Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲಾ ವಿಕಲಚೇತನರ ಇಲಾಖಾ ಕಚೇರಿ ಸ್ಥಳಾಂತರಕ್ಕೆ ಮನವಿ

ಮಂಡ್ಯ ಜಿಲ್ಲೆಯ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಕಚೇರಿಯು ತೀರ ಕಿರಿದಾಗಿದ್ದು ಜಿಲ್ಲೆಯ ವಿವಿಧೆಡೆಯಿಂದ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಕಛೇರಿಗೆ ಆಗಮಿಸುವ ವಿಕಲಚೇತರಿಗೆ ಕನಿಷ್ಠ ಒಳಗಡೆ ಹೋಗಲು ತೀರ ಕಷ್ಟವಾಗುತ್ತಿದೆ, ಆದ್ದರಿಂದ ಸೂಕ್ತ ಸ್ಥಳಾವಕಾಶ ಕಲ್ಪಿಸಿಕೊಡುವಂತೆ ಜಿಲ್ಲಾ ವಿಶೇಷ ಚೇತನರ ಒಕ್ಕೂಟವು ಮಂಡ್ಯ ಜಿಲ್ಲಾಧಿಕಾರಿ ಡಾ. ಹೆಚ್.ಎನ್.ಗೋಪಾಲಕೃ‍ಷ್ಣ ಅವರಿಗೆ ಮನವಿ ಸಲ್ಲಿಸಿತು.

ಈಗಿರುವ ಕಚೇರಿಯಲ್ಲಿ ಕನಿಷ್ಟ ಸ್ಥಳಾವಕಾಶ ಇದೆ, ಇದರಿಂದ ವೀಲ್ ಚೇರ್ ಬಳಸಿ, ವಾಕಿಂಗ್ ಸ್ಟಿಕ್ ಬಳಸಿ ಕಛೇರಿಗೆ ಬರಲಾಗದ ಸ್ಥಿತಿ ಇದೆ, ಇಲ್ಲಿ ಕನಿಷ್ಠ ಶೌಚಾಲಯ ವ್ಯವಸ್ಥೆಯು ಇಲ್ಲ, ಆದರಿಂದ ಹಾಲಿ ಸೆಂಟ್ರಲ್‌ ಸೋಲಿಸ್ ಸ್ಟೇಷನ್ ಕಚೇರಿಯು ಬೇರೆ ಕಡೆ ಸ್ಥಳಾಂತರವಾಗುತ್ತಿದ್ದು ಅದರಂತೆ ಈ ಕಟ್ಟಡಕ್ಕೆ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಕಲ್ಯಾಣ ಇಲಾಖೆ ಕಛೇರಿಯನ್ನ ಸ್ಥಳಾಂತರಿಸಿಕೊಟ್ಟು ವಿಕಲಚೇತನರಿಗೆ ಅನುಕೂಲ ಮಾಡಿಕೊಡಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಬೋರೇಗೌಡ, ಹರೀಶ್, ಮಲ್ಲೇಶ್, ಸತೀಶ್, ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!