Friday, September 20, 2024

ಪ್ರಾಯೋಗಿಕ ಆವೃತ್ತಿ

ದೇಶ,ಭಾಷೆ,ನೆಲದ ವಿಚಾರ ಬಂದ್ರೆ ರಾಜಿಯಾಗುವ ಪ್ರಶ್ನೆ ಇಲ್ಲ : ಚಲುವರಾಯಸ್ವಾಮಿ

ಬಿಜೆಪಿಯವರಿಗೆ ಕ್ರಮ ಬೇಕಿಲ್ಲ, ಎಂಪಿ ಚುನಾವಣೆಗೆ ವಿಚಾರ ಬೇಕಷ್ಟೆ, ವಿಧಾನಸೌದದಲ್ಲಿ ನಾಸೀರ್ ಹುಸೇನ್ ಬೆಂಬಲಿಗರಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆಂದು ಬಿಜೆಪಿಯವರು ರಾಜಕೀಯ ಮಾಡುತಿದ್ದಾರೆಂದು ಸಚಿವ ಎನ್.ಚಲುವರಾಯಸ್ವಾಮಿ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಅಂತ ಯಾರೇ ಹೇಳಿದರು ಇದು ಸಹಿಸುವ ಪ್ರಶ್ನೆ ಇಲ್ಲ‌. ಇದು ರಾಜಕಾರಣ ಬೆರಸುವು ವಿಚಾರ ಅಲ್ಲ. ಯಾವುದೇ ಪಾರ್ಟಿ, ವ್ಯಕ್ತಿ ಇರಲಿ ದೇಶ,ಭಾಷೆ,ನೆಲದ ವಿಚಾರ ಬಂದ್ರೆ ರಾಜಿಯಾಗುವ ಪ್ರಶ್ನೆ ಇಲ್ಲ, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೆವೆ ಎಂದರು.

ಬಿಜೆಪಿಯವರಿಗೆ ಕ್ರಮ ಬೇಕಿಲ್ಲ, ಇಶ್ಯು ಬೇಕು. ಮುಂದೆ ಎಂಪಿ ಚುನಾವಣೆ ಇದೆ, ಸದ್ಯಕ್ಕೆ ಪ್ರಮುಖ ವಿಚಾರವಾಗಿ ತೆಗೆದುಕೊಂಡಿದ್ದಾರೆ. ಇದನ್ನು ಅವರು ಬಿಡಬೇಕು ಮೊದಲು. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತೆ ಎಂದರು.

ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಬೋರ್ ವೆಲ್, ಟ್ಯಾಂಕರ್ ಮೂಲಕ ನೀರು ಒದಗಿಸುವ ಕೆಲಸ ಮಾಡ್ತೇವೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ನಿಭಾಯಿಸುವ ಕೆಲಸ ಮಾಡುತ್ತೆ ಎಂದರು.

ಲೋಕಸಭಾ ಚುನಾವಣೆಗೆ ಸ್ಟಾರ್ ಚಂದ್ರು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಿಷತ್ತು ಸದಸ್ಯ ದಿನೇಶ್ ಗೂಳಿಗೌಡ ಕೂಡ ಹೊಸ ಮುಖನೇ. ನನಗೂ ಪರಿಚಯ ಇರಲಿಲ್ಲ. ಸ್ಟಾರ್ ಚಂದ್ರು ನಮ್ಮ ಜೊತೆಯಲ್ಲಿ ಇಲ್ಲದಿದ್ದರೂ ಪಕ್ಷಕ್ಕಾಗಿ ದುಡಿದ್ದಿದ್ದಾರೆ‌. ಅವರ ಅಣ್ಣ ಗೌರಿಬಿದನೂರಲ್ಲಿ ಶಾಸಕರಾಗಿ ನಮ್ಮ ಜೊತೆ ಇದ್ದಾರೆ.
ಕಾಂಗ್ರೆಸ್ ನಿಂದಲೇ ಟಿಕೆಟ್ ಕೊಡಬೇಕಿತ್ತು. ಅದ್ರೆ ಹಿರಿಯ ನಾಯಕರು ಇದ್ರು ಆಗಾಗಿ ಟಿಕೆಟ್ ಕೈ ತಪ್ಪಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. ಈಗ ನಮ್ಮ ಜೊತೆ ಇದ್ದಾರೆ. ನಮ್ಮ ಪಕ್ಷಕ್ಕೆ ಅವರ ಕುಟುಂಬ ಸಪೋರ್ಟ್ ಮಾಡಿದೆ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!