Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗುತ್ತಿಗೆದಾರರ ಬಿಲ್ ಬಾಕಿ ಪಾವತಿಗೆ ಆಗ್ರಹ

ಸರ್ಕಾರದಿಂದ ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ ಬಾಕಿಯನ್ನು ಅಧಿಕಾರಿಗಳು ಕೂಡಲೇ ಬಿಡುಗಡೆ ಮಾಡಬೇಕೆಂದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಕೀಲಾರ ಕೆ.ರವೀಂದ್ರ ಒತ್ತಾಯಿಸಿದರು.

ಮಂಡ್ಯ ನಗರದ ಜಿಲ್ಲಾ ಪಂಚಾಯತ್ ರಾಜ್ ಇಂಜಿಯರಿಂಗ್ ವಿಭಾಗದ ಕಚೇರಿ ಆವರಣದಲ್ಲಿ ಜಿಲ್ಲಾ ಗುತ್ತಿಗೆದಾರರ ಕಚೇರಿಯಲ್ಲಿ 2024ರ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗುತ್ತಿಗೆದಾರರಿಗೆ ಕೋಟ್ಯಾಂತರ ರೂ. ಹಣ ಬಿಡುಗಡೆಯಾಗಬೇಕಿದ್ದು,  ತುಂಬ ವಿಳಂಬವಾಗಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ, ಸರ್ಕಾರಿ ಯೋಜನೆಗಳ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿಸಲು ಗುತ್ತಿಗೆದಾರರು ಸಾಲ ತಂದು ಬಂಡವಾಳ ಹಾಕಿದ್ದಾರೆ. ಮನೆ, ಮಡದಿ-ಮಕ್ಕಳ ಒಡವೆಗಳ ಚಿನ್ನ ಗಿರಿವಿ ಇಟ್ಟು ಹಣ ತಂದು ಸಕಾಲಕ್ಕೆ ಕಾಮಗಾರಿ ಮುಗಿಸಿದ್ದಾರೆ, ಅದ್ದರಿಂದ ಕೂಡಲೇ ಬಾಕಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಇಂದಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳ ಅಭಿವೃದ್ದಿಗೆ ಗುತ್ತಿಗೆದಾರರು ಹಾಕಿದ ಬಂಡವಾಳ ಪಡೆಯಲು ಬಿಕ್ಷೆ ಬೇಡುವಂತಾಗಿದೆ.  ಮುಂದಿನ ದಿನಗಳಲ್ಲಿ ಹಳೆಯ ನೋವುಗಳನ್ನು ಮರೆತು, ಹೊಸ ವರ್ಷದ ದಿನಗಳು ಎಲ್ಲರಿಗೂ ಒಳ್ಳೆಯ ಸುಖ- ಸಮೃದ್ದಿ ನೀಡಲಿ, ಗುತ್ತಿಗೆದಾರರ ಸಮಸ್ಯೆಗಳು ನಿವಾರಣೆಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ರಾಜ್ ಇಂಜಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಣೇಶ್ ಹೆಗ್ಗಡೆ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಂ.ಎಚ್.ಯತಿರಾಜು, ಉಪಾಧ್ಯಕ್ಷ ಸಿದ್ದೇಗೌಡ, ಸಹ ಕಾರ್ಯದರ್ಶಿ ಕೆ.ಪಿ.ಸುನೀಲ್‌ಬಾಬು, ಸಂಘಟನಾ ಕಾರ್ಯದರ್ಶಿ ಎಂ.ಟಿ.ರಾಜು, ಕ್ರೀಡಾ ಕಾರ್ಯದರ್ಶಿ ಎಚ್.ತಿಮ್ಮೇಗೌಡ, ಖಜಾಂಚಿ ನವೀನ್‌ಕುಮಾರ್, ನಿರ್ದೇಶಕರಾದ ಪುಟ್ಟಸ್ವಾಮಿ, ಹನುಮಂತೇಗೌಡ, ಕೃಷ್ಣೇಗೌಡ, ನವೀನಾಯಕ್, ಎ.ವಿ.ಪಾಂಡು, ಚನ್ನೇಗೌಡ, ನಂಜುಂಡಪ್ಪ, ಶ್ರೀನಿಧಿ ಮತ್ತಿತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!