Friday, September 20, 2024

ಪ್ರಾಯೋಗಿಕ ಆವೃತ್ತಿ

ಡಾ.ನಟರಾಜ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ: ಡಿಎಚ್ಓ ಸ್ಪಷ್ಷನೆ

ವೈದ್ಯ ಅಧಿಕಾರಿ ಡಾ.ನಟರಾಜ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ ಎಂದು ಮಂಡ್ಯದಲ್ಲಿ ಡಿಎಚ್‌ಒ ಡಾ ಮೋಹನ್ ದಾಖಲೆ ಸಮೇತ ಸ್ಪಷ್ಟನೆ ನೀಡಿದ್ದಾರೆ.

ನನ್ನ ವಿರುದ್ದ ಸುಳ್ಳು ಆರೋಪ ಮಾಡಲಾಗುತ್ತಿದೆ, ನಟರಾಜ್ ನಮ್ಮ ಕಚೇರಿಗೆ ಬಂದು 3 ತಿಂಗಳಾಗಿದೆ.
2-11-23 ರಲ್ಲಿ ನನಗೆ ಹೃದಯಾಘಾತವಾಗಿದೆ ಎಂದು ರಜೆ ಕೇಳಿದ್ದರು, ನಂತರ ನಾನು ಅವ್ರಿಗೆ ರಜೆ ನೀಡಿದ್ದೆ.
ಬಳಿಕ 17-11-23 ರಂದು ಮತ್ತೆ ನನಗೆ ಪತ್ರ ಬರೆದು ಇಲ್ಲಿ ಕೆಲಸ ಮಾಡಲು ಆಗ್ತಿಲ್ಲ ತಿಳಿಸಿದ್ದರು. ಕೌಟುಂಬಿಕ ಹಾಗೂ ಅನಾರೋಗ್ಯದ ಕಾರಣದಿಂದ ಹಿಂದೆ ಕೆಲಸ ಮಾಡ್ತಿದ್ದ ಜಾಗಕ್ಕೆ ವರ್ಗಾವಣೆ ಮಾಡಲು ಕೋರಿದ್ದರು.ಅವರು ವರ್ಗಾವಣೆ ಬಯಸಿದ್ದ ಕುಣಿಗಲ್ ಕ್ಷೇತ್ರದ ಶಾಸಕರ ಬಳಿಯ ಶಿಫಾರಸು ಪತ್ರ ಕೂಡ ನೀಡಿದ್ದಾರೆ ಎಂದು ಡಿಎಚ್ಓ ಸ್ಪಷ್ಟಪಡಿಸಿದ್ಧಾರೆ.

ನಟರಾಜ್ ಖಿನ್ನತೆಗೆ ಒಳಾಗಾಗಿದ್ದರು. ಈಗಾಗಲೇ ನಾಲ್ಕೈದು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೌಟುಂಬಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದರು. ನನ್ನ ಮೇಲಿನ ಆರೋಪ ಪಿತೂರಿಯಿಂದ ಕೂಡಿದೆ, ಇನ್ಮುಂದೆ ನನ್ನ ವಿರುದ್ದ ಯಾರು ಪಿತೂರಿ ಮಾಡ್ತಿದ್ದಾರೆ ಎಂದು ತಿಳಿದುಕೊಂಡು ಎಚ್ಚರಿಕೆ ವಹಿಸ್ತೀನಿ ಎಂದಿರುವ ಅವರು,
ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣಕ್ಕೂ ಮೃತ ನಟರಾಜ್ ಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!