ಅಸಮಾನತೆ, ಭೂಸುಧಾರಣೆ ಮತ್ತು ದಲಿತ ಸಂವೇದನೆಯ ಸುತ್ತ ಚಿತ್ರಿಸಲಾಗಿರುವ 70ರ ದಶಕದ ಕನ್ನಡ ನಾಡಿನ ಕಥೆಯೊಂದು ಬೆಳ್ಳಿತೆರೆಯ ಮೇಲೆ ಬರುತ್ತಿದೆ. ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ ನಾಯಿಗುತ್ತಿಯಾಗಿ ನಟಿಸಿ ಜನಮೆಚ್ಚುಗೆಗೆ ಪಾತ್ರವಾಗಿದ್ದ ರಾಕೇಶ್ ದಳವಾಯಿ ಅವರ ಚೊಚ್ಚಲ ಪ್ರಯತ್ನ ‘ಧೀರ ಭಗತ್ ರಾಯ್’
ಕಳೆದ ತಿಂಗಳು ನಾವು ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಸರ್ಕಾರಿ ಶಾಲೆಗೆ ಬಣ್ಣ ತುಂಬುವಾಗ ಸ್ವಯಂ ಸೇವಕರಾಗಿ ರಾಕೇಶ್ ಕೂಡ ಬಂದು ಬ್ರಷ್ ಹಿಡಿದು ನಿಂತಿದ್ದರು. ಹಾಗಾಗಿ ರಾಕೇಶ್ ಅವರನ್ನು ನಿಜಜೀವನದಲ್ಲೂ ಹೀರೋ ಅನ್ನಬಹುದು.

ನಾಡಿದ್ದು ಶುಕ್ರವಾರ ಡಿಸೆಂಬರ್ 6 ರಂದು ಅವರ ‘ಧೀರ ಭಗತ್ ರಾಯ್’ ಸಿನಿಮಾ ತೆರೆ ಕಾಣುತ್ತಿದೆ. ಅಕ್ಕಿ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು ಒಂದು ಅಗುಳು ಸಾಕು.
ಟ್ರೇಲರ್ ಮತ್ತು ಆಕಾಶದ ನೀಲಿ ಹಾಡಿನಲ್ಲಿ ಅವರ ಶ್ರಮ ಗಮನಿಸಬಹುದು. ಮಂಡ್ಯದ ಗೆಳೆಯರು ಈ ಸಿನಿಮಾ ನೋಡಿ, ಚೆನ್ನಾಗಿದ್ದರೆ ಒಂದೆರೆಡು ಒಳ್ಳೆಯ ಮಾತನಾಡಿ.
~ಚಿತ್ರಕೂಟ




