Saturday, November 21, 2026

ಪ್ರಾಯೋಗಿಕ ಆವೃತ್ತಿ

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ

ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಿ, ಉಳಿದ ಸಂದರ್ಭಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಮುಂದಾಗಿ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.

ಮಂಡ್ಯ ತಾಲೂಕಿನ ಮಾರಚಾಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವ್ವೇರಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಂಘದ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅವ್ವೇರಹಳ್ಳಿ ಗ್ರಾಮಸ್ಥರು ನಾಲ್ಕು ಗುಂಪುಗಳನ್ನಾಗಿ ಮಾಡಿಕೊಂಡು ಜಗಳಕ್ಕೆ ನಿಂತರೆ ಅಭಿವೃದ್ಧಿ ಕೆಲಸಗಳು ಆಗುವುದು ಹೇಗೆ? ಎಂದು ಪ್ರಶ್ನಿಸಿದ ಶಾಸಕರು, ನೀವೆಲ್ಲರೂ ಜಗಳವಾಡದೆ ಒಗ್ಗಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.

ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ 6.50 ಲಕ್ಷ ರೂ.,ಗ್ರಾಮದ ಹಾಲು ಉತ್ಪಾದಕರ ಸಂಘದಿಂದ 2 ಲಕ್ಷ ಕೊಡುತ್ತಾರೆ, ನಾನು ಕೂಡ ಎರಡು ಲಕ್ಷ ಅನುದಾನ ನೀಡುತ್ತೇನೆ ಅಚ್ಚುಕಟ್ಟಾಗಿ ಡೈರಿ ಕಟ್ಟಡ ನಿರ್ಮಿಸಿಕೊಂಡು ಮಾದರಿ ಆಗಬೇಕು ಎಂದರು.

ಗ್ರಾಮದ ಅಭಿವೃದ್ಧಿಗೆ ಹಲವು ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿ ಗ್ರಾಮವಾಗಿ ಮಾಡುವ ಕೆಲಸ ಪ್ರಾರಂಭವಾಗಿದೆ. ಜನರ ಕಷ್ಟ-ಸುಖಕ್ಕೆ ಸ್ಪಂದಿಸಿ ಕೆಲಸ ಮಾಡುವ ಜವಾಬ್ದಾರಿ ನನ್ನದು. ನೀವೆಲ್ಲ ಒಂದಾಗಿ ಜಗಳವಾಡದೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತದೆ ಅಭಿವೃದ್ಧಿಗಾಗಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಮದ ಅಭಿವೃದ್ಧಿಗೆ ನಾವೆಲ್ಲರೂ ದೊಡ್ಡ ಮನಸು ಮಾಡಬೇಕು. ನೀವೆಲ್ಲರೂ ಅಭಿವೃದ್ಧಿ ವಿಚಾರವಾಗಿ ಒಂದಾಗಿ, ನಾನು ಕೂಡ ಶಕ್ತಿಮೀರಿ ಕೆಲಸ ಮಾಡುತ್ತೇನೆ. ನಿಮ್ಮ ಗ್ರಾಮದ ಅಭಿವೃದ್ಧಿಗೆ ವಿಚಾರವಾಗಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಮಾದರಿ ಗ್ರಾಮವಾಗಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಳೆಯಿಂದ ಮನೆ ಬಿದ್ದು ಹಾನಿಗೊಳಗಾದ ಗ್ರಾಮದ ಚನ್ನೇಗೌಡ ಎಂಬುವರಿಗೆ 50 ಸಾವಿರ ಸಹಾಯಧನ ನೀಡಲಾಯಿತು.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್‌. ರಾಮಚಂದ್ರು, ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಮಾರ ಲಚಾಕನಹಳ್ಳಿ ಗ್ರಾ‌.ಪಂ. ಅಧ್ಯಕ್ಷೇ ಲಕ್ಷ್ಮಿ,ಸದಸ್ಯರಾದ ಜಗದೀಶ್, ಅನಿತಾ, ಪ್ರಭುಸ್ವಾಮಿ,ಕುಮಾರ್,ಶಿವಬಸಪ್ಪ,ಮಹಾಲಿಂಗಯ್ಯ,ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಸವಿತಾ ಸೇರಿದಂತೆ ಹಲವರಿದ್ದರು‌.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ