ರಾಜ್ಯದ ಮಹಿಳೆಯರಿಗೆ ಜೂನ್ 11ರಿಂದ ಉಚಿತ ಬಸ್ ಪ್ರಯಾಣ ಸೇವೆ ಯೋಜನೆ ”ಶಕ್ತಿ” ಜಾರಿಗೊಳ್ಳಲಿದ್ದು, ಈ ಈ ಐತಿಹಾಸಿಕ ಘಳಿಗೆಯನ್ನು ನಾಡಿನ ಎಲ್ಲ ಮಹಿಳೆಯರು ಹಬ್ಬದಂತೆ ಆಚರಿಸಿ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ನುಡಿದಂತೆ ನಡೆಯುವ ಪಕ್ಷ ನಮ್ಮದು. ಚುನಾವಣೆಗೂ ಮುನ್ನ ನೀಡಿದ ಎಲ್ಲ 5 ಗ್ಯಾರಂಟಿಗಳು ಜಾರಿಗೆ ಬರುವ ಕಾಲ ಸನ್ನಿಹಿತವಾಗಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಜೂನ್ 11ರಂದು ಜಾರಿಗೆ ಬರಲಿದ್ದು, ಈ ಐತಿಹಾಸಿಕ ಘಳಿಗೆಯನ್ನು ಹಬ್ಬದಂತೆ ಆಚರಿಸಿ. pic.twitter.com/66JE1gO8Ji
— DK Shivakumar (@DKShivakumar) June 8, 2023
“>
ಈ ಬಗ್ಗೆ ಅವರು ತಮ್ಮ ಟ್ವೀಟರ್ ನಲ್ಲಿ ವಿಡೀಯೋ ಸಂದೇಶ ನೀಡಿರುವ ಅವರು,, ನಮ್ಮ ಪಕ್ಷ ನುಡಿದಂತೆ ನಡೆದಿದೆ, ಅದರಂತೆ ಉಚಿತ ಬಸ್ ಪ್ರಯಾಣ ಸೇವೆಗೆ ಚಾಲನೆ ನೀಡುತ್ತಿದ್ದೇವೆ, ಹಂತ ಹಂತವಾಗಿ ನಮ್ಮ ಎಲ್ಲ ಗ್ಯಾರಂಟಿ ಯೋಜನೆಗಳು ಜಾರಿಗೆ ಬರಲಿವೆ. ಚುನಾವಣೆಗೂ ಮುನ್ನ ನೀಡಿದ ಎಲ್ಲ 5 ಗ್ಯಾರಂಟಿಗಳು ಜಾರಿಗೆ ಬರುವ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದ್ದಾರೆ.




