Thursday, September 19, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಡೆಂಗೀ, ಚಿಕೂನ್ ಗುನ್ಯಾದ ಬಗ್ಗೆ ಜಾಗೃತಿ ಅಗತ್ಯ

ಡೆಂಗೀ ಹಾಗೂ ಚಿಕೂನ್ ಗುನ್ಯಾ ಜ್ವರಗಳು ಸೋಂಕು ಹೊಂದಿದ ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತವೆ. ನಿಂತ ಸ್ವಚ್ಚ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ, ಹಾಗಾಗಿ ಸೊಳ್ಳೆ ಕಚ್ಚುವಿಕೆಯಿಂದ ಜಾಗೃತರಾಗಿರಬೇಕೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಹೇಳಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಕೊಡಿಯಾಲ ಆಯುಷ್ಮಾನ್ ಆರೋಗ್ಯ ಮಂದಿರ ವ್ಯಾಪ್ತಿಯ ಗಾಮನಹಳ್ಳಿ ಗ್ರಾಮದ ಕಲಾಮಂದಿರದ ಆವರಣದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ”ಡೆಂಗೀ ಜ್ವರ ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ಅರಿವಿನ ಕಾರ್ಯಕ್ರಮ” ಉದ್ದೇಶಿಸಿ ಮಾತನಾಡಿದರು.

ನಿರ್ದಿಷ್ಟ ಚಿಕಿತ್ಸೆ ಇಲ್ಲದ ಈ ಖಾಯಿಲೆಗೆ ಮುಂಜಾಗ್ರತೆಯೆ ಪರಮೌಷಧಿ ಆಗಿದ್ದು. ಹಠಾತ್ತನೆ ಬರುವ ಅಧಿಕ ಜ್ವರ,ತೀವ್ರ ತಲೆನೋವು,ಕಣ್ಣುಗಳ ಹಿಂಭಾದಲ್ಲಿ ತೀವ್ರತರ ನೋವು, ವಾಕರಿಕೆ ಮತ್ತು ವಾಂತಿ ರೊಗದ ಲಕ್ಷಣಗಳಾಗಿವೆ ಎಂದರು.

ರೋಗದ ಲಕ್ಷಣ ಕಂಡಾಗ ಚಿಕಿತ್ಸೆಗಾಗಿ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಿ ಜೊತೆಗೆ ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಒಡೆದ ಟೈರಗಳು, ತೆಂಗಿನ ಚಿಪ್ಪುಗಳು,ಸಿಮೆಂಟ್ ತೊಟ್ಟುಗಳು,ತೆರೆದ ಪ್ಲಾಸ್ಟಿಕ್ ವಸ್ತುಗಳು, ನೀರಿನ ಸಂಗ್ರಹಣ ತೊಟ್ಟಿ, ಹೂವಿನ ಕುಂಡಗಳು, ಏರಕೂಲರ್ ಇತ್ಯಾದಿಗಳಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತವೆ ಮನೆಯಲ್ಲಿಯ ನೀರಿನ ಪರಿಕರಗಳನ್ನು ವಾರಕ್ಕೆರಡು ಬಾರಿ ಸ್ವಚ್ಛವಾಗಿ ತೊಳೆದು ಒಣಗಿಸಿ ನೀರನ್ನು ಭರ್ತಿ ಮಾಡಿಕೊಳ್ಳಿ ಸೊಳ್ಳೆಗಳು ಉತ್ಪತ್ತಿ ಆಗದಂತೆ ಎಚ್ಚರಿಕೆ ವಹಿಸಬೇಕು ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಕ್ಷೆಗಾಗಿ ಮನೆ ಭೇಟಿ ನೀಡಿದಾಗ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

ವೈದ್ಯಾಧಿಕಾರಿ ಡಾ.ಹೇಮಲತಾ ಮಾತನಾಡಿ ಸೊಳ್ಳೆಗಳು ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ ಒಟ್ಟಾರೆ ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ಸಹಕರಿಸಿ,ಸೊಳ್ಳೆ ಉತ್ಪತ್ತಿ ತಡೆಗಟ್ಟಬೇಕೆಂದು ನೆರದಿದ್ದ ಸಾರ್ವಜನಿಕರಿಗೆ ಭಿತ್ತಿ ಪತ್ರಗಳೊಂದಿಗೆ ಜಾಗೃತಿ ಮೂಡಿಸಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಮಹದೇವಪ್ಪ, ಬಸವರಾಜ,ಕರಿಯಪ್ಪ,ಪುಟ್ಟಯ್ಯ, ಜವರಯ್ಯ,ದೇವಯ್ಯ,ಸಿದ್ದಯ್ಯ,ರಘು ರಾಜಪ್ಪ,ಚಿಕ್ಕಮಾದಯ್ಯ ,ಸ್ವಾಮಿ, ದೇವರಾಜ,ಗಿರೀಶ್ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಣುಕಾ ಮಾತೆ ಸಮುದಾಯ ಆರೋಗ್ಯ ಅಧಿಕಾರಿ ಶಿವನಾಗ,ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎನ್ ಕೃಷ್ಣೇಗೌಡ, ಆಶಾ ಕಾರ್ಯಕರ್ತೆಯರಾದ ಸುಧಾ, ರಾಧಾ,ಪ್ರೇಮ,ಬೋರಮ್ಮ ,ಮಂಜುಳಾ, ಸುಧಾ ಎನ್ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!