ರಾಮನಗರದ ಸಂಸ್ಕೃತಿ ಸೌರಭ ಟ್ರಸ್ಟ್ವತಿಯಿಂದ ಆಗಸ್ಟ್-23ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮಂಡ್ಯದ ಗಾಂಧಿಭವನದಲ್ಲಿ ಅಂದಿನ ಚಲನಚಿತ್ರ, ಸಾಹಿತ್ಯ, ಸಂಗೀತ ವೈಭವವನ್ನು ಮೆಲುಕು ಹಾಕುವ ಹಾಡು ಹಳೇಯದಾದರೇನು ಎಂಬ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಹಲವು ದಶಕಗಳ ಕಾಲ ವಾದ್ಯಗೋಷ್ಠಿ ರಂಗದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಗಾಯಕರು, ಜನಪ್ರಿಯ ಕನ್ನಡದ ಹಳೆಯ ಚಿತ್ರಗೀತೆಗಳ ಗಾಯನ ನಡೆಸಿಕೊಡಲಿದ್ದಾರೆ. ಇದೇ ವೇದಿಕೆಯಲ್ಲಿ ಡಾ.ರಾಜ್ ಕುಮಾರ್ ಹಿರಿಯ ಮೇರು ಅಭಿಮಾನಿ ಮಂಡ್ಯದ ನಾಗರಾಜು ಅವರಿಗೆ “ಅಭಿಮಾನಿ ರತ್ನ” ಬಿರುದು ನೀಡಿ ಸನ್ಮಾನಿಸಲಾಗುವುದು.
ಕಾರ್ಯಕ್ರಮವನ್ನು ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಹೆಚ್.ಆರ್. ಅರವಿಂದ್ ಉದ್ಘಾಟಿಸುವರು. ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಎಂ.ವಿನಯ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮಂಡ್ಯ ಜಿಲ್ಲಾ ಗಾಯಕರ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮಾದೇಶ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಸಿ.ಲಂಕೇಶ್, ಗ್ಲೋಬಲ್ ಗೌಂಡ್ ಟ್ರಾವೆಲ್ಸ್ ಮಾಲೀಕ ಚಂದ್ರಶೇಖರ್, ಹಿರಿಯ ಕನ್ನಡ ಪರ ಹೋರಾಟಗಾರರಾದ ಸಿ.ರಾಜು ಚಾಮರಾಜಪೇಟೆ, ವಿ.ವಿ.ನಗರ ಕ್ಷೇತ್ರ ಜಯಕರ್ನಾಟಕ ಪರಿಷತ್ತಿನ ಅಧ್ಯಕ್ಷ ಲಲಿತಾ ರಾಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸುವರು.
ಹಿರಿಯ ಗಾಯಕರಾದ ಮೈಸೂರು ಕೃಷ್ಣಮೂರ್ತಿ, ಮಂಡ್ಯ ರಾಘವೇಂದ್ರ, ಬೆಂಗಳೂರಿನ ಎಸ್.ರಘುನಾಥ್, ಸಂಸ್ಕೃತಿ ಸೌರಭ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ.ರಾ.ಬಿ.ನಾಗರಾಜ್, ಹೇಮ ಆನಂದ್ ತಂಡದವರು, ಕನ್ನಡದ ಜನಪ್ರಿಯ ಹಳೆಯ ಚಿತ್ರಗೀತೆಗಳಿಗೆ ಧನಿಯಾಗುವರು.




