Tuesday, September 17, 2024

ಪ್ರಾಯೋಗಿಕ ಆವೃತ್ತಿ

ಧರ್ಮಸ್ಥಳ ಯಾತ್ರೆಗೆ ಗಣಿಗ ರವಿಕುಮಾರ್ ಚಾಲನೆ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಧರ್ಮಸ್ಥಳ ಯಾತ್ರೆಗಳ ಪರ್ವ ಆರಂಭವಾಗಿದೆ. ಈಗ ಆ ಸಾಲಿಗೆ ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಸೇರಿದ್ದಾರೆ.

ಇಂದು ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ತಮ್ಮ ಪ್ರಜಾ ಸೇವಾ ಟ್ರಸ್ಟ್ ಮೂಲಕ 25ಬಸ್‌ಗಳು, 5 ಟೆಂಪೋ ಟ್ರಾವೆಲರ್ ಹಾಗೂ 15 ಕಾರುಗಳ ಪ್ರಯಾಣದ ಧರ್ಮಸ್ಥಳ ಯಾತ್ರೆಗೆ ಚಾಲನೆ ನೀಡಿ, ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.

ಮಂಡ್ಯ ತಾಲೂಕು ಬಸರಾಳು ಗ್ರಾಮದ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಇಂದು ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್, ತಮ್ಮ ಪ್ರಜಾ ಸೇವಾ ಟ್ರಸ್ಟ್ ಮೂಲಕ 25ಬಸ್‌ಗಳು, 5 ಟೆಂಪೋ ಟ್ರಾವೆಲರ್ ಹಾಗೂ 15 ಕಾರುಗಳ ಪ್ರಯಾಣದ ಧರ್ಮಸ್ಥಳ ಯಾತ್ರೆಗೆ ಚಾಲನೆ ನೀಡಿ, ಯಾತ್ರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ಮಂಡ್ಯ ವಿಧಾನಸಭಾ ಕ್ಷೇತ್ರದ ಜನರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮತ್ತು ಸೌತಡ್ಕ ಗಣಪತಿಯ ದರ್ಶನ ಮಾಡಿಸಲಾಗುವುದು. ಕೊರೊನಾ ಕಾಲದಿಂದಲೂ ಜನರು ಆರ್ಥಿಕವಾಗಿ ನೋವು ಅನುಭವಿಸಿದ್ದರು.

ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೂ ಎಷ್ಟೋ ಜನರು ಹೋಗಿರಲಿಲ್ಲ. ಈಗ ಕೊರೊನಾ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಧರ್ಮಯಾತ್ರೆ ಆರಂಭಿಸಿರುವುದಾಗಿ ತಿಳಿಸಿದರು.

ಧರ್ಮಸ್ಥಳ ಯಾತ್ರೆ ಆಯೋಜನೆ ಹಿಂದೆ ಯಾವುದೇ ರಾಜಕಾರಣದ ಉದ್ದೇಶವಿಲ್ಲ. ಕಳೆದೊಂದು ದಶಕದಿಂದಲೂ ತಾವು ಹತ್ತಾರು ರೀತಿಯ ಸಮಾಜ ಸೇವಾ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ತರಕಾರಿ, ಆಹಾರ ಕಿಟ್‌ಗಳು ಹಾಗೂ ಕೋವಿಡ್ ಔಷಧಿ ಕಿಟ್‌ಗಳ ವಿತರಣೆ ಮಾಡಿ ನೆರವಾಗಿದ್ದೆ. ಈ ಹಿಂದೆಯೇ ಧರ್ಮಯಾತ್ರೆ ಆಯೋಜಿಸುವ ಆಶಯವೂ ಇತ್ತು. ಆದರೆ, ಮೇಕೆದಾಟು ಪಾದಯಾತ್ರೆ, ಭಾರತ ಐಕ್ಯತಾ ಯಾತ್ರೆಯ ಹಿನ್ನೆಲೆಯಲ್ಲಿ ಆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಯಿತು. ಈಗ ಅವೆರಡೂ ಮುಗಿದಿರುವ ಹಿನ್ನೆಲೆಯಲ್ಲಿ ಧರ್ಮಯಾತ್ರೆ ಆರಂಭಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಜಿ.ಸಿ.ಆನಂದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಾಜಿ, ರುದ್ರಪ್ಪ, ಧರ್ಮಯಾತ್ರೆಯ ಸಂಚಾಲಕ ಬಿಳಿದೇಗಲು ಮಹದೇವು, ಬಸರಾಳು ಗ್ರಾ.ಪಂ. ಅಧ್ಯಕ್ಷ ಬಿ.ಟಿ.ಶಂಕರ್, ಕಾಂಗ್ರೆಸ್ ಮುಖಂಡರಾದ ಸಿದ್ದಾರೂಢ ಸತೀಶ್, ಬಿ.ಡಿ.ಶಂಕರ್, ಗರುಡನಹಳ್ಳಿ ಚಂದ್ರು, ಮನ್‌ಮುಲ್ ಮಾಜಿ ನಿರ್ದೇಶಕ ಚಂದ್ರು ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!