುವಂತೆ ಆಗ್ರಹಿಸುತ್ತೇವೆ.ಕ್ರಮ ಜರುಗಿಸದಿದ್ದರೆ ಜುಲೈ 8 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.

ಗೋಷ್ಟಿಯಲ್ಲಿ ಸವಿತಾ, ಪದ್ಮ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!