Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೆಂಪೇಗೌಡ ಜನ್ಮದಿನೋತ್ಸವ: ರೈತರಿಗೆ ಬಿತ್ತನೆ ಬೀಜ ವಿತರಣೆ

ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಕೆಂಪೇಗೌಡರ 515 ಜನ್ಮ ದಿನೋತ್ಸವ ಆಚರಣೆ ಹಾಗೂ ಸಂಘದ ಸದಸ್ಯರಿಗೆ ಭತ್ತದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನು ಜುಲೈ 30ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯದ ರೈತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮನ್ಮುಲ್ ನಿರ್ದೇಶಕ ರಘುನಂದನ್ ತಿಳಿಸಿದರು.

ಮಂಡ್ಯದಲ್ಲಿ  ಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಸಮುದಾಯದ ಪ್ರತಿಭೆ ಹಾಗೂ ಸಾಧನೆ ಮಾಡಿರುವ ಸಮುದಾಯದ ಮಹಿಳೆಯರನ್ನು ಗುರುತಿಸಿ ಅಭಿನಂದಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಸಂಘದ ಉದ್ದೇಶವಾಗಿದೆ ಎಂದರು.

ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ 500 ಮಂದಿ ರೈತರಿಗೆ ತಲಾ 5 ಕೆಜಿ ಭತ್ತದ ಬಿತ್ತನೆ ಬೀಜ ವಿತರಿಸಲಾಗುವುದು. ಹೆಚ್ಚು ಇಳುವರಿ ಬರುವ ಭತ್ತದ ತಳಿಯ ಬೀಜವನ್ನು ನೀಡಲಾಗುವುದು. ಜೊತೆಗೆ ನಾಲ್ಕು ಮಂದಿ ಸಾಧಕರಾದ ತೋಟಗಾರಿಕೆ ಇಲಾಖೆ ನಿರ್ದೇಶಕ ಕೆ ರುದ್ರೇಶ್, ಕಾಫಿ ಪುಡಿ ಚಂದ್ರು, ಕೃಷಿಕರಾದ ಗೌರಮ್ಮ, ಸಮಾಜಸೇವಕ ತ್ಯಾಗರಾಜು ಅವರನ್ನು ಸನ್ಮಾನಿಸಲಾಗುವುದು ಎಂದರು.

ಕಾರ್ಯಕ್ರಮವನ್ನು ಎಂ.ಎಸ್.ರಘುನಂದನ್ ಉದ್ಘಾಟಿಸಲಿದ್ದು, ಎಂ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕ ಎಚ್.ಸಿ ಕಾಳೇಗೌಡ ಅಧ್ಯಕ್ಷತೆ ವಹಿಸುವರು. ಸಂಘದ ಕಾರ್ಯದರ್ಶಿ ಸತ್ಯಮೂರ್ತಿ ಪ್ರಾಸ್ತಾವಿಕ ನುಡಿಯನ್ನಾಡಲಿದ್ದು, ಎಪಿಎಂಸಿ ಅಧ್ಯಕ್ಷ ಶೇಖರ್, ಸಮಾಜ ಸೇವಕ ವಸಂತರಾಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ನೆಲ್ಲಿಗೆರೆ ಬಾಲು, ಮೂಡ್ಯ ಚಂದ್ರು, ಅಶೋಕ್ ಜಯರಾಂ, ರಾಘವೇಂದ್ರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಆದ ಕಾರಣ ಸಮುದಾಯದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು .

ಗೋಷ್ಠಿಯಲ್ಲಿ ವಸಂತರಾಜು, ಎನ್ಎಸ್ ನವೀನ್ ಕುಮಾರ್, ಸತ್ಯಮೂರ್ತಿ ,ರಾಕೇಶ್ ,ನಂದೀಶ್ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!