Thursday, November 19, 2026

ಪ್ರಾಯೋಗಿಕ ಆವೃತ್ತಿ

ಡಿಕೆಶಿಗೆ ‘ಗೂಳಿ’ ಗಿಫ್ಟ್‌ ಕೊಟ್ಟ ಮಂಡ್ಯದ ‘ಕೈ’ ಕಾರ್ಯಕರ್ತರು

‘ಗೂಳಿ'(ಎತ್ತು)ಯಂತೆ ನುಗ್ಗಿ ರಾಜ್ಯದ ಮುಖ್ಯಮಂತ್ರಿಯಾಗಿ’ ಎಂದು ಹಾರೈಸಿ ಕಾಂಗ್ರೆಸ್‌ ಕಾರ್ಯಕರ್ತರು ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಗೂಳಿಯನ್ನು ಉಡುಗೊರೆ ನೀಡಿದ್ದಾರೆ.

ಮಂಡ್ಯದಲ್ಲಿ ಶುಕ್ರವಾರ (ಜನವರಿ 27) ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಅಪ್ಪಟ ಅಭಿಮಾನಿ ಕಾರ್ತಿಕ್ ಎಂಬುವವರು ಗೂಳಿಯನ್ನು ಗಿಫ್ಟ್ ಮಾಡಿದರು.

ಕಾಂಗ್ರೆಸ್ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬೃಹತ್ ಗಾತ್ರದ ಅನಾನಸ್‌ ಹಾರ, ಕಬ್ಬಿನ ಹಾರ, ಸೇಬು ಹಾರ ಸೇರಿದಂತೆ ನಾನಾ ಬಗೆಯ ಹಾರಗಳನ್ನು ಹಾಕಿ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ವಾಗತಿಸಿ ತಮ್ಮ ಅಭಿಮಾನವನ್ನು ತೋರಿಸಿದರು.

ಬಿಳಿ ಬಣ್ಣದ ಗೂಳಿಗೆ ಸಿಂಗಾರ ಮಾಡಿಕೊಂಡು ಕರೆತಂದ ಕಾರ್ಯಕರ್ತರು ಡಿ.ಕೆ ಶಿವಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೂಳಿಯಂತೆ ನುಗ್ಗಿ ರಾಜ್ಯದ ಮುಖ್ಯಮಂತ್ರಿಯಾಗಿ ಎಂದು ಶುಭ ಹಾರೈಸಿದ್ದಾರೆ.

ಗುರುವಾರ (ಜನವರಿ 26) ಯಾತ್ರೆ ಮೈಸೂರಿಗೆ ತೆರಳಿದ್ದಾಗ ಸಿದ್ದರಾಮಯ್ಯ ಅವರಿಗೆ ಅವರ ಕಟ್ಟಾ ಅಭಿಮಾನಿಯೊಬ್ಬ 2.5 ಲಕ್ಷ ರೂಪಾಯಿ ಖರ್ಚು ಮಾಡಿ 750 ಕೆಜಿಯ ‘ಮೈಸೂರು ಪಾಕ್‌’ ಹಾರ ತಯಾರಿಸಿದ್ದರು. ಆದರೆ, ತಿನ್ನುವ ಆಹಾರವನ್ನು ಕೊರಳಿಗೆ ಹಾಕಬಾರದೆಂದು ಅಭಿಮಾನಿಗೆ ಕಿವಿಮಾತು ಹೇಳಿ ಸಿದ್ದಾರಾಮಯ್ಯ ಹಾರವನ್ನು ತಿರಸ್ಕರಿಸಿದ್ದರು.

ಮಂಡ್ಯ ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಅವರನ್ನು ಕಾಂಗ್ರೆಸ್‌ ಮುಖಂಡ ಯು.ಸಿ.ಶಿವಕುಮಾರ್‌ ಮತ್ತು ಅಭಿಮಾನಿಗಳು ಬೃಹತ್‌ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ